ಹೈದರಾಬಾದ್: ಸ್ಥೂಲಕಾಯ ಮತ್ತು ಅಧಿಕ ತೂಕ ಹೊಂದಿರುವವರ ತೂಕ ನಷ್ಟದ ಪ್ರಯಾಣದಲ್ಲಿ ಔಷಧಗಳು ಪರಿಣಾಮಕಾರಿಯಾಗಿವೆ. ಜಿಎಲ್ಪಿ- 1 ಸೆಮಾಗ್ಲುಟೈಡ್ ಔಷಧಗಳು ಸ್ಥೂಲಕಾಯವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತವೆ. ಈ ಔಷಧದ ಜೊತೆಗೆ ವ್ಯಾಯಾಮ ಮತ್ತು ಡಯಟ್ ಕೂಡ ನಿರ್ಲಕ್ಷ್ಯ ಮಾಡಬಾರದು. ಈ ಔಷಧಗಳು ಸಾಮಾನ್ಯವಾಗಿ ತೂಕ ನಷ್ಟಕ್ಕೆ ಮುಂದಾಗುವ ದೈಹಿಕ ವಿಕಲಚೇತನರಿಗೆ ಸಹಾಯ ಮಾಡುತ್ತವೆ. ಇವರಲ್ಲೂ ಕೂಡ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ.
ಈ ಔಷಧಗಳು ಎಂದಿಗೂ ಜೀವನಶೈಲಿಗೆ ಪರ್ಯಾಯವಲ್ಲ. ಈ ಔಷಧಗಳನ್ನು ಸೇವನೆ ಮಾಡುವವರು ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ಪಾಲಿಸದಿದ್ದಲ್ಲಿ ಇವುಗಳು ನಿಮ್ಮ ಮೇಲೆ ಅಡ್ಡ ಪರಿಣಾಮವನ್ನು ಬೀರುವ ಸಾಧ್ಯತೆಗಳು ಹೆಚ್ಚು.
ಜಿಎಲ್ಪಿ-1 ಡ್ರಗ್ ಹಸಿವು ಕಡಿಮೆ ಮಾಡುವುದರ ಜೊತೆಗೆ ತಿನ್ನುವ ಬಯಕೆಯನ್ನು ಉಂಟು ಮಾಡುವುದಿಲ್ಲ. ಇದರಿಂದ ಕಡಿಮೆ ತಿನ್ನುವಂತೆ ಪ್ರೇರೇಪಿಸುತ್ತದೆ. ಅಷ್ಟೇ ಅಲ್ಲದೆ, ಆಹಾರವನ್ನು ಕರುಳಿನಲ್ಲಿ ಹೆಚ್ಚು ಕಾಲ ಇಡುವುದರಿಂದಾಗಿ ಹಸಿವು ಔಷಧ ಸೇವಿಸುವವರನ್ನು ಬಾಧಿಸುವುದಿಲ್ಲ. ಈ ರೀತಿಯ ಪ್ರಕ್ರಿಯೆಗಳಿಂದಾಗಿ ಅನೇಕ ಮಂದಿಗೆ ವಾಂತಿ, ತಲೆ ಸುತ್ತುವಿಕೆ ಮತ್ತು ಅತಿಸಾರ, ಮಲಬದ್ಧತೆಯಂತಹ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಲೂ ಬಹುದು. ಈ ಔಷಧಗಳು ಜಠರ ಕರುಳಿನ ಸಮಸ್ಯೆಗೂ ಒಮ್ಮೊಮ್ಮೆ ಕಾರಣವಾಗುತ್ತವೆ. ಈ ಹಿನ್ನಲೆ ಔಷಧ ಸೇವಿಸುವವರು ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್ ಅನ್ನು ಪಡೆಯಬೇಕು. ಆಹಾರದಲ್ಲಿ ಹಣ್ಣು ಮತ್ತು ತರಕಾರಿ ಹೆಚ್ಚಿರುವಂತೆ ನೋಡಿಕೊಳ್ಳುವುದರ ಜೊತೆಗೆ ಹೆಚ್ಚು ನೀರು ಕುಡಿಯುವುದು ಕೂಡ ಮುಖ್ಯವಾಗುತ್ತದೆ. ಇಲ್ಲದೇ ಹೋದಲ್ಲಿ ತಲೆ ನೋವು ಮತ್ತು ಆಲಸ್ಯಗಳು ಕಾಡುತ್ತವೆ. ಇದರ ಸಮತೋಲನಕ್ಕೆ ನಿಯಮಿತ ವ್ಯಾಯಾಮ ಅತ್ಯವಶ್ಯಕವಾಗಿವೆ.
ಈ ತೂಕ ನಷ್ಟ ಪ್ರಕ್ರಿಯೆಯಲ್ಲಿ ಸ್ನಾಯುವಿನ ನಷ್ಟ ಕೂಡ ಉಂಟಾಗಬಹುದು. ಜಿಎಲ್ಪಿ-1 ಔಷಧ ಸೇವಿಸಿದಾಗ ವ್ಯಾಯಾಮ ಮಾಡದೇ ಹೋದಲ್ಲಿ ಮೂರನೇ ಒಂದು ಭಾಗದ ಸ್ನಾಯು ನಷ್ಟ ಸಂಭವಿಸಬಹುದು. ಸ್ನಾಯುವಿನ ಕ್ಷೀಣತೆ ಸಂಭವಿಸಿದರೆ, ಕಳೆದು ಹೋದ ತೂಕವನ್ನು ಮತ್ತೆ ತುಂಬಿಸುವುದು ಕಷ್ಟವಾಗುತ್ತದೆ. ಮತ್ತೊಂದು ಕಡೆ, ಇದು ಚಯಾಪಚಯ ಕ್ರೀಯೆಗೆ ಕೂಡ ಅಡ್ಡಿಯುಂಟು ಮಾಡಬಹುದು. ಮೂಳೆಗಳ ಸ್ನಾಯು ಕೂಡ ಕ್ಷೀಣಿಸಬಹುದು. ಇದೆಲ್ಲದರ ಪರಿಣಾಮ, ವಯಸ್ಸಾದ ಬಳಿಕ ತೂಕ ನಷ್ಟ, ದೌರ್ಬಲ್ಯಗಳು ಕಾಡುತ್ತದೆ. ಈ ಹಿನ್ನೆಲೆಯಲ್ಲಿ ತೂಕ ನಷ್ಟ ಮಾಡುವಾಗ ಔಷಧ ಒಂದನ್ನೇ ತೆಗೆದುಕೊಳ್ಳದೇ, ಅದರ ಜೊತೆಗೆ ಡಯಟ್ ಮತ್ತು ವ್ಯಾಯಮಗಳನ್ನು ಮಾಡುವುದು ಅವಶ್ಯ.
ಇದನ್ನೂ ಓದಿ: ಫೆ.10 ವಿಶ್ವ ದ್ವಿದಳ ಧಾನ್ಯಗಳ ದಿನ: ಏನಿದರ ಮಹತ್ವ