Lemon Balm Tea Benefits:ಬಹುತೇಕ ಜನರು ಬೆಳಿಗ್ಗೆ ಎದ್ದ ಬಳಿಕ ಚಹಾ ಮತ್ತು ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಗೆಳೆಯರು ಭೇಟಿಯಾದಾಗ, ಸಭೆ ಮತ್ತು ಸಮಾರಂಭಗಳಲ್ಲಿ ಹಾಗೂ ಅತಿಥಿಗಳು ಮನೆಗೆ ಬಂದಾಗ ಟೀ, ಕಾಫಿ ಮುಖ್ಯವಾಗಿ ನೀಡಲಾಗುತ್ತದೆ. ಆದರೆ, ಇದರಲ್ಲಿರುವ ಕೆಫೀನ್ನಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕೆಲವು ಜನರಿಗಂತೂ ಚಹಾ ಮತ್ತು ಕಾಫಿ ಕುಡಿಯದೇ ಇದ್ದರೆ ಸಮಾಧಾನವೇ ಆಗುವುದಿಲ್ಲ. ಚಹಾ ಮತ್ತು ಕಾಫಿ ಬದಲಾಗಿ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರಸ್ತುತ ಹಲವಾರು ರೀತಿಯ ಗಿಡಮೂಲಿಕೆ ಚಹಾಗಳು ಲಭ್ಯವಿದೆ. ಅವುಗಳಲ್ಲಿ ನಿಂಬೆ ಚಹಾ, ಪುದೀನ ಚಹಾ, ಶುಂಠಿ ಚಹಾ, ಬಡೆ ಸೋಂಪು ಚಹಾ ಹಾಗೂ ವಿವಿಧ ಪ್ರಕಾರದ ಚಹಾಗಳು ದೊರೆಯುತ್ತದೆ. ಇತ್ತೀಚೆಗಷ್ಟೇ ಈ ಪಟ್ಟಿಗೆ ಮತ್ತೊಂದು ಟೀ ಸೇರ್ಪಡೆಗೊಂಡಿದೆ. ಅದೇ ನಿಂಬೆ ಬಾಮ್ ಚಹಾ. ಪುದಿನಾ ಜಾತಿಗೆ ಸೇರಿದ ಈ ಗಿಡದಿಂದ ತಯಾರಿಸಿದ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ವೈದ್ಯರು. ಈ ಕುರಿತು ಸಂಪೂರ್ಣ ವಿವರಗಳನ್ನು ತಿಳಿಯೋಣ.
ಒತ್ತಡ ಮತ್ತು ಆತಂಕ ನಿವಾರಿಸುತ್ತೆ:ನಿಂಬೆ ಬಾಮ್ ಟೀ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ. ನಿಂಬೆ ಬಾಮ್ ಚಹಾವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಮತ್ತು ಶಾಂತತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಿಂದ ಬಹಿರಂಗವಾಗಿದೆ. 2004ರಲ್ಲಿ ಜರ್ನಲ್ ಆಫ್ ಫಾರ್ಮಸಿ ಮತ್ತು ಫಾರ್ಮಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಂಬೆ ಬಾಮ್ ಚಹಾ ಕುಡಿಯುವವರಲ್ಲಿ ಒತ್ತಡ ಮತ್ತು ಆತಂಕ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ರಿಪೋರ್ಟ್) ಕಡಿಮೆಯಾಗಿದೆ ಎಂದು ಕಂಡುಬಂದಿದೆ.
ಯುಕೆನ ನಾರ್ತಂಬ್ರಿಯಾ ವಿಶ್ವವಿದ್ಯಾಲಯದ ಮಾನವ ಅರಿವು, ನರವಿಜ್ಞಾನದ ಪ್ರಾಧ್ಯಾಪಕ ಡೇವಿಡ್ ಓವನ್ ಕೆನಡಿ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ನಿಂಬೆ ಬಾಮ್ ಚಹಾದಲ್ಲಿರುವ ರೋಸ್ಮರಿನಿಕ್ ಆಮ್ಲವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ಉತ್ತಮ ನಿದ್ರೆ ಲಭಿಸುತ್ತೆ:ಲೆಮನ್ ಬಾಮ್ ಟೀ ಕೆಫೀನ್ನಂತೆ ನಿದ್ರೆಗೆ ಭಂಗ ತರದೇ ಆರಾಮವಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿದ್ರಾಹೀನತೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಇದನ್ನು ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ. ಲೆಮನ್ ಬಾಮ್ ಟೀ ಸೇವನೆಯು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಆರಾಮವಾಗಿ ನಿದ್ರಿಸಲು ಸಹಾಯ ಮಾಡುತ್ತದೆ ಎಂದು ಜರ್ನಲ್ ಆಫ್ ನ್ಯೂಟ್ರಿಷನ್ ಅಂಡ್ ಮೆಟಾಬಾಲಿಸಂನಲ್ಲಿ ವಿವರಿಸಲಾಗಿದೆ.
ಮೆದುಳಿನ ಆರೋಗ್ಯ ಸುಧಾರಿಸುತ್ತೆ:ನಿಂಬೆ ಬಾಮ್ ಚಹಾವು ಮಾನಸಿಕ ಶಾಂತಿಯನ್ನು ನೀಡುವುದಲ್ಲದೆ ಮೆದುಳನ್ನು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಸೈಕೋಸ್ಮೋಟಿಕ್ ಔಷಧದ ಅಧ್ಯಯನದ ಪ್ರಕಾರ, ನಿಂಬೆ ಬಾಮ್ ಚಹಾದಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂದು ತಿಳಿಸಲಾಗಿದೆ. ನಿಂಬೆ ಬಾಬ್ ಚಹಾವನ್ನು ಕೆಫೀನ್ ಇಲ್ಲದೆ ಮೆದುಳಿನ ಚಟುವಟಿಕೆಗೆ ಉತ್ತಮ ಔಷಧಿ ಎಂದು ಸೂಚಿಸಲಾಗುತ್ತದೆ.