ಹೈದರಾಬಾದ್:ಡಯಾಲಿಸಿಸ್ ಕೇಂದ್ರಗಳಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರ ಗಮನಹರಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಎಲ್ಲ ಡಯಾಲಿಸಿಸ್ ಕೇಂದ್ರಗಳನ್ನು ನಿಮ್ಸ್ ಮತ್ತು ಗಾಂಧಿ ಆಸ್ಪತ್ರೆಗಳೊಂದಿಗೆ ಜೋಡಿಸಿ, ಸೇವೆಗಳನ್ನು ಸುಧಾರಿಸಲು ವಿಶೇಷ ಕಾಳಜಿ ವಹಿಸುತ್ತಿದೆ. ಬಡ ರೋಗಿಗಳಿಗೆ ನಿಮ್ಸ್, ಗಾಂಧಿ ಮತ್ತು ಉಸ್ಮಾನಿಯಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 400ರಿಂದ 600 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.
ಏನಿದು ಡಯಾಲಿಸಿಸ್:ಮೂತ್ರಪಿಂಡದ ಹಾನಿಗೆ ಒಳಗಾದ ಬಳಿಕ ಅವು ದೇಹದ ತ್ಯಾಜ್ಯವನ್ನು ಶೋಧಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಈ ಹಿನ್ನೆಲೆ ಯಂತ್ರಗಳ ಮೂಲಕ ರೋಗಿಯ ರಕ್ತದಿಂದ ತ್ಯಾಜ್ಯ ಮತ್ತು ಇತರ ದ್ರವಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯಲಾಗುತ್ತದೆ. ಮೂತ್ರಪಿಂಡ ಹಾನಿಗೊಳಗಾದ ರೋಗಿಯು ವಾರಕ್ಕೆ ಕನಿಷ್ಠ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕು. ಈ ಸೇವೆಗಳನ್ನು ಆರೋಗ್ಯಶ್ರೀ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಈ ಡಯಾಲಿಸಿಸ್ ಚಿಕಿತ್ಸೆ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಮತ್ತು ವಿಭಾಗೀಯ ಕೇಂದ್ರಗಳಲ್ಲಿ ಇದ್ದರೂ ಇಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಇದರ ಪ್ರಮಾಣ ಹೈದರಬಾದ್ ನಗರದಲ್ಲಿ ಶೇ 8ರಷ್ಟಿದ್ದರೆ, ಇತರೆ ಜಿಲ್ಲೆಗಳಲ್ಲಿ ಶೇ.15ರಷ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವರು ಪರ್ಯಾಯ ಚಿಕಿತ್ಸೆಗಳನ್ನು ಅವಲಂಬಿಸಿದ್ದಾರೆ. ಮತ್ತೆ ಕೆಲವು ಮಂದಿ ತಮ್ಮ ಮೂತ್ರ ಪಿಂಡ ಸಂಪೂರ್ಣವಾಗಿ ಹಾನಿಯಾಗುವವರೆಗೆ ಇದರ ಅರಿವನ್ನು ಹೊಂದಿರುವುದಿಲ್ಲ. ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಹೊಂದಿದ್ದು, ಔಷಧವನ್ನು ತೆಗೆದುಕೊಳ್ಳದ ಮಂದಿಯಲ್ಲಿ ಮೂತ್ರಪಿಂಡ ಬೇಗ ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ಸಮಸ್ಯೆ ಬೇಗ ಬಗೆಹರಿದ ಬಳಿಕವೂ ಡಯಾಲಿಸಿಸ್ ಪ್ರಯೋಜನವಾಗುವುದಿಲ್ಲ. ಇಂತಹ ಶೇ 40ರಷ್ಟು ಮಂದಿ ಮೊದಲ ಆರು ತಿಂಗಳೊಳಗೆ ಸಾವನ್ನಪ್ಪುತ್ತಾರೆ.