ಕರ್ನಾಟಕ

karnataka

ETV Bharat / health

ಪೇರಲ ಹಣ್ಣು ತಿನ್ನಲಷ್ಟೇ ಅಲ್ಲ ಇದರಿಂದ ಸಿದ್ಧಪಡಿಸುವ ರುಚಿಕರ ಚಟ್ನಿಯೂ ಸೂಪರ್​: ನೀವು ಒಮ್ಮೆ ಟ್ರೈ ಮಾಡಿ ನೋಡಿ.. - Guava Chutney Recipe - GUAVA CHUTNEY RECIPE

How to Make Guava Chutney : ಕೆಲವರಿಗೆ ಕರಿಗಳಿಗಿಂತ ರೊಟ್ಟಿ ಚಟ್ನಿ ತುಂಬಾ ಇಷ್ಟವಾಗುತ್ತದೆ. ದೋಸೆ, ಇಡ್ಲಿ, ಚಪಾತಿ ಮತ್ತು ರೊಟ್ಟಿ ವಿವಿಧ ತರಕಾರಿಗಳ ಚಟ್ನಿ ಸವಿಯುವುದು ಸಾಮಾನ್ಯವಾಗಿದೆ. ರೊಟ್ಟಿ, ಚಪಾತಿ ಮತ್ತು ಅನ್ನದೊಂದಿಗೆ ಸವಿಯಲು ಪೇರಲ ಚಟ್ನಿ ಸೂಪರ್ ಟೇಸ್ಟ್​ ನೀಡುತ್ತದೆ. ಅದ್ಭುತವಾದ ರುಚಿ ಕೊಡುವ ಪೇರಲ ಚಟ್ನಿ ಹೇಗೆ ತಯಾರಿಸಬೇಕು ಎಂಬುದನ್ನು ನೋಡೋಣ.

HOW TO MAKE GUAVA CHUTNEY  GUAVA CHUTNEY PREPARATION  GUAVA CHUTNEY MAKING PROCESS  GUAVA CHUTNEY IN kannada
ಪೇರಲ ಚಟ್ನಿ (ETV Bharat)

By ETV Bharat Health Team

Published : Aug 31, 2024, 2:18 PM IST

How to Make Guava Chutney:ಊಟಕ್ಕೆ ಸಮಯವಾಗುತ್ತಿದ್ದಂತೆ ಮೊದಲು ನಮಗೆಲ್ಲರಿಗೂ ನೆನಪಾಗುವುದು ರೋಟಿ, ಚಪಾತಿ ಜೊತೆಗೆ ವಿವಿಧ ಚಟ್ನಿಗಳು. ಅದರಲ್ಲೂ ಟೊಮೇಟೊ, ಹೀರೆಕಾಯಿ, ಹಾಗಲಕಾಯಿ, ಸೋರೆಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ. ಆದರೆ, ರೊಟ್ಟಿ, ಚಪಾತಿ, ಅನ್ನದೊಂದಿಗೆ ಸವಿಯಲು ಕೆಲವು ಹಣ್ಣುಗಳಿಂದ ಮಾಡುವ ಚಟ್ನಿಗಳು ತುಂಬಾ ರುಚಿಕರವಾಗಿರುತ್ತವೆ. ಅದರಲ್ಲೂ ಪೇರಲ ಚಟ್ನಿಯು ಒಂದು. ಪೇರಲ ಚಟ್ನಿಯನ್ನು ಹೇಗೆ ಸಿದ್ಧಪಡಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಒಮ್ಮೆ ಈ ಚಟ್ನಿಯನ್ನು ಟ್ರೈ ಮಾಡಿದ್ರೆ ಸಾಕು ಮತ್ತೆ ಮತ್ತೆ ತಯಾರಿಸಬೇಕು ಅನಿಸುತ್ತದೆ. ಪೇರಲ ಚಟ್ನಿಯನ್ನು ತುಂಬಾ ಸರಳವಾಗಿ ತಯಾರಿಸಬಹುದು. ಆದರೆ, ಪೇರಲ ಚಟ್ನಿಯು ಅಸಾಮಾನ್ಯ ರುಚಿಯಿಂದಲೇ ಹೆಚ್ಚು ವಿಶಿಷ್ಟವಾಗಿದೆ. ಪ್ರಮುಖವಾಗಿ ಪೇರಲ ಹಣ್ಣಿನಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಲಾಭಗಳು ಪಡೆಯಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ, ಪೇರಲ ಚಟ್ನಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಯಾವುವು? ಚಟ್ನಿ ತಯಾರಿ ಹೇಗೆ? ಎಂಬುದರ ವಿವರಗಳನ್ನು ಅರಿತುಕೊಳ್ಳೋಣ.

ಚಟ್ನಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • ಪೇರಲ - ನಾಲ್ಕು
  • ಶೇಂಗಾ- ಕಪ್
  • ನಿಂಬೆ ರಸ - ಎರಡು ಚಮಚಗಳು
  • ಮೆಣಸಿನಕಾಯಿ - 6
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಮೂರು ಚಮಚ
  • ಬೆಳ್ಳುಳ್ಳಿ ಪೇಸ್ಟ್ - 3/4 ಚಮಚ
  • ಸಾಸಿವೆ - 1 ಚಮಚ
  • ಜೀರಿಗೆ - 1 ಚಮಚ
  • ಕಡಲೆಕಾಯಿ - 1 ಚಮಚ
  • ಉದ್ದಿನ ಬೇಳೆ- 1 ಚಮಚ
  • ಕರಿಬೇವಿನ ಎಲೆಗಳು - ನಾಲ್ಕು
  • ಕರಿಮೆಣಸು - 2
  • ಇಂಗು - ಕಾಲು ಚಮಚ
  • ಕೊತ್ತಂಬರಿ ಸೊಪ್ಪು - ಕಾಲು ಕಪ್

ತಯಾರಿಸುವ ವಿಧಾನ ಹೇಗೆ?:

  • ಇದಕ್ಕಾಗಿ, ಮೊದಲು ಸ್ವಲ್ಪ ಗಟ್ಟಿಯಾಗಿರುವ ತಾಜಾ ಪೇರಲವನ್ನು ಆರಿಸಿ (ಪೇರಲ ಹಣ್ಣಾಗಿರಬಾರದು, ಕಾಯಿಯಾಗಿರುವ ಪೇರಲ ಬಳಸಿ). ಅದೇ.. ಮೃದುವಾದ ಹಣ್ಣಾಗಿರುವ ಪೇರಲವನ್ನು ತೆಗೆದುಕೊಂಡರೆ, ಚಟ್ನಿ ಸ್ವಲ್ಪ ಸಿಹಿಯಾಗುವ ಸಾಧ್ಯತೆಯಿದೆ. ಇದರಿಂದ ಕಾಯಿಯಾಗಿರುವ ಪೇರಲವನ್ನು ತೆಗೆದುಕೊಳ್ಳಿ.
  • ನಂತರ ಅವುಗಳನ್ನು ಸ್ವಚ್ಛವಾಗಿ ತೊಳೆದು ನಾಲ್ಕು ತುಂಡುಗಳಾಗಿ ಕತ್ತರಿಸಿ. ಅದರ ನಂತರ, ಒಂದು ಚಮಚದ ಸಹಾಯದಿಂದ, ಪೇರಲ ತುಂಡುಗಳಿಂದ ಬೀಜಗಳನ್ನು ತೆಗೆದುಹಾಕಿ. ಈ ರೀತಿಯಾಗಿ ಎಲ್ಲ ಪೇರಲದಿಂದ ಬೀಜಗಳನ್ನು ತೆಗೆಯಬೇಕು.
  • ಅದರ ನಂತರ ಅವುಗಳನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಬೇಕು.
  • ಈಗ ಸ್ಟೌ ಆನ್ ಮಾಡಿ ಬಾಣಲೆಯನ್ನು ಹಾಕಿ, ಕತ್ತರಿಸಿದ ಪೇರಲ ತುಂಡುಗಳನ್ನು ಹಾಕಿ ಸ್ವಲ್ಪ ಅರಿಶಿನ ಮತ್ತು ಸ್ವಲ್ಪ ನೀರು ಸೇರಿಸಿ ಮಧ್ಯ ಉರಿಯಲ್ಲಿ ಮೇಲೆ ಪೇರಲ ತುಂಡುಗಳು ಮೃದುವಾಗುವವರೆಗೆ ಬೇಯಿಸಿ.
  • ಮತ್ತೊಂದು ಒಲೆಯಲ್ಲಿ ಶೇಂಗಾವನ್ನು ಹುರಿದುಕೊಳ್ಳಿ. ಹುರಿದ ಪೇರಲಗಳನ್ನು ಪಕ್ಕಕ್ಕೆ ಇಡಿ. ಮತ್ತೆ ಅದೇ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸಿನಕಾಯಿಯನ್ನು ಹುರಿಯಿರಿ.
  • ಇವೆಲ್ಲ ತಣ್ಣಗಾದ ನಂತರ.. ಮೊದಲು ಹುರಿ ಶೇಂಗಾ ಮತ್ತು ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ. ನಂತರ ಬೇಯಿಸಿದ ಪೇರಲ ತುಂಡುಗಳು, ಉಪ್ಪು ಮತ್ತು ನಿಂಬೆರಸ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ಸ್ಟವ್ ಆನ್ ಮಾಡಿ ಬಾಣಲೆ ಇಟ್ಟು ಮೆಣಸಿನಕಾಯಿ ಹುರಿದ ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಮೆಣಸು, ಬೆಳ್ಳುಳ್ಳಿ ಪುಡಿ, ಕರಿಬೇವು, ಇಂಗು, ಒಂದೊಂದಾಗಿ ಸೇರಿಸಿ ಒಗ್ಗರಣೆ ಕೊಡಿ.
  • ಇವೆಲ್ಲವೂ ತಯಾರಾದ ನಂತರ, ರುಬ್ಬಿಕೊಂಡಿರುವ ಪದಾರ್ಥಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿದರೆ ಸಾಕು, ತುಂಬಾ ರುಚಿಯಾದ ಹಸಿರು ಕಾಣಿಸುವ ಪೇರಲ ಚಟ್ನಿ ಸಿದ್ಧವಾಗುತ್ತದೆ.
  • ಈ ಪೇರಲ ಚಟ್ನಿಯನ್ನು ರೊಟ್ಟಿ, ಚಪಾತಿ ಮತ್ತು ಅನ್ನದೊಂದಿಗೆ ತಿಂದರೆ ತುಂಬಾ ಟೇಸ್ಟಿಯಾಗಿರುತ್ತದೆ. ನೀವು ಒಮ್ಮೆ ಪೇರಲ ಚಟ್ನಿ ರೆಸಿಪಿಯನ್ನು ಟ್ರೈ ಮಾಡಿ.

ಇದನ್ನೂ ಓದಿ:ರುಚಿಕರ ಮೈಸೂರು ರಸಂ ಕೆಲವೇ ನಿಮಿಷಗಳಲ್ಲಿ ರೆಡಿ ಮಾಡೋದು ಹೇಗೆ?: ಅನ್ನದೊಂದಿಗೆ ತಿನ್ನಲಷ್ಟೇ ಅಲ್ಲ, ಕುಡಿಯಲೂಬಹುದು! - HOW TO PREPARE MYSURU TOMATO RASAM

ABOUT THE AUTHOR

...view details