ಹೈದರಾಬಾದ್: ಪುರುಷರಲ್ಲಿ ಸಾವಿಗೆ ಕಾರಣವಾಗುತ್ತಿರುವ ಕ್ಯಾನ್ಸರ್ನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡಾ ಪ್ರಮುಖವಾಗಿದೆ. ಈ ಕ್ಯಾನ್ಸರ್ ಅನ್ನು ಪತ್ತೆ ಮಾಡಲು ಮೊದಲಿಗೆ ರಕ್ತದಲ್ಲಿನ ಪ್ರಾಸ್ಟೇಟ್ ಸ್ಪೇಸಿಫಿಕ್ ಅಂಟಿಜೆನ್ (ಪಿಎಸ್ಎ) ಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ. ಪಿಎಸ್ಎ ಮೂಲಕ ರಕ್ತದಲ್ಲಿನ ಪ್ರೋಟಿನ್ ಮಟ್ಟ ಪರೀಕ್ಷೆ ಮಾಡುವ ಮೂಲಕ ಇದರ ಪತ್ತೆ ಮಾಡಲಾಗುತ್ತದೆ. ಇದು ಬಹಳ ಹೆಚ್ಚಿದ್ದರೆ, ಮತ್ತೊಂದು ಪರೀಕ್ಷೆ ಅವಶ್ಯಕತೆ ಎದುರಾಗುತ್ತದೆ. ಕೆಲವರಲ್ಲಿ ಇದರಿಂದ ಪ್ರಾಸ್ಟೇಟ್ ಗ್ರಂಥಿಯನ್ನೇ ತೆಗೆಯಬೇಕಾಗುತ್ತದೆ. ಮತ್ತೆ ಬಯಪ್ಸಿ ಪರೀಕ್ಷೆ ನಡೆಸಲಾಗುತ್ತದೆ. ಇದು ಅತಿ ಸುರಕ್ಷಿತ ಪರೀಕ್ಷೆಯಾಗಿದೆ. ಆದರೆ, ಕೆಲವೊಮ್ಮೆ ಇದು ನೋವುದಾಯಕವಾಗಿದೆ. ಇದು ಹಲವರಲ್ಲಿ ಜ್ವರ, ಮೂತ್ರನಾಳ ಸೋಂಕಿನಂತಹ ಅನೇಕ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಅನಗತ್ಯವಾಗಿ ಬಯಪ್ಸಿ ಪರೀಕ್ಷೆ ಮಾಡುವುದನ್ನು ತಡೆಯುವ ಚಿಕಿತ್ಸೆ ಕುರಿತು ಅಧ್ಯಯನ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ 10 ವರ್ಷದ ಹಿಂದೆ ಮೂತ್ರ ಪರೀಕ್ಷೆ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ ಮಾಡಲಾಗಿತ್ತು. ಆದರೆ, ಇದು ಕೇವಲ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡುತ್ತಿತ್ತು. ಅಲ್ಲದೇ, ಇದು ಗಂಭೀರ ಕ್ಯಾನ್ಸರ್ ಅಥವಾ ನಿಧಾನ ಹಂತದ ಕ್ಯಾನ್ಸರ್ ಎಂಬ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಇವುಗಳ ನಡುವೆ ವ್ಯತ್ಯಾಸ ಕೂಡ ಕಂಡು ಬರುತ್ತಿರಲಿಲ್ಲ. ನಿಧಾನವಾಗಿ ಬೆಳವಣಿಗೆ ಆಗುತ್ತಿರುವ ಕ್ಯಾನ್ಸರ್ಗೆ ಹೆಚ್ಚಿನ ಚಿಕಿತ್ಸೆ ಬೇಡ ಎಂಬುದು ಮರೆಯುವಂತಿಲ್ಲ. ಕ್ಯಾನ್ಸರ್ನ ಸೂಕ್ಷ್ಮವಾಗಿ ಗಮನಿಸಿ, ಅದರ ಪರಿಸ್ಥಿತಿ ಪರೀಕ್ಷೆ ನಡೆಸಬೇಕಿತ್ತು. ಈ ಕ್ಯಾನ್ಸರ್ ಆರಂಭದಲ್ಲಿ ಪತ್ತೆಯಾದಲ್ಲಿ, ಅನಗತ್ಯವಾಗಿ ಬಯಪ್ಸಿ ಮಾಡುವುದು ತಪ್ಪಲಿದೆ. ಈ ಅಂಶ ಗಮನದಲ್ಲಿ ಇದೀಗ ವಾಂಡರ್ಬಿಲ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೂತ್ರ ಪರೀಕ್ಷೆ ಸುಧಾರಣೆ ಪರೀಕ್ಷೆ ಅಭಿವೃದ್ಧಿ ಪಡಿಸಿದೆ.