ಸಿಂಕ್‌ನಲ್ಲಿ ನೀರು ಜಾಮ್ ಆಗುವ ಸಮಸ್ಯೆಯನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ಆದಾಗ್ಯೂ, ನೈಸರ್ಗಿಕ ಸಲಹೆಗಳೊಂದಿಗೆ ನೀವು ಸಿಂಕ್ ಬ್ಲಾಕಿಂಗ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅಲ್ಲದೇ, ಸಿಂಕ್‌ನಿಂದ ಬರುವ ದುರ್ವಾಸನೆ ದೂರವಾಗುತ್ತದೆ ಎಂದು ಪರಿಣಿತರು ಹೇಳುತ್ತಾರೆ.
ನಿಂಬೆ, ಈನೋ: ನಿಂಬೆ, ಈನೋ ಮಿಶ್ರಣವು ಸಿಂಕ್ಅನ್ನು ಸ್ವಚ್ಛಗೊಳಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದಂತೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಸ್ವಲ್ಪ ಈನೋ ಪುಡಿಯನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸಿಂಕ್‌ನಲ್ಲಿ ಹಾಕಿ ಮತ್ತು ಸ್ಕ್ರಬ್ಬರ್ ಸಹಾಯದಿಂದ ಸ್ಕ್ರಬ್ ಮಾಡಿ ಅಷ್ಟೇ. ಸಿಂಕ್‌ನಲ್ಲಿರುವ ಧೂಳು, ಜಿಡ್ಡಿನ ಕಲೆಗಳೆಲ್ಲ ನಿವಾರಣೆಯಾಗಿ ಹೊಸದರಂತೆ ಹೊಳೆಯುತ್ತದೆ ಎನ್ನುತ್ತಾರೆ. ಇದು ಕೆಟ್ಟ ವಾಸನೆಯನ್ನು ಸಹ ತೆಗೆದುಹಾಕುತ್ತದೆ ಎನ್ನುತ್ತಾರೆ ಪರಿಣಿತರು.
ಬಿಸಿ ನೀರು: ಸಿಂಕ್ ಪೈಪ್‌ನಲ್ಲಿ ಸಿಲುಕಿರುವ ಎಲ್ಲ ತ್ಯಾಜ್ಯವನ್ನು ಬಿಸಿ ನೀರಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ದೊಡ್ಡ ಬಟ್ಟಲಿನಲ್ಲಿ ನೀರನ್ನು ಬಿಸಿ ಮಾಡಿ ನಂತರ ಎಚ್ಚರಿಕೆಯಿಂದ ಸ್ವಲ್ಪ ನೀರು ತೆಗೆದುಕೊಂಡು ಸಿಂಕ್ಲ್ಲಿ ಸುರಿಯಿರಿ. ಈ ರೀತಿ ಮೂರ್ನಾಲ್ಕು ಬಾರಿ ಮಾಡಿದರೆ, ಸಿಂಕ್ ಪೈಪ್‌ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯವೆಲ್ಲ ಹೋಗುತ್ತದೆ. ಅಲ್ಲದೇ, ಈ ಬಿಸಿನೀರನ್ನು ಸುರಿಯುವುದರಿಂದ ಜಿಡ್ಡು ಕೂಡ ನಿವಾರಣೆಯಾಗಿ ಸಿಂಕ್ ಸ್ವಚ್ಛವಾಗಿ ಕಾಣುತ್ತದೆ ಎಂದೇ ಹೇಳಲಾಗುತ್ತದೆ.
ನಿಂಬೆ, ಉಪ್ಪು:ಸಿಂಕ್ ನೀರು ನಿಂತಾಗ ಕೆಟ್ಟ ವಾಸನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಉಪ್ಪು ಮತ್ತು ನಿಂಬೆ ರಸದ ಮಿಶ್ರಣವು ತುಂಬಾ ಸಹಾಯ ಮಾಡುತ್ತದೆ. ಮೊದಲು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಅದರಲ್ಲಿ ನಿಂಬೆ ರಸವನ್ನು ಹಿಂಡಿ. ಬಳಿಕ ಅದನ್ನು ಸಿಂಕ್‌ನಲ್ಲಿ ಸುರಿದು ರಾತ್ರಿಯಿಡೀ ಬಿಡಿ. ಅಗತ್ಯವಿದ್ದರೆ ಸ್ವಲ್ಪ ಅಡಿಗೆ ಸೋಡಾವನ್ನು ಸಹ ಸೇರಿಸಬಹುದು. ಮರುದಿನ ಬೆಳಗ್ಗೆ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ. ಸಿಂಕ್ ಹೊಸ ರೀತಿಯಲ್ಲಿ ಹೊಳೆಯುತ್ತದೆ. ಇದರಿಂದ ದುರ್ವಾಸನೆಯೂ ಮಾಯವಾಗುತ್ತದೆ ಮತ್ತು ಒಳ್ಳೆಯ ವಾಸನೆ ಬರುತ್ತದೆ ಎಂದು ಪರಿಣಿತರು ಹೇಳುತ್ತಾರೆ.