ಹೈದರಾಬಾದ್: ಮಳೆಗಾಲದಲ್ಲಿ ಕೆಮ್ಮು ಮತ್ತು ಶೀತ ಸಮಸ್ಯೆಗಳು ಸಾಮಾನ್ಯ. ಅಲ್ಲದೇ, ಈ ಸಮಯದಲ್ಲಿ ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ರಸಂಗಳು ಊಟದ ಸವಿಯನ್ನು ಹೆಚ್ಚಿಸುತ್ತವೆ. ಅಲ್ಲದೇ ರಸಂಗಳಿಗೆ ಹಾಕುವ ಪದಾರ್ಥಗಳು ಔಷಧಿ ಗುಣವನ್ನು ಹೊಂದಿದ್ದು, ಆರೋಗ್ಯದ ವೃದ್ಧಿಗೆ ಸಹಾಯ ಮಾಡುತ್ತವೆ. ಅಲ್ಲದೇ, ಈ ರಸಂಗಳು ಕುಡಿಯಲು ಕೂಡ ಉತ್ತಮವಾಗಿದ್ದು, ಇವು ಗಂಟಲಿಗೆ ಹಿತಕರ ಅನುಭವ ನೀಡುತ್ತವೆ. ಅಂತಹ ರಸಂಗಳನ್ನು ಮಾಡುವ ವಿಧಾನದ ಬಗ್ಗೆ ತಿಳಿಯೋಣ..
ಅಜ್ವಾನ್ ರಸಂ ಮಾಡುವ ವಿಧಾನ;ಅಜ್ವಾನ್ ಒಂದು ಸ್ಪೂನ್, ಒಣ ಮೆಣಸು 2, ಜೀರಿಗೆ ಅರ್ಧ ಸ್ಪೂನ್, ಕೊತ್ತಂಬರಿ ಬೀಜ ಒಂದು ಟೀ ಸ್ಪೂನ್, ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ, ಕಪ್ಪು ಮೆಣಸು ಸ್ವಲ್ಪ, ಉಪ್ಪು, ಅರಿಶಿಣ ಚಿಟಿಕೆ, ಮೆಂತ್ಯೆ ಕೆಲವು ಕಾಳು, ಮೆಣಸಿನಕಾಯಿ, ಸಾಸಿವೆ, ಕರಿ ಬೇವಿನ ಸೊಪ್ಪು, ಬೆಳ್ಳುಳ್ಳಿ ನಾಲ್ಕು ಎಸಳು, ರುಚಿಗೆ ತಕ್ಕಷ್ಟು ಹುಣಸೆ ಹುಳಿ
ಮಾಡುವ ವಿಧಾನ: ಮೊದಲಿಗೆ ಜೀರಿಗೆ, ಒಣ ಮೆಣಸಿಕಾಯಿ, ಕೊತ್ತಂಬರಿ ಜೀಜ, ಜೀರಿಗೆಯನ್ನು ಚೆನ್ನಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬಳಿಕ ನಿಂಬೆ ಗಾತ್ರದ ಹುಣಸೆ ಹುಳಿಗೆ ಕಾಲು ಕಪ್ ನೀರು ಹಾಕಿ ಪಕ್ಕದಲ್ಲಿಡಿ.
ಗ್ಯಾಸ್ನಲ್ಲಿ ಪಾತ್ರೆ ಬಿಸಿ ಮಾಡಿ, ಎಣ್ಣೆ ಹಾಕಿ. ಅದಕ್ಕೆ ಮೆಂತ್ಯೆ, ಮೆಣಸು ಹಾಕಿ. ಬಳಿಕ ಜೀರಿಗೆ ಹಾಕಿ, ಜಜ್ಜಿದ ಬೆಳ್ಳುಳ್ಳಿ, ಒಣ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಸೇರಿಸಿ ಬಳಿಕ ಹುಣಸೆ ಹುಳಿ ರಸ ಹಾಕಿ. ಅದಕ್ಕೆ ಅರಿಶಿಣ, ಕಲ್ಲು ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ.
ಬಳಿಕ ಅದಕ್ಕೆ ಮತ್ತಷ್ಟು ನೀರು, ಅಜ್ವಾನ ಪುಡಿ ಸೇರಿಸಿ. ನಂತರ ಸಣ್ಣ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಕುದಿಸಿ. ಇದರ ರುಚಿ ಸವಿಯಲು ಬಿಸಿ ಅನ್ನದೊಂದಿಗೆ ಸೇವಿಸಿ.
ಆರೋಗ್ಯದ ಪ್ರಯೋಜನ:
- ಅಜ್ವಾನ್ ಔಷಧಿ ಗುಣವನ್ನು ಹೊಂದಿದೆ. ಅತಿಸಾರದಿಂದ ಬಳಲುತ್ತಿದ್ದರೆ ಅದಕ್ಕೆ ಇದು ಪರಿಹಾರವಾಗಿದೆ.
- ಇದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಹಸಿವೆ ಹೆಚ್ಚಿಸುತ್ತದೆ. ಹೊಟ್ಟೆ ನೋವು ಕಡಿಮೆ ಮಾಡುತ್ತದೆ.
- ಅಜ್ವಾನ ಪುಡಿಯು ಹಲ್ಲಿನ ಒಸಡನ್ನು ಬಲಶಾಲಿಗೊಳಿಸುತ್ತದೆ.
- ಶೀತದಿಂದ ಬಳಲುತ್ತಿದ್ದರೆ, ಇದರಿಂದ ಉತ್ತಮ ಪರಿಹಾರ ಸಿಗುತ್ತದೆ.
- ಅಜ್ವಾನ ಪುಡಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಕೀಲು ನೋವಿಗೆ ಪರಿಹಾರ ಪಡೆಯಬಹುದು.
- ಅಜ್ವಾನ ಪುಡಿ ರಸಂ ಅನ್ನು ಮಜ್ಜಿಗೆ ಜೊತೆ ಬೆರೆಸಿ ಕುಡಿಯುವುದರಿಂದ ಅಜೀರ್ಣ ಮತ್ತು ಅತಿಸಾರ ಕಡಿಮೆ ಆಗುತ್ತದೆ.
- ಮೂತ್ರದ ಸಮಸ್ಯೆಗೆ ಕೂಡ ಕಡಿಮೆ ಮಾಡುತ್ತದೆ.
- ಹೊಟ್ಟೆ ಉಬ್ಬರದಂತಹ ಉದರದ ಸಮಸ್ಯೆಗಳಿಗೂ ಉತ್ತಮ ಪರಿಹಾರ ಆಗಲಿದೆ.
ಇದನ್ನೂ ಓದಿ: ಹಲವು ಸಮಸ್ಯೆಗಳಿಗೆ ರಾಮಬಾಣ ಈ ಪೌಡರ್; ಮನೆಯಲ್ಲಿ ಸುಲಭವಾಗಿ ತಯಾರಿಸಿ, ಪರಿಹಾರ ಕಂಡುಕೊಳ್ಳಿ