Stress Relief Techniques:ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸುವ ಸಮಯದಲ್ಲಿ ನಾವು ಒತ್ತಡ, ಆತಂಕ, ಚಿಂತೆಗೆ ಒಳಗಾಗುತ್ತೇವೆ. ಅವುಗಳನ್ನು ಹೇಗೆ ನಿಯಂತ್ರಿಸುವುದು ಎಂಬುದರ ಬಗ್ಗೆ ತಜ್ಞರು ಹಲವು ಸಲಹೆಗಳನ್ನು ನೀಡುತ್ತಾರೆ. ಒತ್ತಡ ಮತ್ತು ಆತಂಕದಿಂದ ದೂರವಾಗಲು 3-3-3 ನಿಯಮವು ಹೆಚ್ಚಿನ ಜನರಿಗೆ ಉಪಯುಕ್ತವಾಗಿದೆ ಎಂದು ಸಂಶೋಧಕರು ಬಹಿರಂಗಪಡಿಸುತ್ತಾರೆ. 2020ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸೈಕಾಲಜಿಯಲ್ಲಿ (Journal Of Clinical Psychology) ಪ್ರಕಟವಾದ 'ಗ್ರೌಂಡಿಂಗ್ ಟೆಕ್ನಿಕ್ಸ್ ಫಾರ್ ಆ್ಯಂಗ್ಸೈಟಿ ಆ್ಯಂಡ್ ಸ್ಟ್ರೆಸ್: ಎ ಸಿಸ್ಟಮ್ಯಾಟಿಕ್ ರಿವ್ಯೂ'ನಲ್ಲಿ (Grounding techniques For Anxiety And Stress: A Systematic Review) ಈ ನಿಯಮದ ಸಂಪೂರ್ಣವಾಗಿ ವಿವರಿಸಲಾಗಿದೆ.
ನಾವು ತುಂಬಾ ಒತ್ತಡದಲ್ಲಿದ್ದರೂ ಅಥವಾ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಿದ್ದರೂ, ನಮ್ಮ ಸುತ್ತಲಿನ ಮೂರು ವಿಷಯಗಳನ್ನು ನಾವು ಗಮನಿಸಬೇಕು. ನಿದ್ದೆಯಲ್ಲಿದ್ದರೂ ಅದು ಏನು? ಯಾವ ಬಣ್ಣ? ಮತ್ತು ಅದು ಹೇಗಿದೆ? ಎಂದು ಕೇಳಿದರೆ ತದೇಕಚಿತ್ತದಿಂದ ಗಮನಿಸಿಬೇಕು. ಅಂದ್ರೆ, ಒಂದು ವಿಷಯದ ಮೇಲೆ ಏಕಾಗ್ರತೆ ವಹಿಸಿದರೆ, ನಾವು ಆತಂಕವನ್ನು ತೊಡೆದುಹಾಕುತ್ತೇವೆ ಎಂದು ಸಂಶೋಕದರು ಹೇಳುತ್ತಾರೆ.
ಇದರ ಜೊತೆಗೆ ಸುತ್ತಮುತ್ತಲಿನ ಮೂರು ಶಬ್ದಗಳನ್ನು ಗಮನಿಸಬೇಕು. ಅದು ಗಂಟೆಯಾಗಿರಲಿ, ಸೈರನ್ ಆಗಿರಲಿ ಅಥವಾ ಅಂತಿಮವಾಗಿ ಎಸಿಯ ಸದ್ದು ಆಗಿರಲಿ. ಅದು ಹೇಗೆ? ಏಕೆ ಬರುತ್ತಿದೆ ಎಂಬುದು ಗಮನವಿರಲಿ ಎಂದು ತಜ್ಞರು ತಿಳಿಸುತ್ತಾರೆ.
ಅಂತಿಮವಾಗಿ, ತಜ್ಞರು ಹೇಳುವ ಪ್ರಕಾರ, ದೇಹದ ಮೂರು ಭಾಗಗಳನ್ನು ತಿರುಗಿಸಬೇಕಾಗುತ್ತದೆ. ಭುಜಗಳು, ಕಾಲ್ಬೆರಳುಗಳು ಮತ್ತು ತಲೆ ಒಂದೇ ಲಯದಲ್ಲಿ ತಿರುಗಿಸಬೇಕು. ಇದರಿಂದ ಉಂಟಾಗುವ ಚಲನವಲನಗಳತ್ತ ಗಮನಹರಿಸಿದರೆ ಯಾವುದೇ ತೊಂದರೆಯಿಲ್ಲದೆ ಆತಂಕದಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.