ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಸೆಲೆಬ್ರಿಟಿಗಳ ಪಟ್ಟಿಗೆ ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ವಿಜಯ್ ದೇವರಕೊಂಡ ಅವರ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ಹೌದು, ಅವರು ತಮ್ಮ ಧಾರ್ಮಿಕ ಪ್ರಯಾಣದ ಫೋಟೋಗಳನ್ನಿಂದು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಾಯಿಯೊಂದಿಗೆ ನಟ ಪ್ರಾರ್ಥಿಸುತ್ತಿರುವುದನ್ನು ಈ ಫೋಟೋಗಳಲ್ಲಿ ಕಾಣಬಹುದು. ಹಾಗೆಯೇ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಜೊತೆಗಿದ್ದರು.
ವಿಜಯ್ ದೇವರಕೊಂಡ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವುದನ್ನು ಕಾಣಬಹುದು. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ತಿಲಕವಿಟ್ಟು ತಾಯಿಯೊಂದಿಗೆ ಪ್ರಾರ್ಥಿಸುತ್ತಿದ್ದಾರೆ. ಪುಣ್ಯ ಸ್ನಾನದ ನಂತರ, ಕಾಶಿಗೂ ಭೇಟಿ ನೀಡಿದ್ದಾರೆ.
ಫೋಟೋಗಳನ್ನು ಹಂಚಿಕೊಂಡ ಸೌತ್ ಸೂಪರ್ ಸ್ಟಾರ್, '2025 ಕುಂಭಮೇಳ, ಮೂಲದೊಂದಿಗೆ ಸಂಪರ್ಕಿಸುವ ಪ್ರಯಾಣ. ನನ್ನ ಸ್ನೇಹಿತರೊಂದಿಗೆ ನೆನಪುಗಳ ರಚನೆ, ತಾಯಿಯೊಂದಿಗೆ ಪ್ರಾರ್ಥನೆ. ಇವೆಲ್ಲವುಗಳ ಜೊತೆಗೆ ನಾನು ಕಾಶಿಗೂ ಭೇಟಿ ನೀಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.