ಕರ್ನಾಟಕ

karnataka

ETV Bharat / health

ಯಾರಿಗೆ ಹೆಚ್ಚಾಗಿ ಸೋರಿಯಾಸಿಸ್ ಸಮಸ್ಯೆ ಕಾಡುತ್ತೆ? ಇದರ ತಡೆಗೆ ವೈದ್ಯರು ಸಲಹೆಗಳು ಹೀಗಿವೆ - Psoriasis Symptoms and Treatment - PSORIASIS SYMPTOMS AND TREATMENT

Psoriasis Symptoms and Treatment: ಸೋರಿಯಾಸಿಸ್ ಸಾಮಾನ್ಯ ಚರ್ಮ ರೋಗಗಳಲ್ಲಿ ಒಂದಾಗಿದೆ. ಸೋರಿಯಾಸಿಸ್ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿದ್ದು, ದೀರ್ಘಕಾಲದ ಸಮಸ್ಯೆಯಾಗಿದೆ. ಚರ್ಮದ ಮೇಲೆ ದದ್ದಿನ ರೀತಿ ಕಾಣಿಸುತ್ತೆ. ಆದ್ರೆ, ಊತದ ಜೊತೆಗೆ ತುರಿಕೆ ಮತ್ತು ನೋವು ಇರುತ್ತದೆ. ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದರೆ, ಇತರ ಕಾಯಿಲೆಗಳು ನಿಮಗೆ ತಗಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಸೋರಿಯಾಸಿಸ್ ಕಾಯಿಲೆ ಬಂದಾಗ ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳೋಣ..

PSORIASIS CAUSES HEART DISEASE  PSORIASIS AVOID FOOD  PSORIASIS CAUSES CANCER  PSORIASIS CAUSES LIVER DISEASE
ಸೋರಿಯಾಸಿಸ್ (ETV Bharat)

By ETV Bharat Health Team

Published : Aug 31, 2024, 4:25 PM IST

Psoriasis Symptoms and Treatment:ನಮ್ಮ ದೈನಂದಿನ ಜೀವನದಲ್ಲಿ ರೋಗಗಳು ಸಾಮಾನ್ಯವಾಗಿವೆ. ಈ ರೋಗಗಳಲ್ಲಿ ಕೆಲವು ತಾತ್ಕಾಲಿಕ ಸಮಸ್ಯೆಗಳಾಗಿದ್ದರೆ, ಇತರೆ ಕೆಲವು ದೀರ್ಘಕಾಲದ ಸಮಸ್ಯೆಗಳಾಗಿವೆ. ಅಂತಹ ದೀರ್ಘಕಾಲದ ಕಾಯಿಲೆಗಳಲ್ಲಿ ಸೋರಿಯಾಸಿಸ್ ಒಂದು. ಸೋರಿಯಾಸಿಸ್ ಚರ್ಮದ ಮೇಲೆ ಬಿಳಿ ಮಾಪಕಗಳೊಂದಿಗೆ ಕೆಂಪು ತೇಪೆಗಳನ್ನು ಕಾಣಿಸುತ್ತವೆ. ಇವುಗಳಿಂದ ತುಂಬಾ ತೊಂದರೆಯಾಗಬಹುದು. ಸೋರಿಯಾಸಿಸ್ ಅನ್ನು ಸಾಮಾನ್ಯ ಚರ್ಮದ ಮೇಲೆ ಮಾತ್ರವಲ್ಲದೆ ಕೂದಲಿನ ಕೆಳಗೆ ಮತ್ತು ಬೆರಳಿನ ಉಗುರುಗಳ ಕೆಳಗೆ ಸಹ ಕಾಣಬಹುದು. ಖ್ಯಾತ ಚರ್ಮರೋಗ ತಜ್ಞೆ ಡಾ.ಚಂದ್ರಾವತಿ ಅವರು ಈ ಕಾಯಿಲೆಯಿಂದ ಕೀಲುನೋವುಗಳ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳೂ ಬೇಗ ಬರಬಹುದು ಎಂದು ಬಹಿರಂಗಪಡಿಸಿದರು.

ಸೋರಿಯಾಸಿಸ್ ಅನ್ನು ಕೇವಲ ಚರ್ಮದ ಕಾಯಿಲೆ ಎಂದು ಪರಿಗಣಿಸಬಾರದು. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದರೆ, ಅದನ್ನು ಕಡಿಮೆ ಮಾಡುವುದು ದೊಡ್ಡ ಸಮಸ್ಯೆಯಲ್ಲ ಎನ್ನುತ್ತಾರೆ ವೈದ್ಯರು. ಈ ಸಮಸ್ಯೆ ನಿಯಂತ್ರಣಕ್ಕೆ ಉತ್ತಮ ಚಿಕಿತ್ಸೆ ಜೊತೆಗೆ ಆರೋಗ್ಯಕರ ಪೌಷ್ಟಿಕ ಆಹಾರ ಸೇವಿಸಿದರೆ ಗುಣಮುಖರಾಗಬಹುದು ಎನ್ನುತ್ತಾರೆ. ಈ ಕ್ರಮದಲ್ಲಿ ಯಾರಿಗೆ ಸೋರಿಯಾಸಿಸ್ ಬರುತ್ತದೆ? ಅದು ಏಕೆ ಬರುತ್ತದೆ? ಇದರಿಂದ ಇತರ ಯಾವ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು? ಈ ರೀತಿಯ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಇದೀಗ ನೋಡೋಣ.

ಯಾರಿಗೆ ಕಾಡುತ್ತೆ ಸೋರಿಯಾಸಿಸ್?: ಸೋರಿಯಾಸಿಸ್ ಎಲ್ಲಾ ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಹೋಲಿಸಿದರೆ ದೊಡ್ಡವರಲ್ಲಿ ಈ ರೋಗ ಹೆಚ್ಚು. ಅಧಿಕ ತೂಕ ಹೊಂದಿರುವವರಿಗೆ ಸೋರಿಯಾಸಿಸ್ ಬರುವ ಸಾಧ್ಯತೆ ಹೆಚ್ಚು. ಸೋಂಕುಗಳು, ಮಲೇರಿಯಾ ಮತ್ತು ಹೃದಯ ಸಮಸ್ಯೆಗಳಂತಹ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳ ಬಳಕೆಯಿಂದಲೂ ಇದು ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಈ ರೋಗವು ಮದ್ಯಪಾನ ಮಾಡುವವರು ಮತ್ತು ಧೂಮಪಾನಿಗಳಲ್ಲಿಯೂ ಸಹ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸೋರಿಯಾಸಿಸ್ ಏಕೆ ಬರುತ್ತದೆ:ವಾತಾವರಣ ಮತ್ತು ಅನುವಂಶಿಕ ದೋಷಗಳಿಂದಲೂ ಸೋರಿಯಾಸಿಸ್ ಉಂಟಾಗುತ್ತದೆ. ಅನುವಂಶಿಕತೆ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಬದಲಾವಣೆಗಳು ಮತ್ತು ತೀವ್ರ ಮಾನಸಿಕ ಒತ್ತಡದಿಂದ ಸೋರಿಯಾಸಿಸ್ ಉಂಟಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯಲ್ಲಿರುವ ಜೀವಕೋಶಗಳು ಆರೋಗ್ಯಕರ ಚರ್ಮದ ಕೋಶಗಳ ಮೇಲೆ ದಾಳಿ ಮಾಡುತ್ತವೆ ಎಂದು ವೈದ್ಯರು ಹೇಳಿದರು.

ಸೋರಿಯಾಸಿಸ್​ನಿಂದ ರೋಗಗಳು ಯಾವವು?:

  • ಸೋರಿಯಾಟಿಕ್ ಸಂಧಿವಾತ
  • ಹೃದಯದ ತೊಂದರೆಗಳು
  • ಮಾನಸಿಕ ಅಸ್ವಸ್ಥತೆ
  • ಆತಂಕ ಮತ್ತು ಒತ್ತಡ
  • ಯಕೃತ್ತಿನ ರೋಗಗಳು
  • ಮೂತ್ರಪಿಂಡದ ಸಮಸ್ಯೆಗಳು
  • ಕಣ್ಣಿನ ಸಮಸ್ಯೆಗಳು
  • ಕ್ಯಾನ್ಸರ್
  • ಬೊಜ್ಜು
  • ಮಧುಮೇಹ
  • ಅಧಿಕ ರಕ್ತದೊತ್ತಡ
  • ಸೋಂಕುಗಳು

ಸೋರಿಯಾಸಿಸ್​ನ ಲಕ್ಷಣಗಳು:

  • ಕೆಂಪು ಚರ್ಮ
  • ತುರಿಕೆ
  • ಒಣ ಚರ್ಮ
  • ರಕ್ತಸ್ರಾವ
  • ಚರ್ಮದಲ್ಲಿ ಬಿರುಕುಗಳು
  • ನಿದ್ರಾಹೀನತೆ

ಸೋರಿಯಾಸಿಸ್ ಗುಣಪಡಿಸಲು ಈ ಆಹಾರಗಳನ್ನು ಸೇವಿಸಬೇಕು:

  • ತಾಜಾ ಹಣ್ಣುಗಳು ಮತ್ತು ತರಕಾರಿಗಳು
  • ಮಾಂಸವು ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿರುತ್ತದೆ
  • ಧಾನ್ಯಗಳು
  • ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುವ ಆಹಾರಗಳು
  • ವಿಟಮಿನ್-ಸಿ ಮತ್ತು ವಿಟಮಿನ್-ಇ
  • ಬೀಟಾ ಕ್ಯಾರೋಟಿನ್, ಸೆಲೆನಿಯಮ್ ಹೊಂದಿರುವ ಆಹಾರಗಳು
  • ಒಮೆಗಾ 3 ಕೊಬ್ಬಿನಾಮ್ಲಗಳು
  • ವಿವಿಧ ಸೊಪ್ಪುಗಳು
  • ಮೀನು
  • ಜೀರಿಗೆ ಮತ್ತು ಶುಂಠಿ
  • ಆಲಿವ್ ಎಣ್ಣೆ

ತ್ಯಜಿಸಬೇಕಾದ ಆಹಾರಗಳು:

  • ಕಾರ್ಬೋಹೈಡ್ರೇಟ್ ಅಧಿಕವಾಗಿರುವ ಆಹಾರವನ್ನು ಸೇವಿಸಬೇಡಿ
  • ಫಾಸ್ಟ್​ ಫುಡ್, ಜಂಕ್ ಫುಡ್
  • ಮಿಠಾಯಿಗಳು
  • ಪಿಜ್ಜಾ, ಬರ್ಗರ್
  • ಬಾರ್ಲಿ, ಗೋಧಿ
  • ಆಲ್ಕೋಹಾಲ್ ತೆಗೆದುಕೊಳ್ಳಬೇಡಿ

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು:https://www.niams.nih.gov/health-topics/psoriasis

ಓದುಗರಿಗೆ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ABOUT THE AUTHOR

...view details