ಕರ್ನಾಟಕ

karnataka

ETV Bharat / health

ಎಣ್ಣೆ ಬೇಕಿಲ್ಲ, ಒಲೆಯ ಅಗತ್ಯವೂ ಇಲ್ಲ: ಈ ಹಸಿಮೆಣಸಿನಕಾಯಿ ಚಟ್ನಿ ತಿಂದರೆ ಆಹಾ ಎನ್ನದೇ ಇರಲ್ಲ! - greeen chilli chatni recipe - GREEEN CHILLI CHATNI RECIPE

ರೊಟ್ಟಿಯಲ್ಲಿ ಚಟ್ನಿ ಎಂದಾಕ್ಷಣ ಟೊಮೇಟೊ, ತೊಂಡೆ ಹಣ್ಣು ಚಟ್ನಿ ನೆನಪಿಗೆ ಬರುತ್ತದೆ. ನೀವು ಎಂದಾದರೂ ಈ ಹಸಿಮೆಣಸಿನಕಾಯಿ ಚಟ್ನಿಯನ್ನು ತಿಂದಿದ್ದೀರಾ. ಇದನ್ನು ಮಾಡಲು ಒಲೆ ಹಚ್ಚುವ ಅಗತ್ಯವಿಲ್ಲ. ಅಡುಗೆ ಎಣ್ಣೆಯೂ ಬೇಕಿಲ್ಲ. ಅಜ್ಜಿ ಕಾಲದ ಈ ಚಟ್ನಿಯನ್ನು ಮಾಡಿ ಸವಿದು ನೋಡಿ.

ಹಸಿಮೆಣಸಿನಕಾಯಿ ಚಟ್ನಿ
ಹಸಿಮೆಣಸಿನಕಾಯಿ ಚಟ್ನಿ (ETV Bharat)

By ETV Bharat Karnataka Team

Published : Jul 29, 2024, 10:53 PM IST

Updated : Jul 29, 2024, 10:58 PM IST

ಊಟದಲ್ಲಿ ಹಲವು ಬಗೆಯ ಖಾದ್ಯಗಳನ್ನು ಈಗ ಮಾಡಲಾಗುತ್ತದೆ. ಚೈನೀಸ್​​ ಫುಡ್​ ಅಂತೂ ಈಗ ಫುಲ್​ ಫೇಮಸ್​. ಆದರೆ, ನಮ್ಮ ಪೂರ್ವಜರು ಮಾಡುವ ಖಾದ್ಯಗಳು ಮಾತ್ರ ಎಂದಿಗೂ ರುಚಿಯಲ್ಲಿ ಟಾಪ್​. ರೊಟ್ಟಿಗೆ ಪಲ್ಯದ ಜೊತೆಗೆ ಚಟ್ನಿಯಂತಹ ಸೈಡ್ಸ್​ ಇದ್ದರೆ ಆಹಾ ಅದರ ಸ್ವಾದವೇ ಬೇರೆ. ಅಂತಹ ಸ್ವಾದಿಷ್ಟ ಚಟ್ನಿಗಳಲ್ಲಿ ಹಸಿಮೆಣಸಿನಕಾಯಿ ಚಟ್ನಿಯೂ ಒಂದು. ಅದನ್ನು ನೋಡಿದರೆ, ಬಾಯಲ್ಲಿ ನೀರೂರುತ್ತದೆ. ಥೇಟ್​ ಹಳ್ಳಿ ಶೈಲಿಯ ಈ ಚಟ್ನಿಯನ್ನು ಮಾಡುವುದು ಹೇಗೆ, ಅದಕ್ಕೇನು ಬೇಕು ಎಂಬುದನ್ನು ತಿಳಿಯೋಣ.

ಚಟ್ನಿಯನ್ನು ರುಬ್ಬಲು ನಮಗೆ ಈಗ ಮಿಕ್ಸರ್​, ಗ್ರೈಂಡರ್​ಗಳ ವ್ಯವಸ್ಥೆ ಇದೆ. ಈ ಹಿಂದೆ ಕಲ್ಲಿನ ಒರಳು ಮಾತ್ರ ಲಭ್ಯವಿತ್ತು. ಅದರಲ್ಲಿ ಮಾಡಿದ ಚಟ್ನಿಯ ರುಚಿಯು ಅಮೃತಕ್ಕೆ ಸಮ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದ ಆ ಖಾದ್ಯ ಎಂದಿಗೂ ಫೇಮಸ್​. ಈಗ ಇಲ್ಲಿ ವಿವರಿಸಿರುವ ಚಟ್ನಿಯೂ ಆ ಸಾಲಿಗೆ ಸೇರುತ್ತದೆ.

ಹಸಿರು ಮೆಣಸಿನಕಾಯಿ ಹುಣಸೆಹಣ್ಣಿನ ಚಟ್ನಿ ಎಂದು ಕರೆಯುವ ಇದನ್ನು, ನಮ್ಮ ಪೂರ್ವಜರು ಅಡುಗೆ ಎಣ್ಣೆ ಹಾಕದೆ, ಒಲೆ ಹಚ್ಚದೆ ತಯಾರಿಸುತ್ತಿದ್ದರು. ಅದರಲ್ಲೂ ಗದ್ದೆ ಕೆಲಸಕ್ಕೆ ಹೋಗುವವರು ಇದನ್ನೇ ಹೆಚ್ಚು ತಿನ್ನುತ್ತಿದ್ದರು. ಇದು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಖಾದ್ಯವಾಗಿದೆ. ಈ ರುಚಿಕರವಾದ ಹಸಿರು ಚಟ್ನಿಯನ್ನು ನೀವು ಕಡಿಮೆ ಪದಾರ್ಥಗಳೊಂದಿಗೆ ಕಡಿಮೆ ಸಮಯದಲ್ಲಿ ತಯಾರಿಸಬಹುದು. ರುಚಿ ಮಾತ್ರ ಆಹಾ ಎನ್ನುಂವತಿರುತ್ತೆ.

ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳಿವು:

  • ಹಸಿರು ಮೆಣಸಿನಕಾಯಿ- 10 ರಿಂದ 12
  • ಈರುಳ್ಳಿ - 1
  • ಜೀರಿಗೆ - 1 ಟೀ ಸ್ಪೂನ್
  • ಹುಣಸೆಹಣ್ಣು - ಸ್ವಲ್ಪ
  • ಬೆಳ್ಳುಳ್ಳಿ ಎಸಳು - 10
  • ಉಪ್ಪು - ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಪುಡಿ - ಸ್ವಲ್ಪ

ಈ ಚಟ್ನಿ ತಯಾರಿಸುವ ವಿಧಾನ ಹೇಗೆ?:

  • ಮೊದಲನೆಯದಾಗಿ ಹಸಿರು ಮೆಣಸಿನಕಾಯಿಯ ಬದಲು ದಪ್ಪ ಚರ್ಮ ಮತ್ತು ಖಾರ ಕಡಿಮೆ ಇರುವ ಮೆಣಸಿನಕಾಯಿಯನ್ನು ಆರಿಸಿ ಸಣ್ಣಗೆ ಕತ್ತರಿಸಬೇಕು.
  • ನೀವು ಸ್ಪೈಸಿ ಹೆಚ್ಚು ತಿನ್ನುವವರಾಗಿದ್ದರೆ, ಖಾರದ ಮೆಣಸಿನಕಾಯಿಗಳನ್ನು ಸೇರಿಸಿಕೊಳ್ಳಿ.
  • ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು ತೆಗೆದುಕೊಂಡು ಅದನ್ನು ಸಣ್ಣ ಬಟ್ಟಲಿನಲ್ಲಿ ನೆನೆಸಿಡಿ. ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಕೊಂಡು ಇಟ್ಟುಕೊಳ್ಳಿ.
  • ಒಂದು ಈರುಳ್ಳಿ ತೆಗೆದುಕೊಂಡು ಅದನ್ನು ಐದು ಅಥವಾ ಆರು ತುಂಡುಗಳಾಗಿ ಕತ್ತರಿಸಿ.
  • ಒಂದು ಚಮಚ ಜೀರಿಗೆಯನ್ನು ಮಿಕ್ಸರ್​ ಅಥವಾ ಕಲ್ಲಿನ ಒರಳಿಗೆ ಹಾಕಿ ನಿಧಾನವಾಗಿ ರುಬ್ಬಿಕೊಳ್ಳಿ.
  • ನಂತರ ನೆನೆಸಿಟ್ಟ ಹುಣಸೆ ಹಣ್ಣಿನ ರಸವನ್ನು ಅದಲ್ಲಿ ಹಾಕಿಕೊಂಡು ನುಣ್ಣಗೆ ರುಬ್ಬಿ.
  • ಈಗ ಬೆಳ್ಳುಳ್ಳಿ ಎಸಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣವನ್ನು ಮತ್ತೊಮ್ಮೆ ರುಬ್ಬಿಕೊಳ್ಳಿ.
  • ಅದರ ನಂತರ, ಕತ್ತರಿಸಿಕೊಂಡಿರುವ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ರುಬ್ಬಿಕೊಳ್ಳಿ.
  • ಬಳಿಕ ಕಟ್​ ಮಾಡಿಟ್ಟ ಈರುಳ್ಳಿಯನ್ನು ಸೇರಿಸಿ. ಸ್ವಲ್ಪ ಹಸಿರು ಬಣ್ಣಕ್ಕೆ ಬರುವಂತೆ ರುಬ್ಬಿಕೊಳ್ಳಿ. ತೀರಾ ನುಣ್ಣಗೆ ಅಲ್ಲದೆ, ಚಿಕ್ಕ ಚಿಕ್ಕದಾಗಿ ನಾಲಿಗೆಗೆ ಸಿಗುವುದಂತೆ ರುಬ್ಬಬೇಖು. ಇದರಿಂದ ರುಚಿ ಹೆಚ್ಚುತ್ತದೆ.
  • ಹೀಗೆ ಹಸಿರು ಮೆಣಸಿನಕಾಯಿಯನ್ನು ರುಬ್ಬಿದ ನಂತರ ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
  • ಅಷ್ಟೇ.. ರುಚಿಕರವಾದ ಹಳ್ಳಿ ಶೈಲಿಯ ಚಟ್ನಿ ರೆಡಿಯಾಗುತ್ತದೆ.
  • ಇದನ್ನು ಬಿಸಿಯಾದ ಅನ್ನಕ್ಕೆ ಹಾಕಿಕೊಂಡು ತಿನ್ನಿ, ಆಹಾ ಏನು ರುಚಿ ಎಂದು ನೀವೇ ಉದ್ಗರಿಸುತ್ತೀರಿ.
  • ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಲ್ಲಿನ ಒರಳಿನಲ್ಲಿ ಹಾಕಿ ರುಬ್ಬಿದ ಹಸಿರು ಮೆಣಸಿನಕಾಯಿ ಹುಣಸೆಹಣ್ಣಿನ ಚಟ್ನಿಯು ತುಂಬಾ ರುಚಿಕರವಾಗಿರುತ್ತದೆ.
  • ನಿಮ್ಮ ಬಳಿ ಒರಳು ಇಲ್ಲವಾದಲ್ಲಿ ಮಿಕ್ಸಿಯಲ್ಲಿ ಹಾಕಿ ತೀರಾ ನುಣ್ಣಗಲ್ಲದೆ, ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.

ಇದನ್ನೂ ಓದಿ:ಮಳೆಗಾಲದಲ್ಲಿ ತಯಾರಿಸಿ ಟೊಮೆಟೊ-ಕಾಳುಮೆಣಸಿನ ರಸಂ; ಬಿಸಿ ಅನ್ನದ ಜೊತೆ ತುಂಬಾ ಟೇಸ್ಟಿ! - TOMATO PEPPER RASAM RECIPE

Last Updated : Jul 29, 2024, 10:58 PM IST

ABOUT THE AUTHOR

...view details