How to Control Sugar Levels in Blood:ಟೈಪ್ 2 ಡಯಾಬಿಟಿಸ್ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಕಾಡುತ್ತಿದೆ. ಟೈಪ್ 2 ಡಯಾಬಿಟಿಸ್ ರಕ್ತದಲ್ಲಿನ ಶುಗರ್ ಲೆವಲ್ ಅನ್ನು ಹೆಚ್ಚಿಸುತ್ತದೆ. ಜೊತೆಗೆ ವಿವಿಧ ಕಾಯಿಲೆಗಳು ಬರಲು ಕಾರಣವಾಗುತ್ತದೆ. ಮಧುಮೇಹಕ್ಕೆ ಜೀವನಶೈಲಿ ಒಂದು ಕಾರಣವಾಗಿದ್ದು, ಪೋಷಕರ ಡಿಎನ್ಎ ಮತ್ತೊಂದು ಕಾರಣ ಆಗಿದೆ ಎಂದು ವೈದ್ಯರು ತಿಳಿಸುತ್ತಾರೆ.
ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದಾಗ ಹಾಗೂ ದೇಹವು ಇನ್ಸುಲಿನ್ ಸರಿಯಾಗಿ ಬಳಸದಿದ್ದಾಗ ಟೈಪ್ 2 ಡಯಾಬಿಟಿಸ್ ಸಮಸ್ಯೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಣದಲ್ಲಿಡಲು ತಜ್ಞರು ಸೂಚಿಸುವಂತಹ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕಾರ್ಟಿಸೋಲ್ ಹಾರ್ಮೋನ್:ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆ ನಮ್ಮಲ್ಲಿ ಹೆಚ್ಚಾದರೆ, ಅದು ರಕ್ತದಲ್ಲಿನ ಶುಗರ್ ಲೆವಲ್ ಹೆಚ್ಚಿಸುತ್ತದೆ. ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಬೇಕು. ಇದಕ್ಕಾಗಿ ಯೋಗ ಹಾಗೂ ಧ್ಯಾನ ಮಾಡಬೇಕಾಗುತ್ತದೆ. ಪ್ರತಿಯೊಬ್ಬರಿಗೂ ದೈಹಿಕ ಚಟುವಟಿಕೆಯ ಅಗತ್ಯವಿದೆ. ನಿಯಮಿತವಾದ ವಾಕಿಂಗ್ ಹಾಗೂ ವ್ಯಾಯಾಮ ಮಾಡಬೇಕಾಗುತ್ತದೆ. ಇದರಿಂದ ಗ್ಲೂಕೋಸ್ ಉತ್ಪಾದನೆಯು ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಹೈಡ್ರೇಟೆಡ್ ಆಗಿರಲು ಸಲಹೆ: ವಿಶೇಷವಾಗಿ ದೇಹದಲ್ಲಿ ಸಾಕಷ್ಟು ನೀರು ಇದ್ದಾಗ ಪೋಷಕಾಂಶಗಳು ಹೀರಲ್ಪಡುತ್ತವೆ. ಇದರಿಂದ ರೋಗಗಳು ಬರುವುದಿಲ್ಲ. ಹೈಡ್ರೇಟೆಡ್ ಆಗಿರುವುದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಯಾವುದೇ ವಯಸ್ಸಿನವರು ಕನಿಷ್ಠ 8 ಗಂಟೆಗಳವರೆಗೆ ನಿದ್ದೆ ಮಾಡಬೇಕಾಗುತ್ತದೆ. ನಿದ್ರೆಯ ಸಮಯದಲ್ಲಿ ದೇಹವು ಹಾನಿಗೊಳಗಾದ ಜೀವಕೋಶಗಳನ್ನು ಪುನಃಸ್ಥಾಪಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.