ನವದೆಹಲಿ: ಹವಾಮಾನ ಬದಲಾವಣೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಈ ಶತಮಾನದ ಅಂತ್ಯದ ಮೇಲೆ ಕಾರ್ಮಿಕರ ಉತ್ಪಾದನೆ ಕುಂಠಿತಗೊಳಿಸಬಹುದು. ಇದು ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಅಧ್ಯಯನ ತಿಳಿಸಿದೆ. ಜರ್ನಲ್ ಗ್ಲೋಬಲ್ ಚೇಂಜ್ ಬಯೋಲಾಜಿಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಆಗ್ನೇಯ ಮತ್ತು ದಕ್ಷಿಣ ಏಷ್ಯಾ, ಪಶ್ಚಿಮ ಮತ್ತು ಆಫ್ರಿಕಾದ ಕೇಂದ್ರ ಹಾಗೂ ಉತ್ತರದ ದಕ್ಷಿಣ ಅಮೆರಿಕದಲ್ಲಿ ಈ ಹವಾಮಾನ ಬದಲಾವಣೆಗಳು ದೈಹಿಕ ಕೆಲಸ ಸಾಮರ್ಥ್ಯದ ಮೇಲೆ ಶೇ 70ರಷ್ಟು ಪರಿಣಾಮ ಬೀರುತ್ತದೆ.
ಹವಾಮಾನ ಬದಲಾವಣೆಯು ಬೆಳೆಗಳ ಇಳುವರಿಯನ್ನೂ ಸಹ ಕಡಿಮೆ ಮಾಡಲಿದೆ. ಇದು ಆಹಾರ ಭದ್ರತೆ ಮೇಲೆ ಗಂಭೀರ ಸವಾಲನ್ನು ಹೊಂದಿದೆ ಎಂದು ಅಮೆರಿಕಯದ ಇಲ್ಲಿನೊಯ್ಸ್ ಯುನಿವರ್ಸಿಟಿ ಪ್ರೊಫೆಸರ್ ಗೆರೆಲ್ಡ್ ನೆಲ್ಸನ್ ತಿಳಿಸಿದ್ದಾರೆ. ಇದು ಕೇವಲ ಬೆಳೆ ಮತ್ತು ಜಾನುವಾರುಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದು ಭೂಮಿ ಮೇಲಿನ ಎಲ್ಲ ಕೃಷಿ ಕಾರ್ಮಿಕರ ಮೇಲೆ ಮತ್ತು ವ್ಯವಸಾಯದ ಮೇಲೆ ಪರಿಣಾಮ ಬೀರಲಿದೆ. ಭಾರೀ ಬಿಸಿಲಿನಿಂದಾಗಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಇದು ಕುಂಠಿತಗೊಳಿಸಲಿದೆ ಎಂದರು.
ಈ ಅಧ್ಯಯನದ ವೇಳೆ, ಸಂಶೋಧನಾ ತಂಡವು ಕಂಪ್ಯೂಟಷನಲ್ ಮಾದರಿಯನ್ನು ಬಳಕೆ ಮಾಡಿಕೊಂಡು ದೈಹಿಕ ಕೆಲಸದ ಸಾಮರ್ಥ್ಯವನ್ನು ಅಂದಾಜಿಸಿದೆ. ಈ ಮಾದರಿಯನ್ನು ಯುಕೆಯ ಲಾಫ್ಬೊರ್ಗ್ ಯುನಿವರ್ಸಿಟಿ ಅಭಿವೃದ್ಧಿ ಪಡಿಸಿದೆ. 700 ಶಾಖದ ಒತ್ತಡದ ಪ್ರಯೋಕ್ಕಿಂತ ಹೆಚ್ಚಿನ ದತ್ತಾಂಶವನ್ನು ಪಡೆಯಲಾಗಿದೆ. ಈ ತಾಪಾಮಾನ ಮತ್ತು ಆರ್ದ್ರತೆ ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಯಲ್ಲಿ ಜನರ ಕೆಲಸ ಮಾಡುವುದನ್ನು ಗಮನಿಸಲಾಗಿದೆ.