Jowar Roti Benefits for Diabetes:ಇತ್ತೀಚಿನ ದಿನಗಳಲ್ಲಿ ಅನೇಕರು ಮೊದಲಿನಂತೆಯೇ ಹಳೆಯ ಆಹಾರ ಪದ್ಧತಿ ಅನುಸರಿಸಲು ಮುಂದಾಗುತ್ತಿದ್ದಾರೆ. ಜೋಳ, ಗೋಧಿ, ದ್ವಿದಳ ಹಾಗೂ ಸಿರಿಧಾನ್ಯಗಳನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಜೋಳದಿಂದ ಮಾಡಿದ ಆಹಾರಗಳನ್ನು ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿ ಜೋಳದ ರೊಟ್ಟಿಯು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಉಪಯುಕ್ತವಾಗಿದೆ. ಇದು ಶುಗರ್ ನಿಯಂತ್ರಣ ಮಾತ್ರವಲ್ಲದೇ ಇತರ ಪ್ರಯೋಜನಗಳನ್ನು ಒಳಗೊಂಡಿದೆ.
ಜೋಳದ ರೊಟ್ಟಿ ಮಧುಮೇಹಿಗಳಿಗೆ ಉತ್ತಮ:ವಿಶೇಷವಾಗಿ ಜೋಳದ ರೊಟ್ಟಿ ಮಧುಮೇಹಿಗಳಿಗೆ ಒಳ್ಳೆಯ ಆಹಾರ. ಇದರ ಕಡಿಮೆ ಗ್ಲೈಸೆಮಿಕ್ ಗುಣದಿಂದಾಗಿ ಗ್ಲೂಕೋಸ್ ಮಟ್ಟಗಳು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಶುಗರ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಇನ್ಸುಲಿನ್ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಉಪಯುಕ್ತವಾಗಿದೆ. ಜೋಳದಲ್ಲಿ ನಾರಿನಂಶ ಹೆಚ್ಚಿದ್ದು, ಇದು ಅತಿಯಾದ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಸ್ವಲ್ಪ ತಿಂದರೂ ಹೊಟ್ಟೆ ತುಂಬುತ್ತದೆ ಎಂದು ತಜ್ಞರು ಹೇಳುತ್ತಾರೆ.
"ಜೋಳದಲ್ಲಿ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ರೂಪದಲ್ಲಿ ನಿಧಾನವಾಗಿ ರಕ್ತವನ್ನು ಪ್ರವೇಶಿಸುತ್ತವೆ. ಪರಿಣಾಮವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ಇದರಿಂದಾಗಿ ಶುಗರ್ ಇರುವವರು ಜೋಳದಿಂದ ಮಾಡಿರುವ ಸೇವಿಸುವುದು ಒಳ್ಳೆಯದು. ಜೋಳದಲ್ಲಿ ಪ್ರೋಟೀನ್‌ಗಳು ಸಮೃದ್ಧವಾಗಿವೆ. ಜೋಳದ ರೊಟ್ಟಿಯು ಮಧುಮೇಹ ಇರುವವರಿಗೆ ಮಾತ್ರವಲ್ಲದೇ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೂ ಉತ್ತಮ ಆಹಾರವಾಗಿದೆ. ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಅನಗತ್ಯ ಕ್ಯಾಲೊರಿಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದರಲ್ಲಿ ವಿವಿಧ ರೀತಿಯ ವಿಟಮಿನ್ ಕೊರತೆಗಳನ್ನು ಕಡಿಮೆ ಮಾಡುತ್ತದೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೂರಕವಾಗಿದೆ"