ಕರ್ನಾಟಕ

karnataka

ETV Bharat / health

ಚಪಾತಿ ಹೀಗೆ ಬೇಯಿಸಿದರೆ ಎದುರಾಗುತ್ತೆ ಅಪಾಯ: ಸಂಶೋಧನೆ ಹೀಗೆ ಹೇಳುತ್ತೆ ನೀವೇ ನೋಡಿ - Roti on Direct Flame what happend - ROTI ON DIRECT FLAME WHAT HAPPEND

Roti on Direct Flame Cause Cancer: ನೇರವಾಗಿ ಬೆಂಕಿಯ ಮೇಲೆ ಚಪಾತಿಗಳನ್ನು ಬೇಯಿಸುವುದು ಅಪಾಯಕ್ಕೆ ಕಾರಣವಾ? ಅನೇಕ ಜನರು ಇದನ್ನು ಅನುಮಾನಿಸುವುದು ಸಹಜ. ತವದ ಬದಲಿ ನೇರವಾಗಿ ಒಲೆ ಮೇಲೆ ಚಪಾತಿಗಳು ಬೇಯಿಸಿದರೆ ಕ್ಯಾನ್ಸರ್ ಬರುತ್ತದೆಯೇ? ಈ ಕುರಿತ ಸಂಶೋಧನೆ ಏನು ಹೇಳುತ್ತೆ? ಈ ಕುರಿತು ಸ್ಟೋರಿ ಇಲ್ಲಿದೆ ಸಂಪೂರ್ಣವಾಗಿ ಓದಿ..

ROTI ON DIRECT FLAME CAUSE CANCER  CAN WE COOK ROTI ON DIRECT FLAME  SHOULD WE COOK ROTI ON DIRECT FLAME  IS IT HEALTHY COOK ROTI DIRECT FLAM
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : Sep 7, 2024, 3:59 PM IST

Roti on Direct Flame what happend :ಚಪಾತಿಗಳು ಭಾರತೀಯ ಆಹಾರದ ಭಾಗವಾಗಿದೆ. ದಕ್ಷಿಣದಲ್ಲಿ ಅವರು ಸ್ವಲ್ಪ ಕಡಿಮೆ ತಿನ್ನುತ್ತಾರೆ. ಆದರೆ ಉತ್ತರದಲ್ಲಿ ಅವರು ಹೆಚ್ಚಾಗಿ ಚಪಾತಿಗಳನ್ನು ತಿನ್ನುತ್ತಾರೆ. ಆದ್ರೆ, ಬಹುತೇಕರು ಈ ಚಪಾತಿಗಳನ್ನು ತವೆಯ ಬದಲಾಗಿ ಒಲೆಯ ಬೆಂಕಿಯ ಮೇಲೆಯೇ ಬೇಯಿಸುತ್ತಾರೆ. ಈ ಬೇಯಿಸುವುದು ಅನೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ನೇರವಾಗಿ ಗ್ಯಾಸ್​ನ ಒಲೆಯ ಬೆಂಕಿಯ ಮೇಲೆ ಚಪಾತಿಗಳನ್ನು ಬೇಯಿಸುವುದು ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಸಂಶೋಧನೆಯು ತೋರ್ಪಡಿಸಿದೆ.

2018 ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಚಪಾತಿ ಅಥವಾ ಯಾವುದೇ ಆಹಾರ ಪದಾರ್ಥವನ್ನು ನೇರವಾಗಿ ಗ್ಯಾಸ್​ನ ಒಲೆಯ ಬೆಂಕಿಯ ಮೇಲೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದು ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. 'Formation of Polycyclic Aromatic Hydrocarbons (PAHs) in Food During Cooking' ಎಂಬ ಸಂಶೋಧನಾ ವರದಿಯಿಂದ ಈ ಮಾಹಿತಿ ಬಹಿರಂಗವಾಗಿದೆ. ಈ ಅಧ್ಯಯನದಲ್ಲಿ ಡಾ. ಜೆ.ಎಸ್. ಲೀ, ಜೆ.ಎಚ್. ಕಿಮ್, ವೈ.ಜೆ. ಲೀ ಭಾಗವಹಿಸಿದ್ದರು.

ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಅಸಿಲಾಮೈಡ್, ಹೆಟೆರೊಸೈಕ್ಲಿಕ್ ಅಮೈನ್ಸ್ (HCA), ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAH) (ವರದಿ) ಕ್ಯಾನ್ಸರ್ ಉಂಟುಮಾಡುವ ಸಂಯುಕ್ತಗಳನ್ನು ಸಹ ಉತ್ಪಾದಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೇ ನೇರವಾಗಿ ಬೆಂಕಿಯಲ್ಲಿ ಹುರಿಯುವುದರಿಂದ ಕ್ಯಾನ್ಸರ್ ಕಾರಕಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಸಲಾಗಿದೆ. ಜೊತೆಗೆ ಈ ಕ್ಯಾನ್ಸರ್ ಅನ್ನು ಅಪಾಯದ ತಡೆಯಲು ವೈದ್ಯರು ನೀಡಿರುವ ಕೆಲವು ಸಲಹೆಗಳನ್ನು ಇಲ್ಲಿದೆ ನೋಡಿ..

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು ಹೇಗೆ?:

  • ಹೆಚ್ಚು ಸುಡದಂತೆ ಎಚ್ಚರವಹಿಸಿ.
  • ಚಪಾತಿ ಬೇಯಿಸುವಾಗ ಕಪ್ಪು ಬಣ್ಣಕ್ಕೆ ತಿರುಗಬಾರದು ಎಂದು ಹೇಳಲಾಗುತ್ತದೆ. ಉರಿಯನ್ನು ಕಡಿಮೆ ಮಾಡಿ ಮತ್ತು ಚಪಾತಿಯನ್ನು ಸುಡುವುದನ್ನು ತಡೆಯಲು ಆಗಾಗ ತಿರುಗಿಸಿ.
  • ನೇರವಾಗಿ ಒಲೆಯ ಮೇಲೆ ಬೇಯಿಸಿದ ಆಹಾರಗಳನ್ನು ಕಡಿಮೆ ತಿನ್ನುವುದು ಒಳ್ಳೆಯದು.
  • ನೀವು ನೇರವಾಗಿ ಬೆಂಕಿಯಲ್ಲಿ ಚಪಾತಿಗಳನ್ನು ಬೇಯಿಸುವುದನ್ನು ಕಡಿಮೆ ಮಾಡಿ. ಬೆಂಕಿಯ ಮೇಲೆ ಬೇಯಿಸಿದ ಚಪಾತಿಗಳನ್ನು ಸಾಧ್ಯವಾದಷ್ಟು ಕಡಿಮೆ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಬದಲಾಗಿ, ನಿಮ್ಮ ಸೇವಿಸುವ ಆಹಾರವು ಸಮತೋಲಿತವಾಗಿದ್ದರೆ ತುಂಬಾ ಒಳ್ಳೆಯದು.

ತವದಲ್ಲಿ ಮೇಲೆ ಚಪಾತಿ ಬೇಯಿಸಿ:ಚಪಾತಿಗಳನ್ನು ನೇರವಾಗಿ ಬೆಂಕಿಯ ಮೇಲೆ ಬೇಯಿಸುವ ಬದಲು ಪ್ಯಾನ್ ಮೇಲೆ ಬೇಯಿಸಿದರೆ ಒಳ್ಳೆಯದು. ಈ ರೀತಿ ಮಾಡುವುದರಿಂದ, ಪ್ಯಾನ ಹೆಚ್ಚಿನ ತಾಪಮಾನವನ್ನು ಹೀರಿಕೊಳ್ಳುತ್ತದೆ. ಮತ್ತು ಕಡಿಮೆ ಶಾಖದಲ್ಲಿ ಚಪಾತಿಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಅಸಿಲಾಮೈಡ್, ಹೆಟೆರೊಸೈಕ್ಲಿಕ್ ಅಮೈನ್ಸ್ (HCA), ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ ಉತ್ಪಾದನೆ ಪ್ರತಿ ಬಂಧಿಸುತ್ತದೆ.

ನಿಮ್ಮ ಆಹಾರದಲ್ಲಿ ಇವುಗಳಿರಲಿ:ನೀವು ಹೆಚ್ಚು ಚಪಾತಿಗಳನ್ನು ತಿನ್ನುತ್ತಿದ್ದರೆ, ಅದರ ಜೊತೆಗೆ ನಿಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಬೇಕು. ಈ ಸ್ವತಂತ್ರ ರಾಡಿಕಲ್​ಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ. ಅದಕ್ಕಾಗಿಯೇ ವೈದ್ಯರು ಕ್ಯಾನ್ಸರ್ ತಪ್ಪಿಸಲು ಈ ವಿಧಾನಗಳನ್ನು ಅನುಸರಿಸಲು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು:https://www.ncbi.nlm.nih.gov/pmc/articles/PMC8199595/

ಓದುಗರಿಗೆ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ.

ಇದನ್ನೂ ಓದಿ:

ABOUT THE AUTHOR

...view details