ಕರ್ನಾಟಕ

karnataka

ETV Bharat / entertainment

ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ 'ದಿ ಟಾಸ್ಕ್​​' ಸಿನಿಮಾ - THE TASK

ರಾಘು ಶಿವಮೊಗ್ಗ ನಿರ್ದೇಶನದ ಮೂರನೇ 'ದಿ ಟಾಸ್ಕ್' ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ.

'The Task' film team
'ದಿ ಟಾಸ್ಕ್​​' ಚಿತ್ರತಂಡ (Photo: ETV Bharat)

By ETV Bharat Entertainment Team

Published : Nov 11, 2024, 7:55 PM IST

ಚೂರಿಕಟ್ಟೆ, ಪೆಂಟಗನ್ ಸಿನಿಮಾಗಳ ಸೂತ್ರಧಾರ ರಾಘು ಶಿವಮೊಗ್ಗ ಅವರು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ದಿ ಟಾಸ್ಕ್​​ ಚಿತ್ರದ ಶೀರ್ಷಿಕೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇಗುಲದಲ್ಲಿ ರಾಘು ನಿರ್ದೇಶನದ ಮೂರನೇ ಸಿನಿಮಾ 'ದಿ ಟಾಸ್ಕ್' ಸೆಟ್ಟೇರಿದೆ.

ಸಿನಿಮಾವೊಂದರ ಟೈಟಲ್​​ ಸಿನಿಪ್ರಿಯರಿಗೆ ಸಿಗುವ ಮೊದಲ ಆಮಂತ್ರಣ. ಅದರಂತೆ ಈ ಚಿತ್ರತಂಡ ಕೂಡಾ ತನ್ನ ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಕಥಾಹಂದರ ಏನಿರಬಹುದು ಎಂಬ ಕುತೂಹಲವನ್ನು ಸಿನಿಪ್ರಿಯರು ವ್ಯಕ್ತಪಡಿಸುತ್ತಿದ್ದಾರೆ. ಇದು ಸತ್ಯ ಘಟನೆಯನ್ನು ಆಧರಿಸಿದ ಚಿತ್ರ ಎಂಬುದು ಸದ್ಯಕ್ಕಿರುವ ಮಾಹಿತಿ. ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಡಿವೈಎಸ್​ಪಿ ರಾಜೇಶ್ 'ದಿ ಟಾಸ್ಕ್' ಸಿನಿಮಾಗೆ ಕ್ಲ್ಯಾಪ್ ಮಾಡಿದ್ರೆ, ಕೈವಾ ಸಿನಿಮಾದ ಛಾಯಾಗ್ರಾಹಕಿ ಶ್ವೇತ್ ಪ್ರಿಯಾ ಕ್ಯಾಮರಾಗೆ ಚಾಲನೆ ಕೊಟ್ಟರು.

'ದಿ ಟಾಸ್ಕ್​​' ಚಿತ್ರತಂಡ (Photo: ETV Bharat)

'ದಿ ಟಾಸ್ಕ್' ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ ಸಿನಿಮಾ. ಈ ಹಿಂದೆ ರಾಘು ಶಿವಮೊಗ್ಗ ನಿರ್ದೇಶನದ ಪೆಂಟಗನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಬಿಂಬಶ್ರೀ ನೀನಾಸಂ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

'ದಿ ಟಾಸ್ಕ್​​' ಚಿತ್ರತಂಡ (Photo: ETV Bharat)
'ದಿ ಟಾಸ್ಕ್​​' ಚಿತ್ರತಂಡ (Photo: ETV Bharat)

ಇದನ್ನೂ ಓದಿ:'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ

ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ದಿ ಟಾಸ್ಕ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.

'ದಿ ಟಾಸ್ಕ್​​' ಚಿತ್ರತಂಡ (Photo: ETV Bharat)

ಇದನ್ನೂ ಓದಿ:Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

ABOUT THE AUTHOR

...view details