ETV Bharat Karnataka

ಕರ್ನಾಟಕ

karnataka

ETV Bharat / entertainment

’ನಾನು ಡಿಸಿಗೆ ತುಂಬಾ ಕ್ಲೋಸ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಠ ರೀತಿಯ ಚುನಾವಣಾ ಪ್ರಚಾರ - Voting Awareness - VOTING AWARENESS

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಹಾಸ್ಯನಟ ಅರವಿಂದ್ ಬೋಳಾರ್ ಅವರ ಮತದಾನ ಜಾಗೃತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Voting Awareness by Actor Aravind Bolar
ಅರವಿಂದ್ ಬೋಳಾರ್ ಮತದಾನ ಜಾಗೃತಿಯ ವಿಡಿಯೋ
author img

By ETV Bharat Karnataka Team

Published : Apr 24, 2024, 1:21 PM IST

Updated : Apr 24, 2024, 1:28 PM IST

ಅರವಿಂದ್ ಬೋಳಾರ್ ಮತದಾನ ಜಾಗೃತಿಯ ವಿಡಿಯೋ

ಮಂಗಳೂರು (ದಕ್ಷಿಣ ಕನ್ನಡ): 'ನಾನು ಡಿಸಿಗೆ ತುಂಬಾ ಕ್ಲೋಸ್', ಹೀಗೊಂದು ವಿಶಿಷ್ಠ ಮತದಾನ ಜಾಗೃತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಸಾಮಾನ್ಯ. ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸಿ, ಮತದಾರರನ್ನು ಮತಗಟ್ಟೆಗೆ ಕರೆಸಿ ಮತ ಚಲಾಯಿಸುವಂತೆ ಮಾಡುವ ಪ್ರಯತ್ನ ಅಧಿಕಾರಿಗಳಿಂದ ನಡೆಯುತ್ತಲೇ ಇರುತ್ತದೆ. ಅದರಂತೆ ಇದೀಗ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಹಾಸ್ಯನಟ ಅರವಿಂದ್ ಬೋಳಾರ್ ಅವರು ವಿಶಿಷ್ಟ ಪ್ರಯತ್ನದ ಮೂಲಕ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಕರಾವಳಿಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಸರ್ವ ಧರ್ಮದವರು ಸಹ ಹೆಚ್ಚಾಗಿ ತುಳು ಭಾಷೆಯಲ್ಲಿಯೇ ಸಂವಹನ ನಡೆಸುತ್ತಾರೆ. ಹಾಗಾಗಿ, ದ.ಕ. ಜಿಲ್ಲೆಯ ಜನತೆ ಮತಗಟ್ಟೆಗೆ ಬರುವಂತೆ ಮಾಡಲು ತಮಿಳುನಾಡು ಮೂಲದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತುಳು ಭಾಷೆಯಲ್ಲಿಯೇ ಸಂವಹನ ನಡೆಸುವ ಮೂಲಕ ಮತದಾನ ಜಾಗೃತಿ ನಡೆಸಿದ್ದಾರೆ.

ತುಳು ಜಾನಪದ ವಿದ್ವಾಂಸ ಕೆ.ಕೆ ಪೇಜಾವರ, ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ಮತ್ತು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಈ ಮತದಾನ ಜಾಗೃತಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಡಾ. ರಾಜ್ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ನಟಸಾರ್ವಭೌಮ - Dr Raj Birth Anniversary

ಸದ್ಯ ಜಾಗೃತಿಯ ವಿಡಿಯೋ ಆನ್​ಲೈನ್​ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮತದಾರರು ಮತದಾನ ಮಾಡಬೇಕಾದಲ್ಲಿ ತಮ್ಮ ಬೂತ್ ಯಾವುದು ಎಂದು ಸುಲಭವಾಗಿ ತಿಳಿಯಲು ಸ್ವೀಪ್​ನಿಂದ ಈ ಜಾಗೃತಿ ವಿಡಿಯೋ ಮಾಡಲಾಗಿದೆ. ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಮತದಾರರು ತಾವು ವೋಟ್ ಹಾಕುವ ಬೂತ್ ಯಾವುದು ಎಂದು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ವಿಡಿಯೋದಲ್ಲೇನಿದೆ? ಅರವಿಂದ್ ಬೋಳಾರ್ ಬಳಿ ಮತ ಚಲಾಯಿಸಿದರೆ? ಎಂದು ಪ್ರಶ್ನಿಸಲಾಗುತ್ತದೆ. ಅದಕ್ಕೆ ನನಗೆ ಮತದಾನ ಎಲ್ಲಿ ಮಾಡಬೇಕು ಎಂದು ತಿಳಿದಿಲ್ಲ ಎಂದು ಅರವಿಂದ್ ಹೇಳುತ್ತಾ, ಡಿಸಿಗೆ ಕರೆ ಮಾಡುತ್ತಾರೆ. ನಾನು ನಿಮ್ಮ ಕ್ಲೋಸ್​ ಫ್ರೆಂಡ್​ ಎಂದು ಹಾಸ್ಯದ ಮೂಲಕ ಮಾತು ಶುರು ಹಚ್ಚಿಕೊಳ್ಳುತ್ತಾರೆ. ಆಗ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ನಿಮ್ಮ ಮತಗಟ್ಟೆ ತಿಳಿದು ಕೊಳ್ಳಬಹುದು ಎಂದು ವಿಧಾನವನ್ನು ವಿವರಿಸಿದ್ದಾರೆ. ಸಂಜೆ 6 ಗಂಟೆ (ಏ. 26) ಒಳಗೆ ಮತ ಚಲಾಯಿಸಬೇಕು. ಇಲ್ಲದಿದ್ದರೆ ವೋಟ್​ ಮಿಸ್​ ಎಂದು ಅರವಿಂದ್ ಬೋಳಾರ್ ಹೇಳುತ್ತಾ ಮುನ್ನಡೆದಿದ್ದಾರೆ. ಒಟ್ಟಾರೆ ನಟ, ಜಿಲ್ಲಾಧಿಕಾರಿಯ ಮತದಾನ ಜಾಗೃತಿಯ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:6 ಪ್ಯಾನ್‌ ಇಂಡಿಯಾ ಸಿನಿಮಾ: ಇದು ಕನ್ನಡ ನಿರ್ದೇಶಕ ಚಂದ್ರು ಕನಸು - 6 Pan India Movies

Last Updated : Apr 24, 2024, 1:28 PM IST

ABOUT THE AUTHOR

...view details