ಕರ್ನಾಟಕ

karnataka

ETV Bharat / health

ಮಧುಮೇಹಿಗಳಿಗೆ ಸಂಜೆ ಹೊತ್ತಿನ ವ್ಯಾಯಾಮ ಹೆಚ್ಚು ಪ್ರಯೋಜನಕಾರಿ: ಅಧ್ಯಯನ ವರದಿ - EXERCISE IN EVENING

ಮಧುಮೇಹಿಗಳು ಸಂಜೆ ಹೊತ್ತು ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಮಧುಮೇಹಿಗಳಿಗೆ ಸಂಜೆ ಹೊತ್ತಿನ ವ್ಯಾಯಾಮ ಹೆಚ್ಚು ಪ್ರಯೋಜನಕಾರಿ
ಮಧುಮೇಹಿಗಳಿಗೆ ಸಂಜೆ ಹೊತ್ತಿನ ವ್ಯಾಯಾಮ ಹೆಚ್ಚು ಪ್ರಯೋಜನಕಾರಿ (IANS (ಸಂಗ್ರಹ ಚಿತ್ರ))

By ETV Bharat Karnataka Team

Published : Jun 16, 2024, 7:40 PM IST

ನವದೆಹಲಿ:ಇನ್ಸುಲಿನ್ ಪ್ರತಿರೋಧ ಅಥವಾ ಟೈಪ್ 2 ಮಧುಮೇಹದ ಅಪಾಯದಲ್ಲಿರುವ ಜನರಿಗಾಗಿ ಒಂದಿಷ್ಟು ಒಳ್ಳೆಯ ಆರೋಗ್ಯ ಸಲಹೆಗಳು ಇಲ್ಲಿವೆ. ಸಂಜೆ ಸಮಯದಲ್ಲಿ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗುವುದರಿಂದ ಇಂಥವರು ತಮ್ಮ ಗ್ಲೂಕೋಸ್ ಮಟ್ಟದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಅಧ್ಯಯನ ವರದಿ ಹೇಳಿದೆ. ವಿಶೇಷವಾಗಿ ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ವಯಸ್ಕರು ಸಂಜೆ ವ್ಯಾಯಾಮ ಮಾಡುವುದು ಪ್ರಯೋಜನಕಾರಿ ಎಂದು ವರದಿ ತಿಳಿಸಿದೆ.

ಒಬೆಸಿಟಿ ಹೆಸರಿನ ಜರ್ನಲ್​ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಫಲಿತಾಂಶಗಳ ಪ್ರಕಾರ, ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗೆ ಮಧ್ಯಮ ಮಟ್ಟದಿಂದ ತೀವ್ರವಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಪುರುಷರು ಮತ್ತು ಮಹಿಳೆಯರಲ್ಲಿ ಗ್ಲೂಕೋಸ್ ನಿಯಂತ್ರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

"ಸೂಕ್ತ ಸಮಯದಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಗ್ಲೂಕೋಸ್ ಚಯಾಪಚಯ ಕ್ರಿಯೆಗಳನ್ನು ಉತ್ತಮಗೊಳಿಸುವ ಹೊಸ ತಂತ್ರವಾಗಿದೆ. ವಿಶೇಷವಾಗಿ ಇನ್ಸುಲಿನ್ ಪ್ರತಿರೋಧ ಹೊಂದಿರುವವರಿಗೆ ಅಥವಾ ಟೈಪ್ 2 ಮಧುಮೇಹ ಬೆಳೆಯುತ್ತಿರುವ ಅಪಾಯ ಹೊಂದಿರುವವರಿಗೆ ಈ ತಂತ್ರ ಅನುಕೂಲಕರವಾಗಿದೆ" ಎಂದು ಸಂಶೋಧಕರು ಹೇಳಿದ್ದಾರೆ.

ಇದಲ್ಲದೆ, ಗ್ಲುಕೋಸ್ ಅಥವಾ ಉಪವಾಸದ ಇನ್ಸುಲಿನ್ ಪ್ರತಿರೋಧದಂತಹ ಕೆಲವು ರೀತಿಯ ದುರ್ಬಲ ಗ್ಲೂಕೋಸ್ ಚಯಾಪಚಯವನ್ನು ಹೊಂದಿರುವ ಜನರಿಗೆ ದೈಹಿಕ ಚಟುವಟಿಕೆಯಿಂದ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಸ್ಪೇನ್ ನ ಗ್ರನಡಾ ವಿಶ್ವವಿದ್ಯಾಲಯದ (ಯುಜಿಆರ್) ವಿಜ್ಞಾನಿಗಳು ತಿಳಿಸಿದ್ದಾರೆ. ಅಧ್ಯಯನದ ಫಲಿತಾಂಶಗಳು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಒಂದೇ ಆಗಿವೆ.

ಸರಾಸರಿ 47 ವರ್ಷ ವಯಸ್ಸಿನ ಒಟ್ಟು 186 ಅಧಿಕ ತೂಕ ಅಥವಾ ಬೊಜ್ಜು ಹೊಂದಿದ ವಯಸ್ಕರು (ಅವರಲ್ಲಿ 50 ಪ್ರತಿಶತ ಮಹಿಳೆಯರು) ಅಧ್ಯಯನದಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ತಮ್ಮ ದೈಹಿಕ ಚಟುವಟಿಕೆ ಮತ್ತು ಗ್ಲೂಕೋಸ್ ಮಟ್ಟವನ್ನು ದಿನದ 24 ಗಂಟೆಗಳ ಕಾಲ ಮಾನಿಟರ್ ಮಾಡಲು 14 ದಿನಗಳ ಕಾಲ ಅಕ್ಸೆಲೆರೋಮೀಟರ್ ಮತ್ತು ನಿರಂತರ ಗ್ಲೂಕೋಸ್ ಮಾನಿಟರ್ ಧರಿಸಿದ್ದರು.

ದಿನದ ಸಮಯದಲ್ಲಿ ವ್ಯಾಯಾಮ ಚಟುವಟಿಕೆಗಳು ಹೆಚ್ಚು ಪ್ರಯೋಜನಕಾರಿ ಎಂಬ ಬಗೆಗಿನ ಮಹತ್ವದ ಅಂಶಗಳನ್ನು ಫಲಿತಾಂಶಗಳು ಎತ್ತಿ ತೋರಿಸಿವೆ. ದಿನದ ಒಂದು ನಿರ್ದಿಷ್ಟ ಸಮಯದಲ್ಲಿ (ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ) ಹೆಚ್ಚು ಸಕ್ರಿಯವಾಗಿರುವುದು ದೈಹಿಕ ಚಟುವಟಿಕೆಯ ಹೃದಯ-ಚಯಾಪಚಯ ಪ್ರಯೋಜನಗಳನ್ನು ಗರಿಷ್ಠಗೊಳಿಸುತ್ತದೆಯೇ ಎಂಬ ಇಂಥ ಮಾಹಿತಿ ಈ ಹಿಂದೆ ತಿಳಿದಿರಲಿಲ್ಲ.

ಇದನ್ನೂ ಓದಿ : 'ಮೂತ್ರ ಸೋರಿಕೆ': ಅಷ್ಟಕ್ಕೂ ಏನಿದು ಮೂತ್ರದ ಅಸಂಯಮ?, ಕಾರಣಗಳೇನು, ಸಮಸ್ಯೆ ತಡೆಗಟ್ಟುವುದು ಹೇಗೆ? - Urine Leakage

ABOUT THE AUTHOR

...view details