ತಮ್ಮ ವಿಭಿನ್ನ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡಿರುವ ಸಿನಿಮಾ 'ಯು ಐ'. ಅದರಲ್ಲೂ ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಬರೋಬ್ಬರಿ 7 ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಎಂದ ಮೇಲೆ ನಿರೀಕ್ಷೆಗಳು ಹೆಚ್ಚೇ ಅಲ್ವೇ?. ಇದೀಗ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಚಿತ್ರದ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ.
ಡಿಸೆಂಬರ್ 2 ರಂದು ಬೆಳಗ್ಗೆ 11:07ಕ್ಕೆ ಸಿನಿಮಾದಿಂದ ಏನೋ ರಿವೀಲ್ ಆಗಲಿದೆ. ಆದರೆ, ಅದೇನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಉಪೇಂದ್ರ ಅವರು ಎಂದಿನಂತೆ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟಿದ್ದಾರೆ. ''𝐖𝐀𝐑𝐍𝐄𝐑'' ಶೀರ್ಷಿಕೆಯಡಿ ಚಿತ್ರದ ಕಂಟೆಂಟ್ ಬಿಡುಗಡೆ ಆಗಲಿದೆ. ಹಾಗಂತ ಇದು ಟೀಸರ್ ಅಥವಾ ಟ್ರೇಲರ್ ಆಗಿರೋದಿಲ್ಲ. ಏನೆಂಬುದು ಸೋಮವಾರವೇ ತಿಳಿಯಲಿದೆ.
ಉಪೇಂದ್ರ ಅವರು 'ಬುದ್ಧಿವಂತ' ನಟ, ನಿರ್ದೇಶಕ ಎಂದೇ ಹೆಸರಾಗಿದ್ದಾರೆ. ಅವರ ಸಿನಿಮಾಗಳು ವಿಶಿಷ್ಟ. ರಿಯಲ್ ಸ್ಟಾರ್ ಉಪ್ಪಿ ಅಂದ್ಮೇಲೆ ನಿರೀಕ್ಷೆಗಳು, ಕುತೂಹಲ ಎಲ್ಲವೂ ಹೆಚ್ಚೇ. ಅವರು ಸಿನಿಮಾ ನೋಡುವ ಮತ್ತು ನಿರ್ಮಿಸುವ ಪರಿಯೇ ವಿಭಿನ್ನ. ಈಗಾಗಲೇ ಬಂದಿರುವ ಅವರ ಹಲವು ಸಿನಿಮಾಗಳು ಅದನ್ನೇ ಸಾಬೀತುಪಡಿಸಿವೆ. ಅದರಂತೆ ಅವರ ವೃತ್ತಿಜೀವನದಲ್ಲೇ ಈ 'ಯು ಐ' ಕೂಡಾ ವಿಶಿಷ್ಟ ಸಿನಿಮಾ ಆಗುವ ಎಲ್ಲಾ ಲಕ್ಷಣಗಳಿವೆ. ಅದಕ್ಕೆ ಪೂರಕವಾಗಿ ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್ಸ್, ಟೀಸರ್, ಟ್ರೋಲ್ ಸಾಂಗ್ ಸಖತ್ ಸದ್ದು ಮಾಡಿದೆ.
ಇದನ್ನೂ ಓದಿ:'ಬಚ್ಚನ್' ಸರ್ನೇಮ್ ಕೈಬಿಟ್ಟ ಐಶ್ವರ್ಯಾ ರೈ! ಐಶ್-ಅಭಿ ಡಿವೋರ್ಸ್ ರೂಮರ್ಸ್ ಉಲ್ಭಣ
ಸದಾ ವಿಭಿನ್ನ ವಿಚಾರಗಳಿಂದ ಜನಪ್ರಿಯರಾಗಿರುವ ರಿಯಲ್ ಸ್ಟಾರ್ ತಮ್ಮ ಈ ಸಿನಿಮಾ ಮೂಲಕ ಪ್ರೇಕ್ಷಕರಿಗೊಂದು ಸಂದೇಶ ಕೊಡಲು ಸಜ್ಜಾಗಿದ್ದಾರೆ. ಯಾವುದರ ಬಗ್ಗೆ ಅನ್ನೋದು ಮಾತ್ರ ಇನ್ನಷ್ಟೇ ತಿಳಿಯಬೇಕಿದೆ. ಈಗಾಗಲೇ ಅನಾವರಣಗೊಂಡಿರುವ ಟ್ರೋಲ್ ಸಾಂಗ್ನಲ್ಲಿ ರಾಜ್ಯದಲ್ಲಿ ನಡೆದಿರುವ ಟ್ರೋಲ್ ಘಟನೆಗಳನ್ನು ಅಳವಡಿಸಲಾಗಿತ್ತು.
ಇದನ್ನೂ ಓದಿ:ನಾ ಸಾಮಿ ಸಾಂಗ್ಗೆ ರಶ್ಮಿಕಾ ಮಸ್ತ್ ಡ್ಯಾನ್ಸ್: 'ನೀವಿಲ್ಲದೇ ನನಗೆ ನಟಿಸಲು ಸಾಧ್ಯವಾಗುತ್ತಿರಲಿಲ್ಲ'ವೆಂದ ಅಲ್ಲು ಅರ್ಜುನ್
ನಟ ಉಪೇಂದ್ರ ಅವರ ವೃತ್ತಿಜೀವನದಲ್ಲೇ ಇದೊಂದು ಬಿಗ್ ಬಜೆಟ್ ಚಿತ್ರ ಎಂದು ಹೇಳಲಾಗಿದೆ. ಈ ಚಿತ್ರದ ಬಜೆಟ್ ಸರಿ ಸುಮಾರು 100 ಕೋಟಿ ರೂಪಾಯಿ ಎಂದು ವರದಿಗಳು ತಿಳಿಸಿವೆ. ಈ ಸಿನಿಮಾವನ್ನು ಬಹಳ ವಿಶೇಷವಾಗಿ ಪ್ರೆಸೆಂಟ್ ಮಾಡೋ ಉದ್ದೇಶದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಈ ಸಿನಿಮಾಗಿದ್ದು, ಯುರೋಪ್ನಲ್ಲಿ ಸೌಂಡ್ ಮಿಕ್ಸಿಂಗ್ ಕೆಲಸ ನಡೆದಿದೆ. ಕೆ.ಪಿ ಶ್ರೀಕಾಂತ್ ಮತ್ತು ನವೀನ್ ಮನೋಹರ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರ ಡಿಸೆಂಬರ್ 20ಕ್ಕೆ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಇನ್ನೊಂದು ತಿಂಗಳಲ್ಲಿ ತಿಳಿದು ಬರಲಿದೆ.