ನವದೆಹಲಿ: ಸರಳವಾಗಿ ಬಾಯಿ ಮುಕ್ಕಳಿಸುವಿಕೆ ಪ್ರಕ್ರಿಯೆ ಮೂಲಕ ಆರಂಭಿಕ ಹಂತದಲ್ಲಿ ಗ್ಯಾಸ್ಟಿಕ್ ಕ್ಯಾನ್ಸರ್ ಅಪಾಯವನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಜಾಗತಿಕ ಸಾವಿನಲ್ಲಿ ನಾಲ್ಕನೇ ಕಾರಣವಾಗಿರುವ ಈ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಸುಲಭ ಮಾರ್ಗ ಇದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಅಮೆರಿಕದ ರಟ್ಜರ್ಸ್ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ಸರಳ ಬಾಯಿ ಮುಕ್ಕಳಿಸುವಿಕೆ ತಂತ್ರದ ಮೂಲಕ ವ್ಯಕ್ತಿಯಲ್ಲಿನ ಕ್ಯಾನ್ಸರ್ ಜೊತೆಗೆ ಬಾಯಲ್ಲಿರುವ ಬ್ಯಾಕ್ಟಿರಿಯಾಗಳನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಅಧ್ಯಯನದ ಮಾದರಿಗಳಲ್ಲಿ ಕೆಲವು ಸಣ್ಣ ವ್ಯತ್ಯಾಸಗಳಿಗೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅನೇಕ ಬಾರಿ ಹೊಟ್ಟೆ ಪರಿಸರವು ಬದಲಾವಣೆಗಳಿಗೆ ಒಳಗಾಗಲು ಪ್ರಾರಂಭಿಸಿದ ತಕ್ಷಣ ಸೂಕ್ಷ್ಮ ಜೀವಿಯಲ್ಲಿನ ಬದಲಾವಣೆಗಳು ಸಂಭವಿಸಬಹುದು ಎಂದು ಸೂಚಿಸಲಾಗಿದೆ. ಅದು ಅಂತಿಮವಾಗಿ ಕ್ಯಾನ್ಸರ್ ಆಗಿ ಬದಲಾಗಬಹುದು ಎಂದು ಸಲಹೆ ನೀಡಲಾಗಿದೆ.
ಎಂಡೋಸ್ಕೋಪಿಗೆ ಒಳಗಾದ 98 ರೋಗಿಗಳ ಬಾಯಿಯ ಮಾದರಿಯಲ್ಲಿನ ಬ್ಯಾಕ್ಟೀರಿಯಾ ಮಾದರಿ ಮೇಲೆ ಫಲಿತಾಂಶ ನಿರ್ಧರಿಸಲಾಗಿದೆ. ಇದರಲ್ಲಿ 30 ಮಾದರಿಯಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್, 30ರಲ್ಲಿ ಆರಂಭಿಕ ಹಂತದ ಗ್ಯಾಸ್ಟ್ರಿಕ್ ಪರಿಸ್ಥಿತಿ ಮತ್ತು 38 ರಲ್ಲಿ ಆರೋಗ್ಯಯುತ ನಿಯಂತ್ರಣ ಕಂಡು ಬಂದಿದೆ.