New Way to Detect Obesity:56 ಜಾಗತಿಕ ತಜ್ಞರ ತಂಡ ಬೊಜ್ಜು ರೋಗನಿರ್ಣಯಕ್ಕೆ ವಿನೂತನ ವಿಧಾನ ಪ್ರಸ್ತಾಪಿಸಿದ್ದು, ಇದು ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಮೀರಿ ಏಕೈಕ ಅಳತೆಯಾಗಿದೆ. ಬೊಜ್ಜು ಗುರುತಿಸುವ ಮತ್ತು ಚಿಕಿತ್ಸೆ ನೀಡುವ ಹೆಚ್ಚು ಸೂಕ್ಷ್ಮವಾದ, ವೈಯಕ್ತಿಕಗೊಳಿಸಿದ ಮಾರ್ಗವನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ದಿ ಲ್ಯಾನ್ಸೆಟ್ ಡಯಾಬಿಟಿಸ್ ಮತ್ತು ಎಂಡೋಕ್ರೈನಾಲಜಿಯಲ್ಲಿ 75 ವೈದ್ಯಕೀಯ ಸಂಸ್ಥೆಗಳ ಆಯೋಗವು ವಿಷಯವನ್ನು ಪ್ರಕಟಿಸಿದೆ.
ಆಯೋಗದ ಅಧ್ಯಕ್ಷತೆ ವಹಿಸಿದ್ದ ಕಿಂಗ್ಸ್ ಕಾಲೇಜ್ ಲಂಡನ್‌ನ ಪ್ರೊಫೆಸರ್ ಫ್ರಾನ್ಸೆಸ್ಕೊ ರುಬಿನೊ ಪ್ರತಿಕ್ರಿಯಿಸಿ, ''ಬೊಜ್ಜು ಒಂದು ರೋಗವೇ ಎಂಬ ಪ್ರಶ್ನೆಯು ದೋಷಪೂರಿತವಾಗಿದೆ. ಪುರಾವೆಗಳು ಹೆಚ್ಚು ಸೂಕ್ಷ್ಮವಾದ ವಾಸ್ತವವನ್ನು ತೋರಿಸುತ್ತವೆ. ಬೊಜ್ಜು ಹೊಂದಿರುವ ಕೆಲವು ವ್ಯಕ್ತಿಗಳು ದೀರ್ಘಕಾಲದವರೆಗೆ ಆರೋಗ್ಯವಾಗಿರುತ್ತಾರೆ. ಆದರೆ, ಇನ್ನು ಕೆಲವರು ಹೆಚ್ಚುವರಿ ದೇಹದ ಕೊಬ್ಬಿನಿಂದಾಗಿ ತೀವ್ರ ಅನಾರೋಗ್ಯ ಅನುಭವಿಸುತ್ತಾರೆ'' ಎಂದು ತಿಳಿಸಿದರು.
ಆಯೋಗದ ವಿಧಾನವು ಮುಖ್ಯವಾಗಿ ಎರಡು ವರ್ಗಗಳ ನಡುವೆ ವ್ಯತ್ಯಾಸ ತೋರಿಸುತ್ತದೆ. ಕ್ಲಿನಿಕಲ್ ಬೊಜ್ಜು, ಇದರಲ್ಲಿ ಹೆಚ್ಚುವರಿ ಕೊಬ್ಬು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮತ್ತೊಂದು, ಪ್ರಿ-ಕ್ಲಿನಿಕಲ್ ಬೊಜ್ಜು, ಇದರಲ್ಲಿ ವ್ಯಕ್ತಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆ. ಆದರೆ, ಅವರು ಪ್ರಸ್ತುತ ಯಾವುದೇ ಅನಾರೋಗ್ಯವನ್ನು ಹೊಂದಿರುವುದಿಲ್ಲ ಎಂದು ತಿಳಿದು ಬರುತ್ತದೆ.
BMI ಮಾತ್ರ ಸಾಕಾಗೋದಿಲ್ಲ:ದಶಕಗಳಿಂದ BMI ಬೊಜ್ಜನ್ನು ಪತ್ತೆಹಚ್ಚಲು ಪ್ರಮುಖ ಸಾಧನವಾಗಿದೆ. ಆದರೆ, ಇದು ಗಮನಾರ್ಹವಾದ ನ್ಯೂನತೆಗಳನ್ನು ಹೊಂದಿದೆ. BMI ಎತ್ತರಕ್ಕೆ ಹೋಲಿಸಿದರೆ ತೂಕವನ್ನು ಅಳೆಯುತ್ತದೆ. ಆದರೆ, ಅಂಗಾಂಗಳಿಗೆ ಹಂಚಿಕೆಯಾಗಿರುವ ಕೊಬ್ಬು ಅಥವಾ ವೈಯಕ್ತಿಕ ಆರೋಗ್ಯ ಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಉದಾಹರಣೆಗೆ, ಅಂಗಗಳ ಸುತ್ತಲೂ ಹೆಚ್ಚುವರಿ ಕೊಬ್ಬನ್ನು ಹೊಂದಿರುವ ಯಾರಾದರೂ (ಮಧುಮೇಹ ಮತ್ತು ಹೃದಯ ವೈಫಲ್ಯದಂತಹ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶ) ಸಾಮಾನ್ಯ BMI ಹೊಂದಿರಬಹುದು. ಇದಕ್ಕೆ ವಿರುದ್ಧವಾಗಿ, ಹೆಚ್ಚಿನ BMI ಆದರೆ, ಆರೋಗ್ಯಕರ ಅಂಗಗಳ ಕಾರ್ಯ ಚಟುವಟಿಕೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ತಪ್ಪಾಗಿ ರೋಗನಿರ್ಣಯ ಮಾಡುವ ಸಾಧ್ಯತೆಯಿದೆ.
ಕೊಲೊರಾಡೋ ವಿಶ್ವವಿದ್ಯಾಲಯದ ಆಯುಕ್ತ ಪ್ರೊಫೆಸರ್ ರಾಬರ್ಟ್ ಎಕೆಲ್ಮಾತನಾಡಿ, "BMI ಅನ್ನು ಮಾತ್ರ ಅವಲಂಬಿಸುವುದು ಸಮಸ್ಯಾತ್ಮಕವಾಗಿದೆ. ಸೊಂಟ ಅಥವಾ ಅಂಗಗಳಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ಹೆಚ್ಚುವರಿ ದೇಹದ ಕೊಬ್ಬನ್ನು ಹೊಂದಿರುವ ಜನರು ಚರ್ಮದ ಕೆಳಗೆ ಸಂಗ್ರಹವಾಗಿರುವ ಕೊಬ್ಬನ್ನು ಹೊಂದಿರುವವರಿಗಿಂತ ಹೆಚ್ಚಿನ ಆರೋಗ್ಯ ಅಪಾಯಗಳನ್ನು ಎದುರಿಸುತ್ತಾರೆ. ಆದ್ರೆ, BMI ಈ ಪ್ರಕರಣಗಳ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ" ಎಂದು ವಿವರಿಸುತ್ತಾರೆ.
ಸ್ಥೂಲಕಾಯತೆ ಪತ್ತೆ ಹಚ್ಚಲು ನೂತನ ಮಾರ್ಗ:ಪ್ರಸ್ತಾವಿತ ಚೌಕಟ್ಟು BMI ಅನ್ನು ಹೆಚ್ಚುವರಿ ಅಳತೆಗಳೊಂದಿಗೆ ಸಂಯೋಜಿಸುತ್ತದೆ.
- ಹಂಚಿಯಾಗಿರುವ ಕೊಬ್ಬನ್ನು ನಿರ್ಣಯಿಸಲು ಸೊಂಟದ ಸುತ್ತಳತೆ, ಇಲ್ಲವೇ ಸೊಂಟದಿಂದ ಹಿಪ್ ಅನುಪಾತವಾಗಿದೆ.
- DEXA ಸ್ಕ್ಯಾನ್‌ಗಳಂತಹ ಸುಧಾರಿತ ಸಾಧನಗಳನ್ನು ಬಳಸಿಕೊಂಡು ನೇರ ಕೊಬ್ಬಿನ ಅಳತೆಗಳು ಮಾಡಬಹುದು.
- ಉಸಿರಾಟದ ತೊಂದರೆ, ಕೀಲು ನೋವು ಅಥವಾ ಚಯಾಪಚಯ ಅಸ್ವಸ್ಥತೆಗಳಂತಹ ಕ್ಲಿನಿಕಲ್ ಸ್ಥೂಲಕಾಯದ ಲಕ್ಷಣಗಳನ್ನು ಗುರುತಿಸಲು ಆರೋಗ್ಯ ಮೌಲ್ಯಮಾಪನಗಳು ತುಂಬಾ ಅವಶ್ಯವಾಗಿದೆ.