ನವದೆಹಲಿ: ಹಕ್ಕಿ ಹ್ವರವೂ ಮಾನವನಿಂದ ಮನುಷ್ಯನಿಗೆ ನಿರಂತರ ಹರಡುವಿಕೆಯ ಯಾವುದೇ ದಾಖಲೆಗಳಿಲ್ಲದಿದ್ದರೂ, ಇತ್ತೀಚಿನ ವೈರಸ್ ರೂಪಾಂತರಗಳು ಅದು ಮನುಷ್ಯರಿಗೆ ಹರಡುಬಹುದು ಎಂದು ತೋರಿಸಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಹಕ್ಕಿ ಜ್ವರ ಅಥವಾ ಎಚ್5 ಎನ್1 ಸೋಂಕು ಕೋಳಿ ಸಾಕಣೆ ಕೇಂದ್ರದಿಂದ ಹರಡುವುದರಲ್ಲಿ ಹೊಸದೇನೂ ಇಲ್ಲ. ಭಾರತದ ಹಲವು ಕೋಳಿ ಸಾಕಣೆ ಕೇಂದ್ರ ಸೇರಿದಂತೆ ಜಗತ್ತಿನೆಲ್ಲೆಡೆ ಈ ರೀತಿಯಾಗಿ ಹಕ್ಕಿ ಜ್ವರ ಹರಡುತ್ತಿದೆ. ವಲಸೆ ಬರುವ ಹಕ್ಕಿಗಳು ಕೋಳಿ ಸಾಕಣೆ ಕೇಂದ್ರದಲ್ಲಿ ಸೋಂಕು ಉಂಟಾಗಲು ಕಾರಣವಾಗುತ್ತದೆ. ಆದಾಗ್ಯೂ, ಇತ್ತೀಚಿನ ವರ್ಷದಲ್ಲಿ ಈ ಹಕ್ಕು ಜ್ವರದ ಸೋಂಕು ಎಚ್5ಎನ್1 ಪ್ರಾಣಿಗಳಿಗೂ ಹರಡುತ್ತಿದೆ.
2023ರಲ್ಲಿ ಎಚ್5ಎನ್1 ಸೋಂಕಿನಿಂದ ದಾಖಲೆ ಪ್ರಮಾಣದ ಹಕ್ಕಿಗಳು ಸಾವನ್ನಪ್ಪಿದವು. ಈ ಸೋಂಕು ನೀರುನಾಯಿಗಳು, ಸಮುದ್ರ ಸಿಂಹಗಳು, ನರಿಗಳು, ಡಾಲ್ಫಿನ್ಗಳು ಮತ್ತು ಸೀಲ್ ಸೇರಿದಂತೆ ಇತರ ಪ್ರಾಣಿಗಳಲ್ಲಿ ಹರಡಿತು. ಇತ್ತೀಚೆಗೆ ಇದು ಅಮೆರಿಕದ ಜಾನುವಾರುಗಳಲ್ಲಿ ಕೂಡ ಕಂಡಿದೆ. ಅಮೆರಿಕದಲ್ಲಿನ ಆರೋಗ್ಯ ಅಧಿಕಾರಿಗಳು, ದೇಶದಲ್ಲಿ ಸರಬರಾಜು ಆಗುತ್ತಿದ್ದ ಪಾಶ್ಚರೈಸರ್ ಹಾಲಿನ ಮಾದರಿ ಪರೀಕ್ಷೆ ಮಾಡಿದಾಗ ಅದಲ್ಲಿ ಶೇ 20ರಷ್ಟು ಸ್ಯಾಂಪಲ್ನಲ್ಲಿ ಹಕ್ಕಿ ಜ್ವರದ ವೈರಸ್ ಕಂಡು ಬಂದಿದೆ.
ಇದೀಗ ಎಚ್5ಎನ್1 ಹಕ್ಕಿ ಜ್ವರ ಪ್ರಾಣಿಗಳಿಗೆ ಹರಡುತ್ತಿದೆ ಎಂಬುದನ್ನು ತೋರಿಸಿದೆ. ಇದೀಗ ಸುಲಭವಾಗಿ ಸೋಂಕು ಹಕ್ಕಿಗಳಿಂದ ಹಕ್ಕಿಗೆ ಬದಲಾಗಿ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಬಹುದು. ವೈರಸ್ ಹರಡುವಿಕೆಯಲ್ಲಿ ಈಗಾಗಲೇ ರೂಪಾಂತರ ಆಗಿದೆ ಎಂದು ಇದು ತೋರಿಸುತ್ತದೆ. ಅಲ್ಲದೇ ಹಕ್ಕಿ ಜ್ವರ ವೈರಸ್ ಮನುಷ್ಯರಿಗೆ ಹರಡಲು ಒಂದು ಹೆಜ್ಜೆ ಹತ್ತಿರಕ್ಕೆ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಕೋವಿಡ್ -19 ಕಾರ್ಯಪಡೆಯ ಸಹ ಅಧ್ಯಕ್ಷ ಡಾ ರಾಜೀವ್ ಜಯದೇವನ್ ಹೇಳಿದ್ದಾರೆ.
ಪ್ರಮುಖವಾಗಿ ಮಾನವರಿಂದ ಮಾನವರಿಗೆ ಸೋಂಕು ಹರಡುವು ಯಾವುದೆ ದಾಖಲೆಗಳಿಲ್ಲ. ಇದು ಕೇವಲ ವೈರಸ್ ರೂಪಾಂತರವಾದಾಗ ಮಾತ್ರ ಕಂಡು ಬರುತ್ತದೆ. ಇದೀಗ ವೈರಸ್ ಜಾನುವಾರುಗಳನ್ನು ತಮ್ಮ ಹೊಸ ಆತಿಥೇಯವಾಗಿ ಮಾಡಿಕೊಂಡಿದೆ. ಜಾನುವಾರುಗಳು ಮಾನವರೊಂದಿಗೆ ಸದಾ ಸಂಪರ್ಕದಲ್ಲಿರುತ್ತವೆ ಎಂದಿದ್ದಾರೆ.