ಕರ್ನಾಟಕ

karnataka

ETV Bharat / health

ರೆಸ್ಟೋರೆಂಟ್​ ಸ್ಟೈಲ್​ನಲ್ಲಿ, ಹತ್ತೇ ನಿಮಿಷದಲ್ಲಿ ಹೆಲ್ದೀ ಓಟ್ಸ್ ದೋಸೆ; ತಿನ್ನಿ, ತೂಕ ಇಳಿಸಿ - oats dosa - OATS DOSA

ಹೆಚ್ಚಿನವರಿಗೆ ಬೆಳಗಿನ ತಿಂಡಿಗೆ, ಸಂಜೆಗೆ ಟಿ ಟೈಮ್​ಗೆ, ಕೆಲವರಿಗೆ ರಾತ್ರಿ ಡಿನ್ನರ್​ಗೂ ದೋಸೆ ಬೇಕು. ಆದರೆ ದಿನನಿತ್ಯ ಎಣ್ಣೆ ಹಾಕಿದ ದೋಸೆ ತಿಂದು ತಿಂದು ಬೊಜ್ಜು ಬರುತ್ತದೆ. ಆದರೆ ಕಂಗಲಾಗಬೇಡಿ ದೋಸೆ ಪ್ರಿಯರಿಗೆಂದೇ ನಾವಿಂದು ತೂಕ ಇಳಿಸುವ, ಎಣ್ಣೆ ಕಡಿಮೆ ಬಳಸಿ ತಿನ್ನಬಹುದಾದ ರುಚಿಕರ ಓಟ್ಸ್ ದೋಸೆ ರೆಸಿಪಿ ತಂದಿದ್ದೇವೆ. ಮಾಡೋದು ಹೇಗೆ ಅನ್ನೋದನ್ನು ನಾವ್​ ಹೇಳ್ತಿವಿ..

ಓಟ್ಸ್ ದೋಸೆ
ಓಟ್ಸ್ ದೋಸೆ (ETV Bharat)

By ETV Bharat Karnataka Team

Published : Aug 5, 2024, 10:35 AM IST

ತೂಕವೂ ಇಳಿಯಬೇಕು, ಹತ್ತೇ ನಿಮಿಷದಲ್ಲಿ ಬಿಸಿಬಿಸಿ ದೋಸೆಯೂ ತಿನ್ನಬೇಕು ಅಂತಿದ್ದರೆ ಓಟ್ಸ್ ದೋಸೆ ಬೆಸ್ಟ್​. ಹೌದು ಆರೋಗ್ಯಯುತ, ಕಡಿಮೆ ಎಣ್ಣೆ ಬಳಕೆಯ ಓಟ್ಸ್ ದೋಸೆಯನ್ನು ಬಹಳ ಸುಲಭವಾಗಿ ತಯಾರಿಸಬಹುದು. ಅದು ರೆಸ್ಟೋರೆಂಟ್​ ಸ್ಟೈಲ್​ನಲ್ಲಿ. ಹಾಗಾದರೆ ಬನ್ನಿ.. ಬೇಗ ಟೇಸ್ಟಿ, ಕ್ರಿಸ್ಪಿ ಓಟ್ಸ್ ದೋಸೆ ತಿನ್ನೋಣ.. ಅದಕ್ಕೂ ಮೊದಲೂ ರೆಸಿಪಿ ತಿಳಿಯೋಣ.

ಓಟ್ಸ್ ದೋಸೆಗೆ ಬೇಕಾಗುವ ಪದಾರ್ಥಗಳು:

  • ಒಂದು ಕಪ್ ಓಟ್ಸ್​ ಹಿಟ್ಟು
  • ಮುಕ್ಕಾಲು ಕಪ್​ ಅಕ್ಕಿ ಹಿಟ್ಟು
  • ಕಾಲು ಕಪ್ ಬಾಂಬೆ ರವಾ
  • ಕಾಲು ಕಪ್​ ಹೆಚ್ಚಿದ ಈರುಳ್ಳಿ
  • ಒಂದು ಟೀ ಚಮಚ ಜೀರಿಗೆ
  • ಒಂದು ಟೀ ಚಮಚ ಶುಂಠಿ ಪೇಸ್ಟ್​
  • ಹಸಿರು ಮೆಣಸಿನಕಾಯಿ
  • 3/4 ಟೀ ಚಮಚ ಕಾಳು ಮೆಣಸಿನ ಪುಡಿ
  • ಕಾಲು ಕಪ್ ಹಸಿ ತೆಂಗಿನ ತುರಿ
  • ಉಪ್ಪು
  • ಹೆಚ್ಚಿದ ಕೊತ್ತಂಬರಿ ಸೊಪ್ಪು
  • ತುರಿದ ಕ್ಯಾರೆಟ್ (ಅಗತ್ಯವಿರುವಷ್ಟು)
  • 1 ಕಪ್ ಮೊಸರು
  • ಎಣ್ಣೆ

ತಯಾರಿಸುವ ವಿಧಾನ:

  • ಮೊದಲು ಒಂದು ಕಪ್ ಓಟ್ಸ್ ಹಿಟ್ಟನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. (ಮೃದುವಾದಷ್ಟೂ ರುಚಿ ಉತ್ತಮವಾಗಿರುತ್ತದೆ).
  • ರುಬ್ಬಿದ ಓಟ್ಸ್​ ಹಿಟ್ಟಿಗೆ ಮೊದಲೇ ಅಳತೆಯಲ್ಲಿ ತಿಳಿಸಿರುವ ಅಕ್ಕಿ ಹಿಟ್ಟು, ಬಾಂಬೆ ರವೆ, ಹೆಚ್ಚಿದ ಈರುಳ್ಳಿ, ಜೀರಿಗೆ, ಶುಂಠಿ ಪೇಸ್ಟ್​, ಹಸಿರು ಮೆಣಸಿನಕಾಯಿ, ಕಾಳುಮೆಣಸಿನ ಪುಡಿ, ಹಸಿ ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಮತ್ತು ಅಗತ್ಯವಿರುವಷ್ಟು ಕ್ಯಾರೆಟ್​, ಮೊಸರು ಜತೆ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ.
  • ಈಗ ಒಲೆ ಮೇಲೆ ದೋಸೆ ತವಾ ಇಟ್ಟು ಬಿಸಿ ಮಾಡಿಕೊಳ್ಳಿ. ಕಾದ ಹೆಂಚಿಗೆ ಮಿಶ್ರಣ ಮಾಡಿರುವ ದೋಸೆ ಹಿಟ್ಟನ್ನು ನಿಧಾನಕ್ಕೆ ವೃತ್ತಾಕಾರಕ್ಕೆ ಹಾಕಿ. ಈರುಳ್ಳಿ ಮತ್ತು ಮೆಣಸಿನಕಾಯಿ, ಕ್ಯಾರೆಟ್​, ತೆಂಗಿನಕಾಯಿ ತುರಿ ಇರುವುದರಿಂದ ದೋಸೆ ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಣ್ಣ ಉರಿಯಲ್ಲಿ ಇಟ್ಟು ದೋಸೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಮಗುಚಿ ಹಾಕಿ.
  • ಮತ್ತೊಮ್ಮೆ ಇನ್ನೊಂದು ಬದಿ ಬೇಯಿಸಿ. ರವಾ ದೋಸೆಯಂತೆ ಕೆಂಪು ಬಣ್ಣಕ್ಕೆ ತಿರುಗಿದ ಮೇಲೆ ತೆಗೆಯಬಹುದು. ಸರಿಯಾಗಿ ದೋಸೆ ಬಿಸಿಯಾಗದಿದ್ದರೆ ತಿನ್ನುವಾಗ ಬಾಯಿಯಲ್ಲಿ ಅಂಟಿಕೊಳ್ಳಬಹುದು.

ಈಗ ಗರಿಗರಿಯಾಗಿ ತಯಾರಾಗಿರುವ ಓಟ್ಸ್​ ದೋಸೆಯನ್ನು ತೆಂಗಿನಕಾಯಿ ಚಟ್ನಿ, ಶುಂಠಿ ಮತ್ತು ಟೊಮೆಟೊ ಚಟ್ನಿಯೊಂದಿಗೆ ತಿನ್ನಬಹುದು. ಆರೋಗ್ಯಕ್ಕೂ ಒಳ್ಳೆಯದು, ರುಚಿಗೂ ಸೈ.

ಹಾಗಾದರೆ ನೀವೂ ಕೂಡ ಬಿಸಿಬಿಸಿ ಓಟ್ಸ್​ ದೋಸೆ ಮಾಡಿ ಮನೆಮಂದಿಯೆಲ್ಲಾ ಸೇವಿಸಿ.

ಇದನ್ನೂ ಓದಿ:ಉಪವಾಸ ಮಾಡಿ-ಆರೋಗ್ಯ ಕಾಪಾಡಿಕೊಳ್ಳಿ: ದೇಹದಲ್ಲಿ ಆಗುತ್ತವೆ ಇಷ್ಟೊಂದು ಬದಲಾವಣೆಗಳು! - Fasting Benefits

ABOUT THE AUTHOR

...view details