ಹೈದರಾಬಾದ್: ದೇಹಕ್ಕೆ ನೀರು ಅಗತ್ಯ ಎಂಬುದನ್ನು ನಾವೇನು ಬಿಡಿಸಿ ಹೇಳಬೇಕ್ಕಿಲ್ಲ. ಅದೆಲ್ಲ ಸಕಲ ಜೀವಿಗಳಿಗೂ ಗೊತ್ತು. ಗಾಳಿ, ನೀರು ಮತ್ತು ಬೆಳಕು ಜೀವ ಸಂಕುಲಕ್ಕೆ ಅತ್ಯಗತ್ಯ. ಆದರೆ ಜೀವಕ್ಕೆ ಅಗತ್ಯವಾದ ನೀರಿನ ಬಗ್ಗೆ ಬಹಳಷ್ಟು ಆಸಕ್ತಿಕರ ವಿಷಯಗಳು ಗೊತ್ತಿಲ್ಲ. ತುಂಬಾ ಜನರಿಗೆ ಎಷ್ಟು ಲೀಟರ್ ನೀರು ಕುಡಿಯಬೇಕು ಎಂಬ ನಿಖರವಾದ ಮಾಹಿತಿ ಇಲ್ಲ. ಕೆಲವರು ಹೆಚ್ಚು, ಇನ್ನು ಕೆಲವರು ಕಡಿಮೆ ಕುಡಿಯುತ್ತಾರೆ. ಆದರೆ, ಹಾಗೆ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಅಂತಾರೆ ತಜ್ಞರು. ಹಾಗಾದರೆ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? ನೀರು ಕಡಿಮೆ ಕುಡಿದರೆ ಏನಾಗುತ್ತದೆ? ಹೆಚ್ಚು ಕುಡಿದರೆ ಏನಾಗುತ್ತದೆ? ಇವೆಲ್ಲವುಗಳಿಗೆ ತಜ್ಞರ ಮಾತಿನಲ್ಲೇ ಉತ್ತರ ಕಂಡುಕೊಳ್ಳೋಣ.
ಒಬ್ಬ ಸಾಮಾನ್ಯ ವ್ಯಕ್ತಿ ದೀರ್ಘಕಾಲ ಆರೋಗ್ಯವಾಗಿರಲು, ದಿನವೊಂದಕ್ಕೆ 7 ರಿಂದ 10 ಗ್ಲಾಸ್ ನೀರು ಕುಡಿಯಬೇಕು ಎಂಬುದನ್ನು ಅಮೆರಿಕದ ಸಂಶೋಧಕರು ಕಂಡು ಹಿಡಿದಿದ್ದಾರೆ. ಅಂದರೆ 2-3 ಲೀಟರ್ ನೀರು. ಆದಾಗ್ಯೂ, ಬಿಸಿಲಿನಲ್ಲಿ ಕೆಲಸ ಮಾಡುವವರು, ಬಿಸಿಯಾದ ಸ್ಥಳಗಳಲ್ಲಿ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆ ಮಾಡುವವರು ಸ್ವಲ್ಪ ಮಟ್ಟಿಗೆ ಈ ಪ್ರಮಾಣವನ್ನು ಹೆಚ್ಚಿಸಬಹುದು. ಮೇಲಾಗಿ, ನಿತ್ಯ ತೆಗೆದುಕೊಳ್ಳುವ ನೀರಿನ ಪ್ರಮಾಣ ಕಡಿಮೆಯೂ ಇರಬಾರದು, ಹೆಚ್ಚೂ ಇರಬಾರದು ಎಂಬ ಅಂಶ ಬಹಿರಂಗವಾಗಿದೆ. ಏಕೆಂದರೆ ಹೆಚ್ಚು ಅಥವಾ ಕಡಿಮೆ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಅಮೆರಿಕದ "ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್" ನ ಸಂಶೋಧಕರು ನಿತ್ಯ ಸಾಕಷ್ಟು ನೀರು ಕುಡಿಯುವುದರಿಂದ ದೀರ್ಘಾಯುಷ್ಯ ಪಡೆಯಬಹುದು ಎಂಬ ಅಂಶದ ಬಗ್ಗೆಯೂ ಸಂಶೋಧನೆ ನಡೆಸಿದ್ದಾರೆ. ಸುಮಾರು 30 ವರ್ಷಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ 11,255 ಜನರು ಭಾಗವಹಿಸಿದ್ದರು ಎಂಬುದು ಗಮನಾರ್ಹ. ಈ ವೇಳೆ 30-45 ವರ್ಷದವರ ಆರೋಗ್ಯದ ವಿವರಗಳನ್ನು ತೆಗೆದುಕೊಳ್ಳಲಾಗಿದೆ. ಆ ಬಳಿಕ '70-90 ವರ್ಷ' ವಯಸ್ಸಿಗೆ ಬಂದಾಗಿನ ಡೇಟಾಗಳನ್ನು ಸಂಶೋಧನೆಗೆ ತೆಗೆದುಕೊಳ್ಳಲಾಗಿದೆ. ಹೀಗೆ ಸಂಗ್ರಹಿಸಿದ ಎಲ್ಲ ವಿವರಗಳು "ಇ ಬಯೋಮೆಡಿಸಿನ್" ಮೆಡಿಕಲ್ ಜರ್ನಲ್ನಲ್ಲಿ ಪ್ರಕಟವಾಗಿತ್ತು. ಆ ವರದಿಯಲ್ಲಿ ಬೆಳಕಿಗೆ ಬಂದಿರುವ ವಿವರಗಳ ಜತೆಗೆ ಆರೋಗ್ಯಕರ ಬದುಕಿಗೆ ಕುಡಿಯುವ ನೀರಿನ ಅಗತ್ಯತೆಗೆ ಸಂಬಂಧಿಸಿದ ನಾನಾ ಅಂಶಗಳನ್ನು ‘ಕಿಮ್ಸ್ ವೈದ್ಯಕೀಯ ಶಿಕ್ಷಣ ಮತ್ತು ಶೈಕ್ಷಣಿಕ’ ಡೈರೆಕ್ಟರ್ ಡಾ.ಮಣಿಮಾಲ ರಾವ್ ವಿವರಿಸಿದ್ದಾರೆ.
ಏನಿದು ವಾಟರ್ ವೇಟ್ ಸಮಸ್ಯೆ: ಅದನ್ನು ಕಡಿಮೆ ಮಾಡುವುದು ಹೇಗೆ?: ಬಾಯಾರಿಕೆಯಾದ ತಕ್ಷಣ ಕುಡಿಯಿರಿ : ಹೆಚ್ಚು ನೀರು ಕುಡಿಯುತ್ತೀರಾ, ಆದರೂ ಅದು ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಅದು ಹೊರಗೆ ಹೋಗುತ್ತಲೇ ಇದೆಯಾ, ಹಾಗಾದರೆ ನಿಮ್ಮ ಕಿಡ್ನಿ ನೀರನ್ನು ಹೆಚ್ಚಾಗಿ ಪಿಲ್ಟರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥ. . ಈ ಸಮಸ್ಯೆ ಇಲ್ಲದೆ ಬಾಯಾರಿಕೆಯಾದಾಗಲೆಲ್ಲ ಶುದ್ಧ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಡಾ.ಮಣಿಮಾಲ ರಾವ್. ಬಾಯಾರಿಕೆಯಾದ ನಂತರ ಆಗಾಗ ನೀರು ಕುಡಿಯಬೇಕು. ಕನಿಷ್ಠ 15 ನಿಮಿಷಕ್ಕೊಮೆ ನೀರು ಗುಟುಕುರಿಸುವುದು ಉತ್ತಮ.