ಹೈದರಾಬಾದ್:ಅವರೆಲ್ಲ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಅದೇ ನೋವಿನಲ್ಲಿ ಹಲವು ವರ್ಷಗಳ ಕಾಲ ಕಳೆದರು. ಅವರೆಲ್ಲ ಬೆಳವಣಿಗೆ ಕಾಣುತ್ತಾ ಸಾಗಿದಂತೆ ಅವರ ಮೊಣಕಾಲುಗಳ ಬಳಲಿಕೆಯೂ ಹೆಚ್ಚಾಗುತ್ತಾ ಸಾಗಿತು. ಈ ಪರಿಣಾಮವಾಗಿ ಅವರೆಲ್ಲ ಅನೇಕ ತೊಂದರೆಗಳನ್ನು ಎದುರಿಸಿದರು. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಈ ಚಿಕಿತ್ಸೆಗೆ ಸುಮಾರು 2 ಲಕ್ಷ ರೂ.ವರೆಗೆ ಖರ್ಚಾಗುತ್ತಿತ್ತು. ಹೀಗಾಗಿ ಅವರೆಲ್ಲ ಅದೇ ನೋವಿನಲ್ಲಿ ಕಾಲ ದೂಡಿದರು. ಹೀಗೆ ನೋವಿನಲ್ಲಿ ಕಾಲ ದೂಡುತ್ತಿದ್ದವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ.
ನಿಮ್ಸ್ನಲ್ಲೇ ಇವರ ನೋವಿಗೆ ಪರಿಹಾರ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ, ವ್ಹೀಲ್ ಚೇರ್ ನಲ್ಲಿ ಆಸ್ಪತ್ರೆಗೆ ಬಂದ್ದಿದ್ದರು. ಹೀಗೆ ಬಂದವರನ್ನು ನಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ನೆಮ್ಮದಿಯಿಂದ ನಡೆದುಕೊಂಡು ಮನೆಗೆ ತೆರಳುವಂತೆ ಮಾಡಿದ್ದಾರೆ.
ಅಂದ ಹಾಗೆ ಇದರೆಲ್ಲೇನು ವಿಶೇಷ ಅಂತೀರಾ. NIMS ವೈದ್ಯರು ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 7 ಮೊಣಕಾಲು ಬದಲಿ ಮತ್ತು ಒಂದು ಹಿಪ್ ಕೀಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಈ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಚೆರುಕುರಿ ನಾಗೇಶ್ ನೇತೃತ್ವದಲ್ಲಿ ಈ ಚಿಕಿತ್ಸೆಗಳನ್ನು ಮಾಡಲಾಗಿದೆ. ಇದನ್ನು ಆರೋಗ್ಯಶ್ರೀ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿ (ಎಲ್‌ವಿಒಸಿ) ವತಿಯಿಂದ ಉಚಿತವಾಗಿ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.