ಕರ್ನಾಟಕ

karnataka

ETV Bharat / health

ನಿಮ್ಮ ಮಕ್ಕಳು ಚಿಕ್ಕ ವಿಷಯಗಳಿಗೆ ತುಂಬಾ ಭಯಪಡುತ್ತಾರಾ?: ಅವರಲ್ಲಿ ಮಾನಸಿಕ ಧೈರ್ಯ ತುಂಬಲು ಇಲ್ಲಿವೆ ಸರಳ ಸಲಹೆಗಳು - PHOBIAS IN CHILDREN

ಕೆಲವು ಮಕ್ಕಳು ಸಣ್ಣ ವಿಷಯಗಳಿಗೂ ಹೆಚ್ಚು ಭಯಪಡುತ್ತಾರೆ. ಈ ಬಗ್ಗೆ ಯಾರಿಗೆ ತಿಳಿಸಬೇಕೆನ್ನುವುದು ಅವರಿಗೆ ತಿಳಿದಿರುವುದಿಲ್ಲ. ಅಂತಹ ಮಕ್ಕಳ ವಿಷಯದಲ್ಲಿ ಪೋಷಕರು ಹೇಗೆ ವರ್ತಿಸಬೇಕು? ಅವರ ಭಯ ಹೋಗಲಾಡಿಸುವುದು ಹೇಗೆ ಎಂಬುದನ್ನು ತಜ್ಞರು ತಿಳಿಸುತ್ತಾರೆ.

PHOBIAS IN CHILDREN  COPING WITH ANXIETY IN CHILDREN  COMMON PHOBIAS IN CHILDREN  How to overcome phobias in children
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : Oct 14, 2024, 7:32 AM IST

How to overcome phobias in your children:ಮಕ್ಕಳು ಚಿಕ್ಕ ಚಿಕ್ಕ ವಿಷಯಗಳಗೂ ಬಹಳ ಸಂತೋಷಪಡುತ್ತಾರೆ. ಜೊತೆಗೆ ಅವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಈ ಭಯ ಸ್ವಲ್ಪ ಮಟ್ಟಿಗೆ ಇದ್ದರೂ ಪರವಾಗಿಲ್ಲ, ಆದರೆ, ಕೆಲವು ಮಕ್ಕಳು ಎಲ್ಲದಕ್ಕೂ ಹೆದರುತ್ತಾರೆ. ಅಂತಹ ಭಯಕ್ಕೆ ಕಾರಣಗಳೇನು? ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಎಂಬುದನ್ನು ವೈದ್ಯಕೀಯ ತಜ್ಞರು ಇಲ್ಲಿದೆ ತಿಳಿಸುತ್ತಾರೆ.

ಅನುವಂಶಿಕ ಕಾರಣಗಳು: ಕೆಲವು ಮಕ್ಕಳು ಬೆರೆಯಲು ಆಸಕ್ತಿ ಹೊಂದಿರುವುದಿಲ್ಲ. ಅಲ್ಲದೇ ಇತರ ಮಕ್ಕಳಂತೆ ಕ್ರಿಯಾಶೀಲರಾಗಿ ಇರುವುದಿಲ್ಲ. ಪೋಷಕರಲ್ಲಿ ಯಾರಿಗಾದರೂ ಈ ಲಕ್ಷಣ ಕಂಡುಬಂದರೆ, ಮಕ್ಕಳಲ್ಲೂ ಈ ಲಕ್ಷಣ ಕಾಣಿಸಿಕೊಳ್ಳುವುದು ಸಹಜ. ಇದು ಸಹಜ ಅಭ್ಯಾಸವಾದರೂ ಮಕ್ಕಳ ಭಯವನ್ನು ಹೋಗಲಾಡಿಸಲು ಪೋಷಕರು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಪೋಷಕರ ಅತಿಯಾದ ಪ್ರೀತಿಯು ಇದಕ್ಕೆ ಕಾರಣ:ಕೆಲವು ಪೋಷಕರು ತಮ್ಮ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಹಾಳು ಮಾಡುತ್ತಾರೆ. ಮಕ್ಕಳನ್ನು ಸ್ವತಂತ್ರವಾಗಿ ಶಾಲೆಗೆ ಹೋಗುವುದಕ್ಕೂ ಪ್ರೋತ್ಸಾಹಿಸುವುದಿಲ್ಲ. ಅವರು ಯಾವಗಲೂ ಮಕ್ಕಳನ್ನು ತಮ್ಮ ಮೇಲ್ವಿಚಾರಣೆಯಲ್ಲಿ ಇರಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಿದ್ದಾರೆ. ತಮ್ಮ ಮಕ್ಕಳು ಎಲ್ಲಿ ತೊಂದರೆಗೆ ಸಿಲುಕಬಹುದು ಎಂದು ಯೋಚಿಸುತ್ತಾರೆ. ಆದರೆ, ಇದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಮಕ್ಕಳು ಸ್ವಂತವಾಗಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಕ್ಕಳನ್ನು ನಿರ್ಲಕ್ಷಿಸುವುದು:ಕೆಲವು ಪಾಲಕರು ಈ ಬಿಡುವಿಲ್ಲದ ಜೀವನದಿಂದ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ತಮ್ಮ ಅಗತ್ಯತೆಗಳು ಮತ್ತು ಸಮಸ್ಯೆಗಳಿಗೆ ಗಮನ ಕೊಡುವುದಿಲ್ಲ. ಇದರಿಂದಾಗಿ ಮಕ್ಕಳು ಒಂಟಿತನ ಅನುಭವಿಸುತ್ತಾರೆ. ಆದ್ದರಿಂದ ತಮ್ಮ ಸಮಸ್ಯೆಗಳನ್ನು ಯಾರೊಂದಿಗೆ ಹೇಳಬೇಕೆಂದು ತಿಳಿಯದೆ ಚಿಂತೆ ಮಾಡುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅವರು ಎಲ್ಲದರಲ್ಲೂ ಹಿಂದೆ ಬೀಳುತ್ತಾರೆ. ಪ್ರತಿ ಸಣ್ಣ ವಿಷಯಕ್ಕೂ ಭಯಪಡುತ್ತಾರೆ ಎಂದು ತಜ್ಞರು ಬಹಿರಂಗಪಡಿಸುತ್ತಾರೆ.

ಮಕ್ಕಳಲ್ಲಿ ಭಯ ಹೋಗಲಾಡಿಸಲು ಏನು ಮಾಡಬೇಕು?:

  • ಪಾಲಕರು ಮಕ್ಕಳೊಂದಿಗೆ ಸ್ನೇಹದಿಂದ ಇರಬೇಕು. ಮಕ್ಕಳ ವಿಚಾರಗಳು, ಅಗತ್ಯಗಳು ಮತ್ತು ಆಸಕ್ತಿಗಳನ್ನು ಹಂಚಿಕೊಳ್ಳುವ ವಾತಾವರಣವನ್ನು ಪೋಷಕರು ನಿರ್ಮಿಸಬೇಕು. ಅವರ ಆದ್ಯತೆಗಳನ್ನು ಅರಿತು ಅವರನ್ನು ಪ್ರೋತ್ಸಾಹಿಸಬೇಕಾಗುತ್ತದೆ.
  • ಮಕ್ಕಳು ತಾವಾಗಿಯೇ ಎಲ್ಲವನ್ನೂ ಕಲಿಯುವಂತೆ ಪ್ರೋತ್ಸಾಹಿಸಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ನೀವು ಏನನ್ನಾದರೂ ಮಾಡಿದಾಗ, ಅದರ ಫಲಿತಾಂಶ ಏನಾಗುತ್ತದೆ ಎಂಬುದನ್ನು ನೀವು ಅನುಭವದಿಂದ ತಿಳಿದುಕೊಳ್ಳುತ್ತೀರಿ. ಮತ್ತೊಮ್ಮೆ ನೀವು ಕೆಲಸವನ್ನು ಹೇಗೆ ಪೂರ್ಣಗೊಳಿಸಬೇಕು ಎಂಬುದರ ಕುರಿತು ಯೋಚಿಸಲು ಸಾಧ್ಯವಾಗುತ್ತದೆ. ಕೆಲಸ ಮಾಡುವ ಆತ್ಮವಿಶ್ವಾಸ ಹೆಚ್ಚುತ್ತದೆ.
  • ಮಕ್ಕಳು ತಪ್ಪು ಮಾಡಿದರೆ, ಸುಳ್ಳು ಹೇಳಿದರೆ ಅವರನ್ನು ಬೈಯುವುದು, ಹೊಡೆಯುವುದು ಬೇಡ ಎನ್ನುತ್ತಾರೆ ತಜ್ಞರು. ಹೀಗೆ ಮಾಡುವುದರಿಂದ ಮಕ್ಕಳು ನಿಮ್ಮೊಂದಿಗೆ ಎಲ್ಲವನ್ನು ಮಾತನಾಡಲು ಹೆದರುತ್ತಾರೆ ಎಂದು ಹೇಳಲಾಗುತ್ತದೆ.
  • ಮಕ್ಕಳು ಯಾವುದಕ್ಕೆ ಹೆದರುತ್ತಾರೆ ಎಂಬುದರ ಅರಿವು ಇರಬೇಕು. ಅದಕ್ಕಾಗಿ ಅವರೊಂದಿಗೆ ಪ್ರೀತಿಯಿಂದ ಮಾತನಾಡಿ. ಅವರ ಭಯಕ್ಕೆ ಕಾರಣವೇನೆಂದು ತಿಳಿಯಬೇಕು. ನಂತರ ಅವರು ಅರ್ಥವಾಗುವ ರೀತಿಯಲ್ಲಿ ಪರಿಸ್ಥಿತಿಯನ್ನು ವಿವರಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಅಂಕಗಳು ಅಥವಾ ವ್ಯಕ್ತಿತ್ವದ ವಿಷಯದಲ್ಲಿ ನಿಮ್ಮ ಮಗುವನ್ನು ಇತರ ಮಕ್ಕಳೊಂದಿಗೆ ಹೋಲಿಸಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎನ್ನಲಾಗಿದೆ.
  • ನಿಮ್ಮ ಮಗುವಿನ ನಡವಳಿಕೆ ಚೆನ್ನಾಗಿಲ್ಲದಿದ್ದರೆ, ನೀವು ಅವರೊಂದಿಗೆ ಕುಳಿತು ಮಾತನಾಡಬೇಕು. ಮತ್ತು ಅವರು ಏಕೆ ಹಾಗೆ ವರ್ತಿಸುತ್ತಾರೆ ಎಂದು ಕೇಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
  • ನಿಮ್ಮ ಮಕ್ಕಳಿಗೆ ನೀವು ಇಲ್ಲದೆ ಹೋದರೂ, ತಾವು ಹೇಗೆ ಇರಬೇಕು ಎಂಬುದನ್ನು ಅವರಿಗೆ ಸರಿಯಾಗಿ ಅರ್ಥಮಾಡಿಸಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ನೀವು ಏನೇ ಮಾಡಿದರೂ ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲ ಎಂದಾದಲ್ಲಿ ಕೂಡಲೇ ಮಕ್ಕಳ ಮನೋವೈದ್ಯರ ಬಳಿ ಕರೆದುಕೊಂಡು ಹೋಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್​ಗಳನ್ನು ಸಂಪರ್ಕಿಸಿ:

  • https://www.ncbi.nlm.nih.gov/pmc/articles/PMC2747757/

ಓದುಗರಿಗೆ ವಿಶೇಷ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ABOUT THE AUTHOR

...view details