ಬೆಂಗಳೂರು: ದೇಶಾದ್ಯಂತ ರಣಬಿಸಿಲು ಜನರನ್ನು ಬಳಲಿ ಬೆಂಡಾಗುವಂತೆ ಮಾಡಿದೆ. ಕೆಲವು ನಗರಗಳಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ ತೀವ್ರ ಆತಂಕ ಉಂಟು ಮಾಡಿದೆ. ಬಿಸಿಲ ತಾಪಕ್ಕೆ ಕಟ್ಟಡಗಳು ಬೆಂಕಿಯಲ್ಲಿ ಬೆಂದಂತೆ ಕುದಿಯುತ್ತಿವೆ. ಇದರಿಂದ ವಿಪರೀತ ಉಷ್ಣ ಉಂಟಾಗಿ ಮನೆಯೊಳಗಿರಲೂ ಕಷ್ಟಪಡುವಂತಾಗಿದೆ.
ಮನೆಯ ಕೋಣೆಯನ್ನು ತಂಪಾಗಿಡಲು ಏರ್ ಕೂಲರ್, ಏರ್ ಕಂಡೀಷನರ್ (ಎಸಿ)ಗಳನ್ನು ಬಳಸುತ್ತೇವೆ. ಆದಾಗ್ಯೂ ಕೊಠಡಿಗಳು ತಂಪಾಗುವುದಿಲ್ಲ. ಎಸಿ ಇದ್ದವರಿಗೆ ಬಿಸಿಲ ಸಮಸ್ಯೆ ಇರುವುದಿಲ್ಲ. ಆದರೆ, ಕೂಲರ್, ಫ್ಯಾನ್ಸ್ ಬಳಸುವವರು ನಿತ್ಯವೂ ಕಷ್ಟಪಡಬೇಕು. ಕೂಲರ್ ಪಕ್ಕದಲ್ಲೇ ಕೂತರೂ ತಣ್ಣನೆಯ ಅನುಭವ ಸಿಗುವುದಿಲ್ಲ. ಕೋಣೆಯಲ್ಲಿ ಬಿಸಿ ಕೂಲರ್ ಆನ್ ಮಾಡಿದರೂ ಇರುತ್ತದೆ.
ಬಿಸಿಲು ಪ್ರಖರವಾಗಿರುವ ಕೋಣೆಯ ಉಷ್ಣತೆ ಹೆಚ್ಚಿರುತ್ತದೆ. ಇಡೀ ಕೋಣೆ ಶಖೆಯಿಂದ ತುಂಬಿರುತ್ತದೆ. ಬೆವರುವುದು, ಬಿಸಿಗಾಳಿ, ದೇಹ ಜಿಡ್ಡು ಜಿಡ್ಡಾಗಿರುತ್ತದೆ. ಕೊಠಡಿಯಲ್ಲಿರುವ ಉಷ್ಣ ಹೊರಗೆ ಹೋಗದೇ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು. ನಾವು ಮಾಡುವ ಸಣ್ಣಪುಟ್ಟ ಇಂತಹ ವಾತಾವರಣಕ್ಕೆ ಕಾರಣ. ಅದಕ್ಕಾಗಿಯೇ ವಾಟರ್ ಕೂಲರ್ ಆನ್ ಮಾಡಿದಾಗ ಕೆಲ ಎಚ್ಚರಿಕೆ ವಹಿಸಿದರೆ, ಕೋಣೆ ತಂಪಾಗಿಟ್ಟುಕೊಳ್ಳಲು ಸಾಧ್ಯ.
ಕಿಟಕಿ, ಬಾಗಿಲ ಬಳಿ ಕೂಲರ್ ಇಡಬೇಕು:ಬಹುತೇಕರು ಕೋಣೆಯಲ್ಲಿ ಯಾವುದೋ ಒಂದು ಭಾಗದಲ್ಲಿ ಕೂಲರ್ ಇಡುತ್ತಾರೆ. ಇದು ಆನ್ ಆಗಿದ್ದರೂ ತಣ್ಣನೆಯ ಅನುಭವ ಸಿಗುವುದಿಲ್ಲ. ಹಾಗಾಗಿ, ಕೂಲರ್ ಅನ್ನು ಮನೆಯ ಕಿಟಕಿ ಅಥವಾ ಬಾಗಿಲ ಬಳಿ ಇಡಬೇಕು. ಶುದ್ಧ ಗಾಳಿ ಬೀಸುವುದರಿಂದ ಕೋಣೆಯಲ್ಲಿನ ಬಿಸಿ ಅಂಶ ಕಡಿಮೆಯಾಗುತ್ತದೆ.