ಕರ್ನಾಟಕ

karnataka

ETV Bharat / health

ಸ್ಥೂಲಕಾಯ ಕಳೆದುಕೊಳ್ಳಲು ನೃತ್ಯ ಪರಿಣಾಮಕಾರಿ: ಅಧ್ಯಯನ

ನೃತ್ಯ ಎಂಬುದು ಕೇವಲ ಕಲೆಯಲ್ಲ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿಯೂ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

Dance can boost your mental and physical health
Dance can boost your mental and physical health

By ETV Bharat Karnataka Team

Published : Jan 22, 2024, 2:15 PM IST

Updated : Jan 22, 2024, 4:54 PM IST

ನವದೆಹಲಿ: ಅಧಿಕ ತೂಕ ಮತ್ತು ಸ್ಥೂಲಕಾಯ ಕಳೆದುಕೊಳ್ಳಲು ಪರಿಣಾಮಕಾರಿ ಮಾರ್ಗ ನೃತ್ಯ. ಇದು ದೇಹದ ಸಂಯೋಜನೆಯ ಮೇಲೆ ಗಮನಾರ್ಹ ಸುಧಾರಣೆ ತರುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಪ್ಲೊಸ್​​ ಒನ್​ ಜರ್ನಲ್​ನಲ್ಲಿ ಪ್ರಕಟಿಸಲಾದ ಅಧ್ಯಯನದಲ್ಲಿ ಸಂಶೋಧಕರು ಹತ್ತು ಯಾದೃಚ್ಛಿಕ ನಿಯಂತ್ರಣ ಪ್ರಯೋಗ ನಡೆಸಿದ್ದಾರೆ. ನೃತ್ಯದ ಪರಿಣಾಮವನ್ನು ಹಲವು ಸಾಮಾನ್ಯ ಜೀವನಶೈಲಿ ಅಥವಾ ಇತರೆ ದೈಹಿಕ ಚಟುವಟಿಕೆಗಳೊಂದಿಗೆ ಹೋಲಿಸಲಾಗಿದೆ. ಈ ಸಂದರ್ಭದಲ್ಲಿ ದೇಹದ ಸಂಯೋಜನೆಯನ್ನು ಅಳತೆ ಮಾಡಲಾಗಿದೆ. ಈ ವೇಳೆ ನೃತ್ಯ ಉತ್ಸಾಹಭರಿತ ಮನಸ್ಥಿತಿ ಮತ್ತು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬು ಸಾಬೀತಾಗಿದೆ.

ಅಷ್ಟೇ ಅಲ್ಲ, ನೃತ್ಯ ಗಮನಾರ್ಹವಾಗಿ ದೇಹದ ತೂಕ ಕಡಿಮೆ ಮಾಡುವಲ್ಲಿ, ಕೊಬ್ಬಿನಾಂಶ ಕರಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಆದಾಗ್ಯೂ ಸೊಂಟದ ಸುತ್ತಳತೆ ದರ ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮ ಹೊಂದಿಲ್ಲ.

ದೈಹಿಕ-ಮಾನಸಿಕ ಯೋಗಕ್ಷೇಮ ವೃದ್ಧಿ: ನೃತ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಜನರ ಸಾಮಾಜಿಕ ಯೋಗಕ್ಷೇಮವನ್ನು ಪ್ರೊತ್ಸಾಹಿಸುತ್ತದೆ. ದೈಹಿಕ ಮತ್ತು ಮಾನಸಿಕ ವಿಧದಲ್ಲೂ ಪ್ರಯೋಜನಕಾರಿಯಾಗಿದೆ ಎಂಬುದನ್ನು ಪುರಾವೆಗಳು ತಿಳಿಸಿವೆ. ಈ ಪ್ರಯೋಜನ ಸೀಮಿತ ಜನರಿಗೆ ಮಾತ್ರ ಮೀಸಲಾಗಿದೆ. ವ್ಯಾಯಾಮ ಮಾಡದ ಗುಂಪಿನ ಜನರಲ್ಲಿ ನೃತ್ಯಾಭ್ಯಾಸ ರಕ್ತದೊತ್ತಡ, ಇನ್ಸುಲಿನ್​ ಸೂಕ್ಷ್ಮತೆ, ದೈಹಿಕ ಫಿಟ್ನೆಸ್​​, ಅರಿವಿನ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಕಡಿಮೆ ಮಾಡುವಲ್ಲಿ ನೆರವಾಗಿದೆ.

ಇದಕ್ಕಿಂತ ಹೆಚ್ಚಾಗಿ ಈ ಅಧ್ಯಯನವು ನೃತ್ಯದ ವಯಸ್ಸು, ವಿಧಗಳು, ಹೋಲಿಕೆ ಗುಂಪು ಮತ್ತು ಮಧ್ಯಸ್ಥಿಕೆ ಅವಧಿಯ ಅಂಶಗಳ ಮೇಲೆ ಗಮನ ಹರಿಸಿದೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪರಿಣಾಮಕಾರಿ ಪ್ರಯೋಜನ ಹೊಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಹದಿಹರೆಯದವರಿಗೆ ತಮ್ಮ ದೇಹದ ಬಗೆಗಿನ ನಕರಾತ್ಮಕ ಅಂಶಗಳನ್ನು ಫೋಷಕರು ದೂರ ಮಾಡುವುದೇಗೆ?

Last Updated : Jan 22, 2024, 4:54 PM IST

ABOUT THE AUTHOR

...view details