ಕರ್ನಾಟಕ

karnataka

ETV Bharat / health

ಹುರುಳಿ ಕಾಳು ನಿಮ್ಮ ಆಹಾರದಲ್ಲಿ ಸೇರಿಸಿದರೆ ಶೀತ, ಆಸ್ತಮಾ, ಕೀಲು ನೋವಿಗೆ ಪರಿಹಾರ: ತಜ್ಞರು ಸಲಹೆ - HORSE GRAM HEALTH BENEFITS

Health Benefits of Horse Gram: ಹುರುಳಿ ಕಾಳನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸಿದರೆ, ಶೀತ, ಆಸ್ತಮಾ, ಕೀಲು ನೋವು ಸೇರಿದಂತೆ ಹಲವು ರೋಗಗಳಿಂದ ರಕ್ಷಿಸಲು ಸಾಧ್ಯವಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

HORSE GRAM GOOD FOR HEALTH  HORSE GRAM FOR WEIGHT LOSS  HORSE GRAM FOR ASTHMA  ಹುರುಳಿ ಕಾಳಿನ ಲಾಭಗಳು
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : Jan 24, 2025, 12:42 PM IST

Health Benefits of Horse Gram:ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚುತ್ತಿದೆ. ಶೀತ ಗಾಳಿಯಿಂದ ದೇಹದ ಉಷ್ಣಾಂಶದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ವೈರಸ್‌ಗಳು ಹಾಗೂ ಬ್ಯಾಕ್ಟೀರಿಯಾಗಳು ದೇಹವನ್ನು ತ್ವರಿತವಾಗಿ ಪ್ರವೇಶ ಮಾಡುತ್ತವೆ. ಉಸಿರಾಟದ ಭಾಗವು ದುರ್ಬಲಗೊಳ್ಳುತ್ತದೆ. ಜೊತೆಗೆ ಶೀತ, ಕೆಮ್ಮು ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಆಸ್ತಮಾ, ಬ್ರಾಂಕೈಟಿಸ್ ಹಾಗೂ ನ್ಯುಮೋನಿಯಾದಂತಹ ಉಸಿರಾಟದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಚಳಿಗಾಲದಲ್ಲಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ಪೋಷಣೆ ಅವಶ್ಯವಾಗಿದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.

ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶ ಹೊಂದಿರುವ ದ್ವಿದಳ ಧಾನ್ಯಗಳನ್ನು ಸೇರಿಸಬೇಕಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಪ್ರಚಲಿತದಲ್ಲಿರುವ ಉಸಿರಾಟದ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಹುರುಳಿ ಕಾಳಿನಲ್ಲಿ ಯಾವ ಪೋಷಕಾಂಶಗಳಿವೆ? ದೈನಂದಿನ ಆಹಾರದಲ್ಲಿ ಹುರುಳಿ ಕಾಳು ಸೇವಿಸುವುದರಿಂದಾಗುವ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ನೋಡೋಣ.

ಪೋಷಕಾಂಶಗಳ ಕಣಜ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರು ಚಿಕ್ಕ ಧಾನ್ಯಗಳಲ್ಲಿ ಒಂದಾದ ಹುರುಳಿ ಕಾಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಒಳ್ಳೆಯ ಲಾಭ ಪಡೆಯಬಹುದು. ಈ ಕಾಳಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕ್ಯಾರೋಟಿನ್, ರಂಜಕ, ಫೈಬರ್, ಜೊತೆಗೆ ವಿಟಮಿನ್‌ಗಳಾದ ಬಿ1, ಬಿ2, ಬಿ6 ಮತ್ತು ಸಿ ಸಮೃದ್ಧವಾಗಿವೆ. ಹುರುಳಿ ಕಾಳು ಮಾಂಸಕ್ಕೆ ಸಮಾನವಾದ ಪ್ರೋಟೀನ್ ಸಹ ಒದಗಿಸುತ್ತದೆ. ಚಳಿಗಾಲದಲ್ಲಿ ಈ ಕಾಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯದ ಲಾಭಗಳೇನು?:ಚಳಿಗಾಲದಲ್ಲಿ ಹುರುಳಿ ಕಾಳು ಸೇವಿಸುವುದರಿಂದ ಇದರಲ್ಲಿನ ಪೋಷಕಾಂಶಗಳು ದೇಹವನ್ನು ಬೆಚ್ಚಗಿಡಲು ಸಹಾಯವಾಗುತ್ತದೆ. ಈ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿಯನ್ನು ಪೂರೈಕೆ ಮಾಡುತ್ತವೆ. ಇದರಲ್ಲಿ ಕರಗುವ ನಾರಿನ ಪದಾರ್ಥಗಳು ಹೆಚ್ಚಿವೆ. ಹುರುಳಿ ಕಾಳನ್ನು ಆಹಾರದಲ್ಲಿ ಸೇರಿಸುವುದರಿಂದ ಮಲಬದ್ಧತೆ, ಗ್ಯಾಸ್ಟ್ರಿಕ್​ ಹಾಗೂ ಅಜೀರ್ಣ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ. ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತವೆ.

ಉಸಿರಾಟದ ತೊಂದರೆಗೆ ಉತ್ತಮ:ಚಳಿಗಾಲದಲ್ಲಿ ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಅನೇಕ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ನಿಮ್ಮ ಆಹಾರದಲ್ಲಿ ಹುರುಳಿ ಕಾಳು ಸೇರಿಸುವುದರಿಂದ ಒಳ್ಳೆಯ ಫಲಿತಾಂಶಗಳು ದೊರೆಯುತ್ತವೆ. ಶೀತ, ಆಸ್ತಮಾ, ಬ್ರಾಂಕೈಟಿಸ್, ಗಂಟಲಿನ ಸೋಂಕು, ಮೂತ್ರಪಿಂಡದ ಕಲ್ಲುಗಳು ಮತ್ತು ಹುಣ್ಣುಗಳಿಂದ ರಕ್ಷಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಹುರುಳಿ ಕಾಳಿನಲ್ಲಿರುವ ಪೋಷಕಾಂಶಗಳು ಈ ರೋಗಗಳನ್ನು ಎದುರಿಸಲು ಬಹಳ ಸಹಾಯಕವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧನಾ ತಂಡವು ಕಂಡುಹಿಡಿದಿದೆ. ಸಂಬಂಧಿತ ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೃದಯದ ಆರೋಗ್ಯಕ್ಕೆ ಉತ್ತಮ: ಹುರುಳಿ ಕಾಳಿನಲ್ಲಿ ಫೀನಾಲಿಕ್ ಸಂಯುಕ್ತಗಳು ಕೊಲೆಸ್ಟ್ರಾಲ್ ಕರಗಿಸಿ, ಆ್ಯಂಟಿ-ಲಿಥೋಜೆನಿಕ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಹೃದಯವನ್ನು ಆರೋಗ್ಯವಾಗಿರುಸುತ್ತದೆ. ಈ ಕಾಳಿನಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ರಕ್ತದೊತ್ತಡ ಹಾಗೂ ಶುಗರ್​ ನಿಯಂತ್ರಣದಲ್ಲಿ ಇಡುತ್ತದೆ. ಮತ್ತು ಯಕೃತ್ತಿನ ಕಾರ್ಯ ಸುಧಾರಿಸುತ್ತದೆ. ಹುರುಳಿ ಕಾಳು ಸೇವಿಸುವುದರಿಂದ ರಕ್ತಹೀನತೆ, ಕೀಲು ನೋವು ಹಾಗೂ ಇತರ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ದೊರೆಯುತ್ತದೆ. ಇದರೊಂದಿಗೆ ಮುಟ್ಟಿನ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಈ ಕಾಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಖನಿಜಗಳು ಚರ್ಮ ಹಾಗೂ ಕೂದಲನ್ನು ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹುರುಳಿ ಕಾಳು ಹೇಗೆ ಸೇವಿಸಬೇಕು?:ಹುರುಳಿ ಕಾಳು ಬೇಯಿಸಿದ ನೀರನ್ನು ಕುದಿಸಿ ರಸಂ ಮಾಡಿ ಸೇವಿಸಬಹುದು. ಹಲವು ಜನರಿಗೆ ಇದು ಇಷ್ಟವಾಗುತ್ತದೆ. ಇಲ್ಲದಿದ್ದರೆ, ನೀವು ಟೊಮೆಟೊ ಹಾಕಿ ಪಲ್ಯ ಮಾಡಬಹುದು. ನೀವು ಹುರುಳಿ ಕಾಳನ್ನು ಬೇಯಿಸಿ ಅಥವಾ ನೆನೆಸಿ ಮೊಳಕೆಯೊಡೆದ ನಂತರ ತಿನ್ನಬಹುದಾಗಿದೆ. ಇದರೊಳಗೆ ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು, ನಿಂಬೆ ರಸ, ಉಪ್ಪು ಮತ್ತು ಚಾಟ್ ಮಸಾಲ ಹಾಕಿ ಸೇವಿಸಿದರೆ ಮತ್ತಷ್ಟು ರುಚಿಯಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ABOUT THE AUTHOR

...view details