ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ ಪ್ರಕರಣಗಳು ಕಿಡ್ನಿ ಆರೋಗ್ಯಕ್ಕೆ ಬೆದರಿಕೆಯ ಎಚ್ಚರಿಕೆ ಗಂಟೆ ಆಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ವಿಶ್ವ ಕಿಡ್ನಿ ದಿನವನ್ನು ಮಾರ್ಚ್ 14 ರಂದು ಆಚರಿಸುವ ಮೂಲಕ ಮೂತ್ರಪಿಂಡಗಳಿಗೆ ಉಂಟಾಗುವ ವಿವಿಧ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಭಾರತದ ಶೇ 10ರಷ್ಟು ಜನರು ದೀರ್ಘಾವಧಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಸಾವಿಗೆ ಕಾರಣವಾಗುತ್ತಿರುವ ಎಂಟನೇ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಆರೋಗ್ಯ ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವು ದೇಶದ 315 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಕಿಡ್ನಿ ರೋಗದ ಉಲ್ಬಣತೆಗೆ ಕಾರಣವಾಗುವ ಅಂಶವಾಗಿದೆ.
ಅಧಿಕ ರಕ್ತದೊತ್ತಡವನ್ನು ನಿಶಬ್ಧ ಹಂತಕ ಎಂದೇ ಕರೆಯಲಾಗುತ್ತದೆ. ಕಾರಣ ಇದು ಹಲವು ರೋಗಗಳು ಸದ್ದಿಲದಂತೆ ಪ್ರಗತಿ ಹೊಂದಲು ಪ್ರಮುಖ ಅಂಶವಾಗಿದೆ. ಹೃದಯ ಮತ್ತು ಮೆದುಳಿನ ಅಪಾಯವನ್ನು ಹೆಚ್ಚಿಸುವುದರ ಜೊತೆಗೆ ಇದು ಕಿಡ್ನಿಯ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದರಿಂದ ಮೂತ್ರಪಿಂಡ ಕಾರ್ಯನಿರ್ವಹಣೆ ಸಾಮರ್ಥ್ಯ ಕುಗ್ಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತದೆ. ದೀರ್ಘಕಾಲ ಮೂತ್ರಪಿಂಡ ಕಾಯಿಲೆ ಅಂತಿಮವಾಗಿ ಕೊನೆಯ ಹಂತದ ಮೂತ್ರಪಿಂಡ ಹಾನಿಗೆ ಕಾರಣವಾಗುತ್ತದೆ. ಕಡೆಗೆ ಅದು ಕಾರ್ಯಾಚರಣೆ ನಡೆಸುವುದನ್ನು ನಿಲ್ಲಿಸುತ್ತದೆ.
ಈ ಕುರಿತು ಮಾತನಾಡಿರುವ ಜೋಧ್ಪುರ್ ಏಮ್ಸ್ನ ಪ್ರೊ. ಪಂಕಜ್ ಭರಧ್ವಾಜ್, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಅನೇಕ ರೋಗಿಗಳನ್ನು ನಾನು ಕಾಣುತ್ತಿದ್ದೇವೆ. ಅವರ ಔಷಧಿ ನಿರ್ವಹಣೆ ಮತ್ತು ಅಭ್ಯಾಸ ಬದಲಾಯಿಸುವುದು ಪ್ರಮುಖವಾಗಿದೆ. ಅಧಿಕ ರಕ್ತದೊತ್ತಡವು ಕಿಡ್ನಿ ಹಾನಿಗೆ ಕಾರಣವಾಗುತ್ತದೆ ಎಂಬುದರ ಕುರಿತು ನಾವು ಮಾತನಾಡುವುದಿಲ್ಲ ಎಂದರು.