ಕರ್ನಾಟಕ

karnataka

ETV Bharat / health

ಭಾರತದಲ್ಲಿ ಕುಸಿಯುತ್ತಿದೆ ಫಲವತ್ತತೆ ದರ; ಜನ ಜಾಗೃತಿ ಅವಶ್ಯಕ ಎಂದ ತಜ್ಞರು - Fertility Rates In India

ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆಯೇ ಫಲವತ್ತತೆ ದರ.

decline in fertility rates in India is a matter of concern
decline in fertility rates in India is a matter of concern

By ETV Bharat Karnataka Team

Published : Mar 28, 2024, 11:04 AM IST

ನವದೆಹಲಿ:ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ. ಹೀಗಿದ್ದರೂ ದೇಶದಲ್ಲಿ ಕುಸಿಯುತ್ತಿರುವ ಫಲವತ್ತತೆ ದರ ಕಳವಳ ಮೂಡಿಸುತ್ತಿದೆ. ನಗರೀಕರಣ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣದಂತಹ ಅನೇಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಲ್ಯಾನ್ಸೆಟ್​​ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಭಾರತದಲ್ಲಿ ಒಟ್ಟಾರೆ ಫಲವತ್ತತೆ ದರ ಗಣನೀಯವಾಗಿ ಕುಸಿತ ಕಂಡಿದೆ. 1950ರಲ್ಲಿ 6.18 ರಷ್ಟಿದ್ದ ದರ 2021ರಲ್ಲಿ 1.91ಕ್ಕೆ ಇಳಿದಿದೆ. ಭವಿಷ್ಯದಲ್ಲಿ ಈ ದರ ಮತ್ತಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ. 2050ರ ಹೊತ್ತಿಗೆ 1.3 ಮತ್ತು 2100ರ ಹೊತ್ತಿಗೆ 1.04 ಆಗಲಿದೆ ಎಂಬುದು ತಜ್ಞರ ಊಹೆ.

ದೇಶದ ಒಟ್ಟಾರೆ ಫಲವತ್ತತೆ ದರದ ಮೇಲೆ ಶಿಕ್ಷಣ, ಧಾರ್ಮಿಕ ನಂಬಿಕೆಗಳು ಮತ್ತು ಗರ್ಭನಿರೋಧಕ ಪ್ರಮಾಣ (ಸಿಪಿಆರ್​​) ಸೇರಿದಂತೆ ಹಲವು ಅಂಶಗಳು ಪ್ರಭಾವ ಬೀರುತ್ತಿವೆ. ಇದರೊಂದಿಗೆ ತಡವಾದ ವಿವಾಹ, ಮಕ್ಕಳ ಜನನ ವಿಳಂಬ, ಸಣ್ಣ ಕುಟುಂಬಗಳು, ಆರ್ಥಿಕ ಸ್ವಾವಲಂಬನೆ, ವೃತ್ತಿ ಜೀವನದತ್ತ ಮಹಿಳೆಯರ ಹೆಚ್ಚಿನ ಒಲವು ಮುಂತಾದವುಗಳು ಫಲವತ್ತತೆಯ ದರ ಇಳಿಕೆಗೆ ಕಾರಣವಾಗಿವೆ ಎಂದು ಗುರುಗ್ರಾಮದ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್​​ನ ಸೀನಿಯರ್​ ಕನ್ಸಲ್ಟಂಟ್​​ ಡಾ.ರಚಿತಾ ಮುಂಜಲ್​ ತಿಳಿಸಿದರು.

ಇದರ ಹೊರತಾಗಿ ಸ್ಥೂಲಕಾಯ, ಒತ್ತಡ, ಧೂಮಪಾನ, ಮಾಲಿನ್ಯ ಮತ್ತು ಅನಾರೋಗ್ಯಕರ ಜೀವನಶೈಲಿ ಮತ್ತಿತ್ತರ ಸಂಗತಿಗಳೂ ಕೂಡ ಬಂಜೆತನಕ್ಕೆ ಕಾರಣವಾಗಿವೆ. ಬಂಜೆತನ ಮಗು ಹೆರುವ ವಯಸ್ಸನ್ನು ವಿಳಂಬ ಮಾಡುತ್ತದೆ. ಹಾಗೆಯೇ ಗರ್ಭಧರಿಸುವ ಸಾಧ್ಯತೆಯನ್ನೂ ಕಡಿಮೆ ಮಾಡುವ ಮೂಲಕ ಒಟ್ಟಾರೆ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.

ಬಂಜೆತನ ಮತ್ತು ಇತರೆ ಸಮಸ್ಯೆಗಳಿಂದ ಉಂಟಾಗುವ ಮಾನಸಿಕ ಪರಿಣಾಮಗಳೂ ಕೂಡ ದಂಪತಿಗಳಿಗೆ ಕುಟುಂಬ ಯೋಜನೆ ಕುರಿತು ಚಿಂತಿಸುವಂತೆ ಮಾಡುತ್ತದೆ. ಇದರಿಂದಾಗಿ ಕಡಿಮೆ ಸಂಖ್ಯೆ ಮಕ್ಕಳನ್ನು ಹೊಂದಲು ನಿರ್ಧರಿಸುವುದಂಟು. ಫಲವತ್ತತೆ ಮತ್ತು ಬಜೆತನದ ಕುರಿತು ಸಮಾಜ ಹೊಂದಿರುವ ಕಳಂಕ ಕೂಡ ಫಲವತ್ತತೆ ಸಂಬಂಧದ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಬಂಧಿಸುತ್ತದೆ. ಇದೂ ಕೂಡ ಒಟ್ಟಾರೆ ಫಲವತ್ತತೆಯ ದರದ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತಾರೆ ಡಾ.ರಚಿತಾ ಮುಂಜಲ್.

ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಂದ ಮಕ್ಕಳನ್ನು ಹೊಂದಲು ವಿಳಂಬ ಮಾಡುವವರು ಅಂಡಾಣು ಸಂರಕ್ಷಣೆಯ ಫಲವತತ್ತೆಯನ್ನು ನಡೆಸಬಹುದು ಎಂದು ಇನ್ಫಿನಿಟಿ ಫರ್ಟಿಲಿಟಿಯ ವೈದ್ಯಕೀಯ ನಿರ್ದೇಶಕರಾದ ಡಾ.ನಿಶಾ ಭಟ್ನಾಗರ್ ಸಲಹೆ ನೀಡಿದ್ದಾರೆ.

ಕುಟುಂಬ ಯೋಜನೆ ಕುರಿತು ಅರಿವು, ವೇತನಸಹಿತ ಮಾತೃತ್ವ ಮತ್ತು ಪಿತೃತ್ವದ ರಜೆಗಳು, ಮಕ್ಕಳ ಆರೈಕೆ ಪ್ರಯೋಜನದಂತಹ ಆರ್ಥಿಕ ಉತ್ತೇಜನಗಳು ದೇಶದಲ್ಲಿ ಫಲವತ್ತತೆಯ ದರ ಸುಧಾರಿಸಲು ಸಹಾಯ ಮಾಡುವ ಕ್ರಮಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.(ಐಎಎನ್​ಎಸ್​)

ಇದನ್ನೂ ಓದಿ:ಭಾರತದಲ್ಲಿ ಕುಸಿದ ಫಲವತ್ತತೆ ದರ: 2050ರಲ್ಲಿ ಚಿತ್ರಣ ಹೇಗಿರಲಿದೆ? - Fertility Rate

ABOUT THE AUTHOR

...view details