ಕರ್ನಾಟಕ

karnataka

ಕಲ್ಲು ಸಕ್ಕರೆಯೊಂದಿಗೆ ರೋಸ್‌ವುಡ್​ ಎಲೆ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತಾ? - Benefits Of Sheesham Leaves

By ETV Bharat Karnataka Team

Published : Jun 25, 2024, 10:06 PM IST

ನೀವು ರೋಸ್‌ವುಡ್ ಮರಗಳನ್ನು ನೋಡಿರಬೇಕು. ಈ ರೋಸ್‌ವುಡ್‌ನ ಎಲೆಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ತಿಳಿದಿದೆಯೇ?. ಔಷಧೀಯ ಗುಣಗಳು ಇದರಲ್ಲಿವೆ. ಗಂಭೀರವಾದ ಚಿಕಿತ್ಸೆಗಳಿಗೂ ಪ್ರಯೋಜನಕಾರಿ.

HEALTH BENEFITS  SHEESHAM LEAVES AND SUGAR CANDY  SHISHAM LEAVES HEALTH BENEFITS
ರೋಸ್​ ವುಡ್​ ಎಲೆ (ETV Bharat)

ರೋಸ್ ​ವುಡ್​ ಮರ (Sheesham) ತನ್ನ ಶಕ್ತಿಗೆ ಹೆಸರುವಾಸಿ. ಇತ್ತೀಚಿನ ದಿನಗಳಲ್ಲಿ ಇದರ ಎಲೆಗಳಿಗೆ ಬೇಡಿಕೆ ಬಂದಿದೆ. ಏಕೆಂದರೆ ಇವುಗಳಲ್ಲಿ ಹಲವು ರೋಗಗಳನ್ನು ಗುಣಪಡಿಸುವ ಔಷಧೀಯ ಅಂಶಗಳಿವೆ.

ಯೋಗ ಗುರು ಬಾಬಾ ರಾಮದೇವ್ ರೋಸ್ ವುಡ್ ಎಲೆಗಳಲ್ಲಿ ಔಷಧೀಯ ಗುಣಗಳಿರುವುದನ್ನು ದೃಢಪಡಿಸಿದ್ದಾರೆ. ಈ ಎಲೆಗಳನ್ನು ಕಲ್ಲು ಸಕ್ಕರೆಯೊಂದಿಗೆ ತಿನ್ನಬೇಕು. ಹೀಗೆ ಮಾಡುವುದರಿಂದ ರೋಗಗಳು ಶಮನವಾಗುತ್ತವಂತೆ. ಅಂದಹಾಗೆ, ರೋಸ್​ ವುಡ್​ ಮರಗಳು ದೇಶದೆಲ್ಲೆಡೆ ಕಂಡುಬರುತ್ತವೆ.

  • ಮಹಿಳೆಯರಲ್ಲಿ ಲೈಕೋರಿಯಾ ಎಂಬುದು ಸಾಮಾನ್ಯ ಸಮಸ್ಯೆ. ಮುಟ್ಟಿನ ಮೊದಲು ಅಥವಾ ನಂತರ ಒಂದರಿಂದ ಎರಡು ದಿನಗಳವರೆಗೆ ಸಂಭವಿಸುತ್ತದೆ. ಆದರೆ ಕೆಲವೊಮ್ಮೆ ಈ ಸಮಸ್ಯೆ ಲ್ಯುಕೋರಿಯಾದಿಂದ ಬಹಳ ಗಂಭೀರ ಸ್ವರೂಪ ಪಡೆಯುತ್ತದೆ. ಪೀಡಿತ ಮಹಿಳೆಯ ಯೋನಿಯಿಂದ ಬಿಳಿ, ಹಳದಿ ಅಥವಾ ಕೆಂಪು ಬಣ್ಣದ ಜಿಗುಟಾದ ಮತ್ತು ವಾಸನೆಯಂತಹ ವಸ್ತು ಸೋರಿಕೆಯಾಗುತ್ತದೆ. ಇದು ಕೆಲವೊಮ್ಮೆ ಹಲವು ವಾರಗಳವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರೋಸ್‌ವುಡ್ ಎಲೆಗಳೊಂದಿಗೆ ಕಲ್ಲು ಸಕ್ಕರೆ ಸೇವಿಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
  • ರೋಸ್‌ವುಡ್ ಎಲೆಗಳೊಂದಿಗೆ ಕಲ್ಲು ಸಕ್ಕರೆ ಸೇವಿಸುವುದರಿಂದ ಪಿಸಿಒಡಿಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇವುಗಳನ್ನು ಒಟ್ಟಿಗೆ ತಿನ್ನುವುದರಿಂದ ಮಹಿಳೆಯರ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
  • ಅನೇಕ ಮಹಿಳೆಯರು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವದ ಸಮಸ್ಯೆ ಎದುರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ರೋಸ್​ ವುಡ್ ಎಲೆಗಳೊಂದಿಗೆ ಕಲ್ಲು ಸಕ್ಕರೆ ತಿನ್ನುವುದರಿಂದ ಹೆಚ್ಚಿನ ರಕ್ತಸ್ರಾವದಿಂದ ಪರಿಹಾರ ಸಿಗುತ್ತದೆ.
  • ಅತಿಯಾದ ಶಾಖ ಅಥವಾ ಕೈಗಳ ಅತಿಯಾದ ಬೆವರುವಿಕೆ, ಪಾದದ ಅಡಿಭಾಗದಲ್ಲಿ ಉರಿಯಂಥ ಸಮಸ್ಯೆ ಇದ್ದರೆ 10-15 ಪೀಪಲ್ ಮತ್ತು ರೋಸ್​ವುಡ್​ ಎಲೆಗಳನ್ನು ಕುಲ್ಲು ಸಕ್ಕರೆ ಪುಡಿಮಾಡಿ ಅದರ ಶರಬತ್ ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಲಾಭ ಪಡೆಯುತ್ತೀರಿ.
  • ಮೂಗಿನಲ್ಲಿ ರಕ್ತಸ್ರಾವದ ಸಮಸ್ಯೆ ಇದ್ದರೆ 10ರಿಂದ 12 ಎಲೆಗಳನ್ನು ಪುಡಿಮಾಡಿ ಅದರ ರಸ ಕುಡಿಯಿರಿ. ಈ ಸಮಸ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ನಿವಾರಣೆಯಾಗುತ್ತದೆ.
  • ರೋಸ್‌ವುಡ್ ಎಲೆಗಳೊಂದಿಗೆ ಕಲ್ಲು ಸಕ್ಕರೆಯನ್ನು ಸೇರಿಸಿ ಶರಬತ್ತು ಮಾಡಿಕೊಂಡು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿಗೆ ತುಂಬಾ ಪ್ರಯೋಜನಕಾರಿ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಇದನ್ನು ಬೆಳಗ್ಗೆ ಮತ್ತು ಸಂಜೆ ಕುಡಿಯಬಹುದು.

ಸೂಚನೆ: ಈ ಮೇಲ್ಕಂಡ ಮಾಹಿತಿಯನ್ನು ತಜ್ಞರ ಸಲಹೆ ಪಡೆದು ಅನುಸರಿಸಬಹುದು.

ಇದನ್ನೂ ಓದಿ:ಬೆನ್ನು ನೋವಿಗೆ ಉಪ್ಪು ನೀರಿನ ಸ್ನಾನ ಪರಿಹಾರವೇ?: ವೈದ್ಯರು ಹೇಳುವುದೇನು?, ಏನೆಲ್ಲ ಪ್ರಯೋಜನಗಳಿವೆ - SALT WATER BATH FOR BACK PAIN

ABOUT THE AUTHOR

...view details