ಬಹು ನಿರೀಕ್ಷಿತ ಬಣ್ಣಗಳ ಹಬ್ಬ 'ಹೋಳಿ' ಸಂಭ್ರಮಕ್ಕೆ ದೇಶ ಸಿದ್ಧವಾಗಿದೆ. ಭಾರತದಾದ್ಯಂತ ಈ ಹಬ್ಬವನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಗುಲಾಲ್ ಎಂದು ಕರೆಯಲ್ಪಡುವ ಬಣ್ಣಗಳಿಂದಾಗಿ ಹಬ್ಬದ ಉತ್ಸಾಹ ಇಮ್ಮಡಿಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೆಟ್ಟ ವಿಚಾರಗಳ ವಿರುದ್ಧ ಒಳಿತಿನ ವಿಜಯವನ್ನು ಸಹ 'ಹೋಳಿ' ಸೂಚಿಸುತ್ತದೆ. ಅಂದು ಪರಸ್ಪರ ಪ್ರೀತಿ, ಸ್ನೇಹ ವ್ಯಕ್ತವಾಗುತ್ತದೆ.
'ಹೋಳಿ' ಸಂಭ್ರಮಕ್ಕೆ ಸಿದ್ಧತೆ: ಮನೆಯಲ್ಲೇ 'ನೈಸರ್ಗಿಕ ಗುಲಾಲ್' ತಯಾರಿಸುವುದು ಹೇಗೆ? - HOLI FESTIVAL - HOLI FESTIVAL
ಸೋಮವಾರದಂದು ಭಾರತದಾದ್ಯಂತ ಹೋಳಿ ಆಚರಿಸಲಾಗುತ್ತದೆ. ಎಲ್ಲೆಡೆ ಸಿದ್ಧತೆ ನಡೆದಿದ್ದು, ಮನೆಯಲ್ಲೇ 'ನೈಸರ್ಗಿಕ ಗುಲಾಲ್' ತಯಾರಿಸುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Published : Mar 23, 2024, 10:29 AM IST
'ನೈಸರ್ಗಿಕ ಗುಲಾಲ್' ತಯಾರಿ: ಕೃತಕ ವಸ್ತುಗಳಿಗೆ ಹೆಚ್ಚು ಮೊರೆ ಹೋಗುವ ಈ ಕಾಲದಲ್ಲಿ, ಮನೆಯಲ್ಲಿಯೇ ಬಣ್ಣ/ಗುಲಾಲ್ ಅನ್ನು ಏಕೆ ರೆಡಿ ಮಾಡಬಾರದು? ಎಂಬ ಆಲೋಚನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ನೈಸರ್ಗಿಕ ಬಣ್ಣ ನಿಮ್ಮ ತ್ವಚೆಯನ್ನು ರಕ್ಷಿಸುವ ಜೊತೆಗೆ ನಿಮ್ಮ ಜೇಬಿಗೂ ಕತ್ತರಿ ಬೀಳುವುದನ್ನು ತಪ್ಪಿಸುತ್ತದೆ. ಬಣ್ಣ ಅಥವಾ ಗುಲಾಲ್ ಅನ್ನು ತಯಾರಿಸಬಹುದಾದ ಕೆಲ ಸರಳ ವಿಧಾನಗಳು ಇಲ್ಲಿಬೆ. ಪೌಡರ್ ಅಥವಾ ನೀರಿನ ರೂಪದಲ್ಲಿ 'ಹೋಳಿ' ಆಚರಿಸೋದು ನಿಮಗೆ ತಿಳಿದೇ ಇದೆ.
- ಹಳದಿ ಬಣ್ಣ:ಕಡಲೆ ಹಿಟ್ಟು ಮತ್ತು ಅರಿಶಿನವನ್ನು 1:2 ಅನುಪಾತದಲ್ಲಿ ಮಿಕ್ಸ್ ಮಾಡುವುದರಿಂದ ಹಳದಿ ಬಣ್ಣ ಸಿಗಲಿದೆ. ಚೆಂಡು ಹೂವನ್ನು ನೀರಿನಲ್ಲಿ ಕುದಿಸಿ ಅಥವಾ ಸಾವಯವ ಅರಿಶಿಣವನ್ನು ನೀರಿನಲ್ಲಿ ಬೆರೆಸೋ ಮೂಲಕವೂ ನೈಸರ್ಗಿಕ ಹಳದಿ ಬಣ್ಣ ಪಡೆಯಬಹುದಾಗಿದೆ.
- ಕೆಂಪು ಬಣ್ಣ: ಕೆಂಪು ಬಣ್ಣಕ್ಕಾಗಿ ಅರಿಶಿನದೊಂದಿಗೆ ನಿಂಬೆ ರಸವನ್ನು ಬೆರೆಸಿ. ಚೆನ್ನಾಗಿ ಗಾಳಿ ಇರುವ ಕೋಣೆಯಲ್ಲಿ ಮಿಶ್ರಣವನ್ನು ಒಣಗಿಸೋ ಮೂಲಕ ಕೆಂಪು ಬಣ್ಣ ಪಡೆಯಬಹುದಾಗಿದೆ. ಅಲ್ಲದೇ, ಒಣಗಿದ ಕೆಂಪು ದಾಸವಾಳ ಹೂಗಳನ್ನು ಪುಡಿಮಾಡಿ ಬಳಸಬಹುದು. ದಾಳಿಂಬೆ ಸಿಪ್ಪೆಗಳನ್ನೂ ಸಹ ನೀರಿನಲ್ಲಿ ಕುದಿಸೋ ಮೂಲಕ ಕೆಂಪು ಬಣ್ಣದ ನೀರನ್ನು ಪಡೆಯಬಹುದಾಗಿದೆ.
- ಗುಲಾಬಿ ಬಣ್ಣ: ಮೇಲೆ ಕೆಂಪು ಬಣ್ಣಕ್ಕೆ ತಿಳಿಸಿದ ವಿಧಾನದಲ್ಲಿ ಗುಲಾಬಿ ಬಣ್ಣವನ್ನೂ ಪಡೆಯಬಹುದಾಗಿದೆ. ಆದರೆ ನಿಂಬೆ ರಸದ ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿರಬೇಕು.
- ಪರ್ಪಲ್-ರೆಡ್ ಕಲರ್ (Magenta):ಬೀಟ್ರೂಟ್ ಚೂರು ಅಥವಾ ಕೆಂಪು ಈರುಳ್ಳಿಯನ್ನು ಕುದಿಸಿ, ನೀರನ್ನು ಬೇರ್ಪಡಿಸಿ ತಣ್ಣಗಾಗಿಸಿ.
- ಕಂದು ಬಣ್ಣ: ಕಾಫಿಯನ್ನು ನೀರಿನಲ್ಲಿ ಕುದಿಸಿ. ವಾಸನೆ ಕಡಿಮೆ ಮಾಡಲು ರೋಸ್ ವಾಟರ್ ಬಳಸಬಹುದು. ಆದರೆ ಸಂಭಾವ್ಯ ಸ್ಟೇನ್ ಬಗ್ಗೆ ತಿಳಿದಿರಲಿ.
- ನೇರಳೆ ಬಣ್ಣ: ಕಪ್ಪು ಕ್ಯಾರೆಟ್ ಅನ್ನು ಪುಡಿಮಾಡಿ, ಕಾರ್ನ್ ಫ್ಲೋರ್ನೊಂದಿಗೆ ಬೆರೆಸಿ. ಪರಿಮಳಕ್ಕಾಗಿ ಸ್ವಲ್ಪ ರೋಸ್ ವಾಟರ್ ಸೇರಿಸಿ.
- ಬೂದು ಬಣ್ಣ: ಒಣಗಿದ ನೆಲ್ಲಿಕಾಯಿ ಪುಡಿಯನ್ನು ಜೋಳದ ಹಿಟ್ಟಿನೊಂದಿಗೆ ಬೆರೆಸಿ ಬಳಸಿ.
- ಹಸಿರು ಬಣ್ಣ: ಅಕ್ಕಿ ಹಿಟ್ಟು ಅಥವಾ ಮೈದಾದೊಂದಿಗೆ ಗೋರಂಟಿ ಪುಡಿಯನ್ನು ಮಿಶ್ರಣ ಮಾಡಿ. ನೀರಿನಲ್ಲೂ ಮಿಶ್ರಣ ಮಾಡಬಹುದಾಗಿದೆ. ಆದ್ರೆ ಬಣ್ಣ ಯಾವುದೇ ಇರಲಿ, ಸಂಭಾವ್ಯ ಕಲೆಗಳ ಬಗ್ಗೆ ತಿಳಿದಿರಲಿ.
ಇದನ್ನೂ ಓದಿ:ಲೋಕಸಮರದಲ್ಲಿ ಕಣಕ್ಕಿಳಿಯಲಿದ್ದಾರಾ ಬಾಲಿವುಡ್ ನಟ ಗೋವಿಂದ? - Bollywood Actor Govinda