ಹೈದರಾಬಾದ್: ಗರ್ಭಧಾರಣೆ ತಡೆಯಲು ಸದ್ಯಕ್ಕೆ ಪುರಷರಿಗೆ ಇರುವ ಆಯ್ಕೆಗಳು ಎಂದರೆ, ಕಾಂಡೋಮ್ ಮತ್ತು ವ್ಯಾಸೆಕ್ಟಮಿ ಸರ್ಜರಿಯಾಗಿದೆ. ಆದರೆ, ಶೀಘ್ರದಲ್ಲೇ ಹೊಸ ಚಿಕಿತ್ಸಾ ವಿಧಾನವೊಂದು ಲಭ್ಯವಾಗಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದ ಸಂಶೋಧಕರು ಅಭಿವೃದ್ಧಿ ನಡೆಸುತ್ತಿದ್ದಾರೆ. ಗ್ಲೂ ಲಿಕ್ಷಿಡ್ (ಗ್ಲೂ) ರೀತಿಯ ಕ್ರೀಂ ಇದಾಗಿದೆ. ಇದನ್ನು ಪುರುಷರು ತಮ್ಮ ಭುಜಗಳಿಗೆ ಹಚ್ಚಿದರೆ ಸಾಕು ವಾರದೊಳಗೆ ಅವರ ಫಲವತ್ತತೆ ಕಡಿಮೆಯಾಗುತ್ತದೆ. ಗರ್ಭ ತಡೆಯುವ ನಿಟ್ಟಿನಲ್ಲಿ ಪುರಷರಿಗೆ ಇರುವ ಉತ್ತಮವಾದ ಮತ್ತೊಂದು ಆಯ್ಕೆ ಇದಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ವಿವರವಾದ ಅಧ್ಯಯನ ನಡೆಸಲಾಗಿದ್ದು, ಈ ಜೆಲ್ ಅನ್ನು ಎನ್ಇಎಸ್/ಟಿ ಎಂದು ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಎನ್ಇಎಸ್/ಟಿಯಲ್ಲಿ ನೆಸ್ಟೊರಾನ್ ಮತ್ತು ಟೆಸ್ಟೊಸ್ಟೆರೊನ್ ಅಂಶಗಳನ್ನು ಪ್ರಮುಖವಾಗಿ ಸಂಯೋಜಿಸಲಾಗಿದೆ. ನೆಸ್ಟೊರಾನ್ ಪ್ರೊಜೆಸ್ಟರಾನ್‌ನ ಸಂಶ್ಲೇಷಿತ ಆವೃತ್ತಿಯಾಗಿದ್ದು, ಗರ್ಭಧಾರಣೆ ಮತ್ತು ಇತರ ಸಂತಾನೋತ್ಪತ್ತಿ ಕಾರ್ಯಗಳಿಗೆ ಕಾರಣವಾಗುವ ಹಾರ್ಮೋನ್ ಇದಾಗಿದೆ. ಮಹಿಳೆಯರಲ್ಲಿ ಗರ್ಭಧಾರಣೆ ಹಾರ್ಮೋನ್‌ಗಳನ್ನು ನಿಯಂತ್ರಿಸಲು ನೆಸ್ಟೊರಾನ್‌ನಂತಹ ಔಷಧಗಳನ್ನು ಬಳಸಲಾಗುತ್ತದೆ. ಇಂತಹ ಔಷಧವನ್ನು ಪುರುಷರಿಗೆ ನೀಡಿದಾಗ ಇದು ವೃಷಣಗಳಲ್ಲಿನ ಟೆಸ್ಟೋಸ್ಟೆರಾನ್ ನಂತಹ ಫಲವತ್ತತೆ ಹಾರ್ಮೋನುಗಳ ಮಟ್ಟ ಕಡಿಮೆ ಮಾಡುತ್ತದೆ. ಫಲವಾಗಿ ಅವರ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಔಷಧ ರಕ್ತದಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಪುರುಷರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ನೆಸ್ಟೋರೋನ್ ಔಷಧಿಯನ್ನು ಪುರುಷರಿಗೆ ನೀಡುವುದರಿಂದ ಇತರ ಕೆಲವು ಅಡ್ಡ ಪರಿಣಾಮ ಬೀರುತ್ತದೆ.
ಪುರುಷರಲ್ಲಿನ ಪುರುಷರ ರಕ್ತದಲ್ಲಿನ ಹಾರ್ಮೋನ್ ಮಟ್ಟವನ್ನು ಸ್ಥಿರವಾಗಿಡಲು, ಜೆಲ್ ಮೂಲಕ ಟೆಸ್ಟೋಸ್ಟೆರಾನ್ ಅನ್ನು ಚುಚ್ಚುಮದ್ದು ಮಾಡುವುದರಿಂದ ತಾತ್ಕಾಲಿಕವಾಗಿ ಫಲವತ್ತತೆ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್ ಡೆವಲಪ್‌ಮೆಂಟ್ (ಎನ್ಐಸಿಎಚ್ಡಿ), ಅಮೆರಿಕದ ಸರ್ಕಾರಿ ಸಂಸ್ಥೆಗಳು ಅನೇಕ ಸಂಘಸಂಸ್ಥೆಯ ಸಹಯೋಗದೊಂದಿಗೆ ಈ ಜೆಲ್ ಅಭಿವೃದ್ಧಿ ಮಾಡುತ್ತಿದೆ. ಸದ್ಯ ಎನ್ಇಎಸ್/ಟಿ ಜೆಲ್‌ನಲ್ಲಿ 2ಬಿ ಹಂತದ ಪ್ರಯೋಗ ನಡೆಯುತ್ತಿವೆ. ಈ ಪ್ರಯೋಗವು ಪೂರ್ಣಗೊಳ್ಳುವ ಮೊದಲೇ, ಸಂಶೋಧಕರು ಲಭ್ಯವಿರುವ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ. ಈ ಜೆಲ್ ಫಲಿತಾಂಶ ಭರವಸೆದಾಯಕವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.