Health Benefits of Sleeping With Socks at Night: ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಳಿಯನ್ನು ಸಹಿಸಲಾಗದೆ ಅನೇಕ ಜನರು ರಾತ್ರಿಯಲ್ಲಿ ಸ್ವೆಟರ್ ಮತ್ತು ಮಫ್ಲರ್ ಧರಿಸಿ ನಿದ್ರೆ ಮಾಡುತ್ತಾರೆ. ಮತ್ತಷ್ಟು ಕೆಲವರು ಮಲಗುವಾಗ ಸಾಕ್ಸ್‌ಗಳನ್ನು ಸಹ ಧರಿಸುತ್ತಾರೆ. ಮಲಗುವಾಗ ಸಾಕ್ಸ್ ಧರಿಸುವುದರಿಂದ ಚಳಿಯಿಂದ ಪರಿಹಾರ ಲಭಿಸುತ್ತದೆ, ಬೆಚ್ಚಗಿರಲು ಹಾಗೂ ಆರಾಮವಾಗಿರಲು ಸಹಾಯ ಮಾಡುತ್ತದೆ. ಹಾಗಾದರೆ, ರಾತ್ರಿ ಸಾಕ್ಸ್ ಧರಿಸಿ ಮಲಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ತಿಳಿದುಕೊಳ್ಳೋಣ.
ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ಶೀತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ನಿಮ್ಮ ಪಾದಗಳು ಬೆಚ್ಚಗಿರುತ್ತವೆ. ಅದು ದೇಹಕ್ಕೆ ಆರಾಮದಾಯಕವಾಗಿರುತ್ತದೆ. ಇದಲ್ಲದೆ, ನಿದ್ರಿಸುವಾಗ ಸಾಕ್ಸ್ ಧರಿಸುವುದರಿಂದ ಇತರ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಒಳ್ಳೆಯ ನಿದ್ರೆ ಬರುತ್ತೆ:ಚಳಿಗಾಲದಲ್ಲಿ ಚಳಿಯಿಂದಾಗಿ ಅನೇಕ ಜನರು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅಂತಹವರು ಮಲಗುವ ಮುನ್ನ ಸಾಕ್ಸ್ ಧರಿಸಿ ಮಲಗುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ತಿಳಿಸುತ್ತಾರೆ. ವಿಶೇಷವಾಗಿ ಸಾಕ್ಸ್ ಧರಿಸುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಹಾಗೂ ನಿಮ್ಮ ಪಾದಗಳನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇದು ನಿಮಗೆ ಬೇಗನೆ ನಿದ್ರಿಸಲು ತುಂಬಾ ಅನುಕೂಲವಾಗುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ನ ಸಂಶೋಧನಾ ತಂಡವು ರಾತ್ರಿಯಲ್ಲಿ ಸಾಕ್ಸ್ ಧರಿಸುವುದರಿಂದ ಪಾದದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ.ಸಂಬಂಧಪಟ್ಟ ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಕ್ತ ಪರಿಚಲನೆ ಸುಧಾರಿಸುತ್ತೆ:ಚಳಿಗಾಲದ ರಾತ್ರಿಗಳಲ್ಲಿ ಚಳಿಯಿಂದಾಗಿ ಪಾದಗಳು ತಣ್ಣಗಾಗುತ್ತವೆ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಕಾರಣವಾಗಬಹುದು. ಇದರಿಂದಾಗಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹೀಗಾಗಿ ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿದ್ದರೆ, ಎಲ್ಲಾ ಅಂಗಗಳಿಗೆ ರಕ್ತ ಹಾಗೂ ಆಮ್ಲಜನಕದ ಪೂರೈಕೆ ಸರಾಗವಾಗಿರುತ್ತದೆ. ಇದರ ಪರಿಣಾಮವಾಗಿ ಇದು ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.