ನವದೆಹಲಿ: ಜಂಕ್ ಫುಡ್ಗಳಲ್ಲಿ ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನಾಂಶಗಳು ಹಚ್ಚಾಗಿರುತ್ತವೆ. ಇವು ಕೇವಚ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ಗಳನ್ನು ಸಾಮಾನ್ಯವಾಗಿ ಮಕ್ಕಳು ತಿನ್ನುತ್ತಾರೆ. ಇದರಿಂದ ಅವರ ಬೆಳವಣಿಗೆಗೆ ಕಾರಣವಾಗುವ ಅಗತ್ಯ ಪೋಷಕಾಂಶಗಳ ಕೊರತೆ ಕಾಡುತ್ತದೆ. ಜೊತೆಗೆ ಇದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿರುವ ಸ್ಥೂಲಕಾಯ ಮತ್ತು ಅಧಿಕ ತೂಕಕ್ಕೆ ದಾರಿಮಾಡಿಕೊಡುತ್ತದೆ. ಹಾಗೇ ಅಧಿಕ ರಕ್ತದೊತ್ತಡ, ಹೃದಯ ರೋಗ, ಕ್ಯಾನ್ಸರ್ನಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಸಂಶೋಧನೆಯಲ್ಲಿ ಕಂಡ ಮತ್ತೊಂದು ಅಂಶ ಎಂದರೆ, ಜಂಕ್ಫುಡ್ಗಳು ಮಕ್ಕಳ ನಡುವಳಿಕೆ ಮತ್ತು ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತವೆ. ಈ ಸಂಬಂಧ ಅನೇಕ ಅಧ್ಯಯನಗಳು ಸಾಕ್ಷಿ ನೀಡಿವೆ. ಹೆಚ್ಚಿನ ಫಾಸ್ಟ್ಫುಡ್ ಮತ್ತು ಸಾಫ್ಟ್ ಡ್ರಿಂಕ್ಗಳು ಮಕ್ಕಳಲ್ಲಿ ಹೈಪರ್ಆಕ್ಟಿವಿಟಿ, ಏಕಾಗ್ರತೆ ಕೊರತೆ, ಖಿನ್ನತೆಯಂತಹ ನಡುವಳಿಕೆ ಬದಲಾವಣೆಗೆ ಕಾರಣವಾಗುತ್ತದೆ.
ಜಂಕ್ಫುಡ್ಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತವೆ. ಅಧಿಕ ಜಂಕ್ ಫುಡ್ ಸೇವನೆಯುಂದ ಪೋಷಕಾಂಶ ಕೊರತೆ ಮತ್ತು ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಯ ಸಹಾಯಕ ನಿರ್ದೇಶಕರಾಗಿರುವ ಡಾ ಅಮಿತಾಬ್ ಸಹಾ ತಿಳಿಸಿದ್ದಾರೆ.