Bitter Gourd Juice Benefits:ಹಾಗಲಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ದೊರೆಯುತ್ತವೆ. ಅದರಲ್ಲಿ ಹಾಗಲಕಾಯಿ ರಸದಿಂದ ಕೂದಲಿನ ಸೌಂದರ್ಯ ಹೆಚ್ಚಿಸಲು ಸಹಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಲಕಾಯಿ ರಸವನ್ನು ನಿಯಮಿತವಾಗಿ ನೆತ್ತಿ ಹಾಗೂ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲಿನ ವಿವಿಧ ಸಮಸ್ಯೆಗಳನ್ನು ಹಾಗಲಕಾಯಿ ರಸದಿಂದ ಹೇಗೆ ತಡೆಗಟ್ಟಬಹುದು ಎಂಬುದನ್ನು ತಿಳಿಯೋಣ.
ಕೂದಲು ಉದುರುವಿಕೆ ತಡೆಯಲು ಹಾಗಲಕಾಯಿ ರಸ ಹಚ್ಚಿಕೊಳ್ಳಲು ಸಲಹೆ :ಅರ್ಧ ಕಪ್ ಹಾಗಲಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಟೀಸ್ಪೂನ್ ತೆಂಗಿನ ಎಣ್ಣೆ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ನಿಮ್ಮ ನೆತ್ತಿ ಹಾಗೂ ಕೂದಲಿಗೆ ಹಚ್ಚಿ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಬೇಕಾಗುತ್ತದೆ. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಈ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಹಾಯ ಆಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
2019ರಲ್ಲಿ ಜರ್ನಲ್ ಆಫ್ ಕಾಸ್ಮೆಟಿಕ್ಸ್, ಡರ್ಮಟೊಲಾಜಿಕಲ್ ಸೈನ್ಸಸ್ ಹಾಗೂ ಅಪ್ಲಿಕೇಶನ್ಸ್‌ನಲ್ಲಿ ಪ್ರಕಟವಾದ 'ಕೂದಲು ಬೆಳವಣಿಗಾಗಿ ಬಯೋಆಕ್ಟಿವ್ ಕಾಂಪೌಂಡ್ ಲೋಡೆಡ್ ನ್ಯಾನೊಕ್ಯಾರಿಯರ್ಸ್: ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನಗಳು" ಎಂಬ ಅಧ್ಯಯನದಲ್ಲಿ ಈ ವಿಷಯವು ಸ್ಪಷ್ಟವಾಗಿ ತಿಳಿದಿದೆ.
ಕೂದಲು ಸ್ಪ್ಲಿಟ್ ಆಗುವುದನ್ನು ತಡೆಯುತ್ತೆ :ನಾವು ಬಳಸುವ ಕೂದಲಿನ ಉತ್ಪನ್ನಗಳಲ್ಲಿನ ರಾಸಾಯನಿಕಗಳು ಹಾಗೂ ಬಾಹ್ಯ ಮಾಲಿನ್ಯದ ಪರಿಣಾಮಗಳಿಂದಾಗಿ ಕೂದಲುಗಳು ಸ್ಪ್ಲಿಟ್ ಆಗುವುದನ್ನು ತಡೆಗಟ್ಟಲು ಹಾಗಲಕಾಯಿ ರಸವನ್ನು ಕೂದಲಿನ ಬೇರುಗಳಿಗೆ ಹಚ್ಚಿ ಹಾಗೆಯೇ ಬಿಡಬೇಕಾಗುತ್ತದೆ. ಸುಮಾರು 40 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕಾಗುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಮೂರು ವಾರಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ತಲೆಹೊಟ್ಟು ಮಾಯ :ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು, ಸ್ವಲ್ಪ ಜೀರಿಗೆ ಬೀಜಗಳನ್ನು ತೆಗೆದುಕೊಂಡು ಅದರಿಂದ ಪೇಸ್ಟ್ ತಯಾರಿಸಿ. ತಯಾರಾದ ಪೇಸ್ಟ್ ಅನ್ನು ಹಾಗಲಕಾಯಿ ರಸದೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿಕೊಳ್ಳಿ. ಇದನ್ನು 15 ರಿಂದ 20 ನಿಮಿಷಗಳವರೆಗೆ ಹಾಗೆಯೇ ಬಿಡಬೇಕಾಗುತ್ತದೆ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.