ನವದೆಹಲಿ: ನವಜಾತ ಶಿಶುಗಳನ್ನು ಬಾಧಿಸುವ ಅತಿಸಾರ ತೊಂದರೆಗೆ ರೋಟೊವೈರಸ್ ಲಸಿಕೆ ನೀಡುವುದು ಸುರಕ್ಷಿತ. ಇದು ಯಾವುದೇ ಇತರೆ ರೋಗಕ್ಕೆ ಕಾರಣವಾಗುವುದಿಲ್ಲ ಎಂದು ತಿಳಿದು ಬಂದಿದೆ. ಈ ಲಸಿಕೆಯು ವೈರಸನ್ನು ದುರ್ಬಲಗೊಳಿಸಿ, ಪ್ರತಿರಕ್ಷಣೆ ಬಲಗೊಳಿಸುತ್ತದೆ.
ಅಮೆರಿಕದ ಫಿಲಡೆಲ್ಫಿಯಾ ಮಕ್ಕಳ ಆಸ್ಪತ್ರೆಯ ಸಂಶೋಧಕರ ಪ್ರಕಾರ, ಅಮೆರಿಕದಲ್ಲಿ ಅಕಾಲಿಕವಾಗಿ ಜನಿಸಿದ ಮಕ್ಕಳನ್ನು ಎನ್ಐಸಿಯುನಲ್ಲಿ ಇಡಲಾಗುತ್ತದೆ. ಈ ವೇಳೆ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಆದರೆ, ಈ ವೈರಸ್ಗಳನ್ನು ತಡೆಯಬಹುದು. ಕೆಲವರು ವೈರಸ್ ಪ್ರಸರಣ ಭಯದ ಮೇಲೆ ಲಸಿಕೆ ಸ್ವೀಕರಿಸುತ್ತಾರೆ. ಇದನ್ನು ಅರ್ಥೈಸಿಕೊಳ್ಳುವುದಕ್ಕೆ ಸಂಶೋಧಕರು 2021ರ ಜನವರಿಯಿಂದ 2022ರ ಜನವರಿವರೆಗೆ 774 ರೋಗಿಗಳ 3,448 ವಾರದ ಸ್ಯಾಂಪಲ್ ಪಡೆದಿದ್ದಾರೆ. ಶೇ.99.3ರಷ್ಟು ಲಸಿಕೆ ಹಾಕದ ರೋಗಿಗಳಿಗೆ ರೋಗದ ಕುರಿತು ಪಾಸಿಟಿವ್ ಬಂದಿಲ್ಲ. ರೋಟೊವೈರಸ್ ಲಸಿಕೆ ಹಾಕದ ರೋಗಿಗಳಿಗೆ 14 ದಿನಗಳ ನಂತರ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.