ಕರ್ನಾಟಕ

karnataka

ETV Bharat / health

ಗೋಧಿ ಹಿಟ್ಟು ಕಲಸುವಾಗ ಈ ತಪ್ಪಿನಿಂದಲೇ ಮೃದುತ್ವ ಕಳೆದುಕೊಳ್ಳುತ್ತದೆ.. ಉಬ್ಬಿದ ಚಪಾತಿಗಾಗಿ ಹೀಗೆ ಮಾಡಿ! - how to make soft chapati - HOW TO MAKE SOFT CHAPATI

ಚಪಾತಿ ಮಾಡುವುದು ಒಂದು ಕಲೆ ಆಗಿದ್ದು, ಇದು ಎಲ್ಲರಿಗೂ ಸುಲಭವಾಗಿ ಸಿದ್ಧಿಸುವುದಿಲ್ಲ. ಹಾಗಾದ್ರೆ ಮೃದುವಾದ, ಉಬ್ಬಿದ ಚಪಾತಿಗೆ ಈ ಸರಳ ಸಲಹೆಯನ್ನು ಪಾಲಿಸಿ.

how-to-make-soft-chapati-here-is-the-simple-tips-to-make
ಮೃದು ಚಪಾತಿಗೆ ಟಿಪ್ಸ್​ ((ಈಟಿವಿ ಭಾರತ್​​))

By ETV Bharat Karnataka Team

Published : Jun 22, 2024, 12:40 PM IST

Updated : Jun 22, 2024, 10:40 PM IST

ಹೈದರಾಬಾದ್​: ಜಾಹೀರಾತಿನಲ್ಲಿ ಕಾಣುವಂತೆ ಮೃದುವಾದ ಉಬ್ಬಿದ ಚಪಾತಿ ತಿನ್ನುವ ಬಯಕೆ ಇದ್ದರೂ, ಇದನ್ನು ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಗಡಿಬಿಡಿಯಲ್ಲಿ ಉಬ್ಬುವುದು ಹೋಗಲಿ, ಮೃದುವಾದರೆ ಸಾಕಪ್ಪ ಎನ್ನುವಂತೆ ಆಗುತ್ತದೆ. ಅಲ್ಲದೇ, ಅದಕ್ಕೆ ಎಷ್ಟೇ ಕಸರತ್ತು ಮಾಡಿದರೂ ವಿಫಲವಾಗುತ್ತೇವೆ. ಹಾಗಾದರೆ ಚಿಂತೆ ಬೇಡ. ಅದಕ್ಕಾಗಿ ಸರಳ ಪರಿಹಾರವೊಂದು ಇಲ್ಲಿದೆ. ಅದರಂತೆ ಚಪಾತಿ ಮಾಡಿದಲ್ಲಿ ಅದು ನಿಮ್ಮ ಬಾಯಲ್ಲಿಟ್ಟರೆ ಕರಗುವಷ್ಟು ಮೃದು ಮತ್ತು ಹಗುರವಾಗಿ ಇರುತ್ತದೆ.

ಚಪಾತಿ ಮೃದುವಾಗಲು ಹಿಟ್ಟನ್ನು ಕಲಸುವಾಗ ಅದಕ್ಕೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ. ಇದರಿಂದ ಚಪಾತಿ ಮೃದುವಾಗುತ್ತದೆ ಎನ್ನುತ್ತಾರೆ ತಜ್ಞರು.

  • ಚಪಾತಿ ಹಿಟ್ಟು ಕಲಸುವಾಗ ಮಾಡುವ ತಪ್ಪುಗಳೇ ಅನೇಕ ಬಾರಿ ಅದರ ಮೃದುತ್ವ ಕಳೆದುಕೊಳ್ಳಲು ಕಾರಣ. ಅನೇಕರು ಹಿಟ್ಟಿಗೆ ಹೆಚ್ಚು ನೀರು ಹಾಕುವುದರಿಂದ ಅದು ಮೃದು ವಾಗುತ್ತದೆ ಎನ್ನುತ್ತಾರೆ. ಆದರೆ, ಇದು ತಪ್ಪು. ಇದರಿಂದ ಹಿಟ್ಟು ಮತ್ತಷ್ಟು ಕೈಗೆ ಮೆತ್ತಿಕೊಳ್ಳುತ್ತದೆ. ಈ ಹಿನ್ನೆಲೆ ಕಲಸುವಾಗ ಹಿಟ್ಟಿನ ಹದಕ್ಕೆ ನೋಡಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಹೋಗಬೇಕು.
  • ಹಿಟ್ಟು ಮೃದುವಾಗಿ ಅದು ಕೈಗೆ ಮೆತ್ತಿಕೊಳ್ಳುತ್ತಿದ್ದರೆ, ಆಗ ಕೇವಲ ಒಣ ಹಿಟ್ಟನ್ನು ಸೇರಿಸಿದರೆ ಸಾಲದು. ಈ ವೇಳೆ ಕಲಸುವ ಪ್ರಕ್ರಿಯೆಯಲ್ಲಿ ತಣ್ಣೀರಿನ ಬದಲಾಗಿ ಬಿಸಿ ನೀರನ್ನು ಬಳಕೆ ಮಾಡಿ. ಅಷ್ಟೇ ಅಲ್ಲ, ನೀರಿನ ಬದಲಾಗಿ, ಹಾಲನ್ನು ಕೂಡ ಸೇರಿಸಬಹುದು. ಇದರಿಂದ ಚಪಾತಿ ಮೃದು ಮತ್ತು ಉಬ್ಬುವುದರಲ್ಲಿ ಸಂದೇಹವಿಲ್ಲ.
  • ಮೃದು ಚಪಾತಿ ಮಾಡಬೇಕು ಎಂದು ನಿರ್ಧರಿಸಿದರೆ, ಮೊದಲು ಹಿಟ್ಟಿನ ಆಯ್ಕೆ ಬಗ್ಗೆ ಗಮನಹರಿಸಿ. ಉತ್ತಮ ಗುಣಮಟ್ಟದ ಹಿಟ್ಟಿಗೆ ಎಣ್ಣೆ, ಉಪ್ಪು, ಬೆಚ್ಚಗಿನ ನೀರನ್ನು ಹಾಕಿ ಚೆನ್ನಾಗಿ ಕಲಸಿ.
  • ಉದಾಹರಣೆ, ಮೂರು ಕಪ್​ ಹಿಟ್ಟು ತೆಗೆದುಕೊಂಡರೆ, ಅದಕ್ಕೆ ಒಂದೂವರೆ ಕಪ್​ ನೀರು, ರುಚಿಗೆ ತಕ್ಕಂತೆ ಉಪ್ಪು, ಎರಡು ಸ್ಪೂನ್​ ತುಪ್ಪ ಸೇರಿಸಿ.
  • ಕಲಸಿದ ಹಿಟ್ಟಿಗೆ ಮತ್ತಷ್ಟು ಹಿಟ್ಟು ಸೇರಿಸುವ ಪ್ರಕ್ರಿಯೆಯಲ್ಲಿ ಕೂಡ ಬೆಚ್ಚಗಿನ ನೀರು ಬಳಕೆ ಮಾಡಿ. ಜೊತೆಗೆ ಹಿಟ್ಟನ್ನು ಚೆನ್ನಾಗಿ ನಾದುವುದರಿಂದ ಕೂಡ ಇದು ಮೃದುತ್ವ ಪಡೆಯುತ್ತದೆ.
  • ಹಿಟ್ಟು ಕಲಸಿದ ಬಳಿಕ ಅದರ ಮೇಲೆ ಹಸಿ ಬಟ್ಟೆಯಿಂದ ಮುಚ್ಚಿ, 25 ರಿಂದ 30 ನಿಮಿಷ ಬಿಡಿ. ಇದು ಕೂಡ ಹಿಟ್ಟನ್ನು ಮೃದುವಾಗಿಸುತ್ತದೆ.
  • ಅರ್ಧ ಗಂಟೆ ಬಳಿಕ ಚಪಾತಿ ಲಟ್ಟಿಸುವ ಮುಂದೆ ಆ ಹಿಟ್ಟಿಗೆ ಮತ್ತೆ ಒಂದು ಚೂರು ಹಿಟ್ಟು ಹಾಕಿ, ನಿಮಿಷ ನಾದಿ.
  • ಇದಾದ ಬಳಿಕ ಬೇಕಾದ ಆಕೃತಿಯಲ್ಲಿ ಚಪಾತಿ ಲಟ್ಟಿಸಿಕೊಳ್ಳಿ. ಈ ವೇಳೆ ಸಾಧ್ಯವಾದಷ್ಟು ಒಣ ಹಿಟ್ಟಿನ ಬಳಕೆ ಮಾಡಬೇಡಿ. ಬಣ ಹಿಟ್ಟಿನ ಬಳಕೆಯನ್ನು ಮಾಡುವುದರಿಂದ ಚಪಾತಿ ಮತ್ತಷ್ಟು ಒರಟಾಗುತ್ತದೆ.
  • ಚಪಾತಿಯನ್ನು ಮೊದಲಿಗೆ ಹೆಂಚಿನ ಮೇಲೆ ಬೇಯಿಸಿ, ಇದರಿಂದ ಅದರ ಬಿಗಿತನ ಹೋಗುತ್ತದೆ. ಇದಾದ ಬಳಿಕ ಸಣ್ಣ ಬೆಂಕಿ ಉರಿ ಮೇಲೆ ಅದನ್ನು ರೋಸ್ಟ್​ ಮಾಡಿ.
  • ಚಪಾತಿ ಬೇಯಿಸಿದ ಮೇಲೆ ಅದನ್ನು ತಕ್ಷಣಕ್ಕೆ ಹಾಟ್​ ಬಾಕ್ಸ್​​ಗೆ ಹಾಕಿ. ಇದರಿಂದ ಚಪಾತಿ ಹೆಚ್ಚು ಸಮಯ ಮೃದು, ಬಿಸಿ ಮತ್ತು ಉಬ್ಬಿರುತ್ತದೆ.

ಇದನ್ನೂ ಓದಿ: ಚಪಾತಿ Vs ರೈಸ್: ಆರೋಗ್ಯಕ್ಕೆ ಯಾವುದು ಒಳ್ಳೆಯದು ಗೊತ್ತಾ? ಈ ಬಗ್ಗೆ ಸಂಶೋಧನೆ ಏನು ಹೇಳುತ್ತೆ?

Last Updated : Jun 22, 2024, 10:40 PM IST

ABOUT THE AUTHOR

...view details