ಊಟ ಮಾಡಿದ ತಕ್ಷಣವೇ ನಿಮಗೆ ಎದೆಯುರಿ ಕಾಣಿಸಿಕೊಳ್ಳುತ್ತಾ? ತಜ್ಞರ ಈ ಮುನ್ನೆಚ್ಚರಿಕೆ ಪಾಲಿಸಿದ್ರೆ ಎಲ್ಲಾ ಮಾಯ! - Heartburn Relief Tips - HEARTBURN RELIEF TIPS
Chest Burning Reduce Tips: ಕೆಲವರಿಗೆ ಊಟದ ನಂತರ ಅಥವಾ ಏನಾದರೂ ತಿಂದ ತಕ್ಷಣವೇ ಹೊಟ್ಟೆ ಮತ್ತು ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರು ತುಂಬಾ ತೊಂದರೆಗೀಡಾಗುತ್ತಾರೆ. ಹಾಗಾದರೆ, ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೆ ಕಾರಣಗಳೇನು? ಈ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ ಅನ್ನೋದನ್ನು ತಿಳಿಯಿರಿ..
Precautions for Reduce Chest Burning:ಸಾಮಾನ್ಯವಾಗಿ ನಾವು ಆಹಾರವನ್ನು ಸೇವಿಸಿದಾಗ ಅದು ಅನ್ನನಾಳದ ಮೂಲಕ ಜೀರ್ಣಾಂಗವನ್ನು ತಲುಪುತ್ತದೆ. ಅನ್ನನಾಳದಲ್ಲಿ ಆಹಾರದ ಜೊತೆಗೆ ಹೊಟ್ಟೆಯಲ್ಲಿ ರೂಪುಗೊಂಡ ಆಮ್ಲವು ಮತ್ತೆ ಮೇಲಕ್ಕೆ ಬರದಂತೆ ತಡೆಯಲು ಕವಾಟವಿದೆ. ಯಾವುದೇ ಕಾರಣಕ್ಕಾಗಿ, ಈ ಕವಾಟವು ಹಾನಿಗೊಳಗಾದಾಗ ಅಥವಾ ಸಡಿಲವಾದಾಗ, ಹೊಟ್ಟೆಯ ಆಮ್ಲವು ಗಂಟಲಿಗೆ ಹಿಂತಿರುಗಲು ಪ್ರಾರಂಭಿಸುತ್ತದೆ. ಇದರಿಂದ ಎದೆಯುರಿ, ಎದೆನೋವಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಕೆ.ರಾಕೇಶ್.
ಈ ಸಮಸ್ಯೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಗ್ಯಾಸ್ಟ್ರೋ ಈಸೋಫೇಜಿಲ್ ರಿಫ್ಲೆಕ್ಸ್ ಕಾಯಿಲೆ' ಎಂದು ಕರೆಯಲಾಗುತ್ತದೆ. ಇದನ್ನು ಆಡುಮಾತಿನಲ್ಲಿ 'GERD' ಎಂದು ಹೇಳಲಾಗುತ್ತದೆ. ಡಾ.ರಾಕೇಶ್ ಪ್ರಕಾರ, ಎದೆಯುರಿ, ಗ್ಯಾಸ್, ಅಸಿಡಿಟಿ ಮತ್ತು ಅಲ್ಸರ್ಗೆ ಮುಖ್ಯ ಕಾರಣಗಳು ಕೆಟ್ಟ ಆಹಾರ ಪದ್ಧತಿ, ಜೀವನಶೈಲಿಯ ಬದಲಾವಣೆ, ದೈಹಿಕ ಚಟುವಟಿಕೆಯ ಕೊರತೆ, ಅಧಿಕ ತೂಕ, ಬೊಜ್ಜು, ಧೂಮಪಾನ ಮತ್ತು ಮದ್ಯಪಾನ. ಅಲ್ಲದೆ.. ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸುವುದು, ಬಣ್ಣ ಲೇಪಿತ ಪದಾರ್ಥಗಳಿರುವ ಪದಾರ್ಥಗಳನ್ನು ಆಗಾಗ ಸೇವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು, ಅತಿಯಾದ ಒತ್ತಡಕ್ಕೆ ಒಳಗಾಗುವುದು, ಇವೆಲ್ಲವೂ ಕವಾಟವನ್ನು ಹಾಳು ಮಾಡಿ GERDಗೆ ಕಾರಣವಾಗುತ್ತವೆ ಎಂದು ಹೇಳುತ್ತಾರೆ ವೈದ್ಯರು.
ಮೇಲಾಗಿ ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಆಗಾಗ ಬರುವುದರಿಂದ ಅನ್ನನಾಳಕ್ಕೆ ಹಾನಿಯಾಗುವ ಸಂಭವವಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ಆಗಾಗ್ಗೆ ಈ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಕ್ಷಣವೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಅಲ್ಲದೆ.. ಒಂದಷ್ಟು ಮುಂಜಾಗ್ರತೆ ವಹಿಸುವುದು ಕಡ್ಡಾಯ ಎನ್ನುತ್ತಾರೆ ವೈದ್ಯರು.
ಕಡ್ಡಾಯವಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?:
ಎದೆಯುರಿ, ಗ್ಯಾಸ್ ಮತ್ತು ಅಲ್ಸರ್ ಇತ್ಯಾದಿಗಳಿಂದ ದೂರವಿರಲು, ಆಹಾರದ ಮುನ್ನೆಚ್ಚರಿಕೆಗಳ ಜೊತೆಗೆ ಆರೋಗ್ಯಕರ ಜೀವನಶೈಲಿಗಾಗಿ ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಅವಶ್ಯಕ.