ಹೈದರಾಬಾದ್: ವೈರಸ್ ಮತ್ತು ಬ್ಯಾಕ್ಟಿರೀಯಾಗಳು ಸೋಂಕಿನ ರೂಪವಾಗಿರುತ್ತದೆ. ಫಂಗಸ್ (ಶಿಲೀಂಧ್ರ)ಗಳು ಇದರ ಹೊರತಲ್ಲ. ಅನೇಕ ಹಾನಿಕಾರಕ ಫಂಗಸ್ಗಳು ಜೀವಕ್ಕೆ ಕುತ್ತು ತರುತ್ತದೆ. ಅದರಲ್ಲಿ ಕೆಲವು ಫಂಗಸ್ಗಳು ಚರ್ಮ ಸಮಸ್ಯೆ ಮತ್ತು ಶ್ವಾಸಕೋಶ ಸೋಂಕಿನಂತಹ ರೋಗಕ್ಕೆ ಕಾರಣವಾಗುತ್ತದೆ.
ಫಂಗಸ್ ಸರ್ವಭಕ್ಷಕ ಆಗಿದೆ. ಇದು ಸಾಮಾನ್ಯವಾಗಿ ನೆಲ ಮತ್ತು ಮರದ ಮೇಲೆ ಬೆಳೆಯುತ್ತದೆ. ಮನೆ ಮೇಲೆ, ಕೀಟ, ವಾಯುವಿನ ಮೇಲೆ ಇದು ಹಾರಾಡಬಹುದು. ಇವುಗಳನ್ನು ಅನೇಕ ಬಾರಿ ಉಸಿರಾಡುತ್ತವೆ. ಇತರ ಕೀಟಾಣುಗಳಿಗೆ ಹೋಲಿಕೆ ಮಾಡಿದಾಗ ಇದರ ಸೋಂಕು ಕಡಿಮೆ ಪ್ರಮಾಣದಲ್ಲಿರುತ್ತದೆ. ಬಹುತೇಕ ಸಮಯದಲ್ಲಿ ಫಂಗಸ್ ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ. ಎಸ್ಜಿಮಾ, ತುರಿಕೆ ಪಾದಗಳು ಮತ್ತು ಗುಳ್ಳೆಗಳ ರೀತಿ ಸಮಸ್ಯೆ ಉಂಟು ಮಾಡುತ್ತದೆ. ಕೆಲವು ಫಂಗಸ್ಗಳು ಶ್ವಾಸಕೋಶ, ರಕ್ತ ಮತ್ತು ಮಿದುಳಿಗೆ ಅಪಾಯವನ್ನು ಒಡ್ಡುತ್ತವೆ. ಫಂಗಸ್ಗಳು ಎಷ್ಟು ಹಾನಿಕಾರಕ ಎಂಬುದು ಕೋವಿಡ್ ಸಮಯದಲ್ಲೂ ಕಂಡು ಬಂದಿದೆ.
ಯಾರಿಗೆ ಬೇಕಾದರೂ ಅಪಾಯ: ಫಂಗಸ್ ಸೋಂಕು ಯಾರಿಗೆ ಬೇಕಾದರೂ ಆಗಬಹುದು. ಆದರೆ, ಪ್ರತಿರೋಧಕ ಶಕ್ತಿ ಇಲ್ಲದೇ ಇರುವವರಲ್ಲಿ ಇದರ ಅಪಾಯ ಹೆಚ್ಚು. ಎಚ್ಐವಿ ಸೋಂಕಿತರು, ಅಂಗಾಂಗ ಕಸಿಗೆ ಒಳಗಾದವರು, ಕ್ಯಾನ್ಸರ್ ರೋಗಿ, ಶ್ವಾಸಕೋಶ ಸಮಸ್ಯೆ ಹೊಂದಿರುವವರಲ್ಲಿ ಇದರ ಪರಿಣಾಮ ಹೆಚ್ಚಿನ ರೀತಿಯಲ್ಲಿರುತ್ತದೆ.
ಪತ್ತೆ ಮಾಡುವುದು ಕಷ್ಟ: ಫಂಗಸ್ ಸೋಂಕು ದೇಹದೊಳಗೆ ಉಂಟಾಗುವುದರಿಂದ ಇದನ್ನು ಪತ್ತೆ ಮಾಡುವುದು ಕಷ್ಟ. ಬಹುತೇಕ ಇದು ವೈರಲ್ ಮತ್ತು ಬ್ಯಾಕ್ಟಿರೀಯಾ ಸೋಂಕಿನ ಲಕ್ಷಣವೇ ಹೊಂದಿರುತ್ತದೆ. ಜ್ವರ, ಕೆಮ್ಮು, ಉಸಿರಾಟ ತೊಂದರೆ, ಚಳಿ, ತಲೆನೋವು, ಎದೆ ನೋವು, ತಲೆ ಸುತ್ತು ಲಕ್ಷಣ ಹೆಚ್ಚು ಕಾಡುತ್ತದೆ. ಇದರ ಆಧಾರದ ಮೇಲೆ ವೈದ್ಯರು ಇದನ್ನು ನಿರ್ಧರಿಸುತ್ತಾರೆ. ಫಂಗಸ್ ಸೋಂಕಿನ ಅನುಮಾನ ಉಂಟಾದರೆ, ರಕ್ತ ಅಥವಾ ಮೂತ್ರದ ಪರೀಕ್ಷೆಗೆ ಸೂಚಿಸಲಾಗುವುದು. ಕೆಲವು ಸಲ ಶ್ವಾಸಕೋಶ ಎಕ್ಸ್ರೇ, ಸ್ಕಾನ್ಗಳನ್ನು ನಡೆಸಲಾಗುವುದು. ಆದಾಗ್ಯೂ ಸೋಂಕು ಹೋಗುವುದಿಲ್ಲ. ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ಪರಿಣಾಮಕಾರಿಯಾಗದಿದ್ದರೂ ಅದು ಫಂಗಸ್ ಸೋಂಕು ಎಂದು ಊಹಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.