ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪ್ರೇಮ್ಕಹಾನಿ ಸುತ್ತಲಿನ ವದಂತಿಗಳು ನಿನ್ನೆ ಮೊನ್ನೆಯದಲ್ಲ. 2023ರಲ್ಲಿ 'ಲಸ್ಟ್ ಸ್ಟೋರೀಸ್ 2' ಸೆಟ್ನಲ್ಲಿ ಪ್ರೇಮಾಂಕುರವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಜೋಡಿ 2025ರ ಹೊತ್ತಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.
ತಮನ್ನಾ ಮತ್ತು ವಿಜಯ್ ತಮ್ಮ ಸಂಬಂಧವನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದಾರೆ. ಆದರೆ, ಅವರ ಕೆಮಿಸ್ಟ್ರಿ ಕೆಲ ಈವೆಂಟ್ಗಳಲ್ಲಿ ಈಗಾಗಲೇ ಸಾಬೀತಾಗಿದೆ. ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕೈ ಕೈ ಹಿಡಿದು ಹೆಜ್ಜೆ ಹಾಕುವ ಮೂಲಕ ಮತ್ತು ಪಾಪರಾಜಿಗಳ ಕ್ಯಾಮರಾಗಳಲ್ಲಿ ಕಪಲ್ನಂತೆ ಪೋಸ್ ಕೊಡುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಮಹತ್ವದ ಘಟ್ಟಕ್ಕಾಗಿ ಜೋಡಿ ಐಷಾರಾಮಿ ಮನೆ ಹುಡುಕುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಈ ಇಬ್ಬರೂ ತಮ್ಮ ವೆಡ್ಡಿಂಗ್ ಪ್ಲ್ಯಾನ್ ಬಗ್ಗೆ ಸಾರ್ವಜನಿಕವಾಗಿ ಇನ್ನೂ ಏನನ್ನೂ ದೃಢಪಡಿಸದಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಚಿತ್ರರಂಗದವರು ಅಧಿಕೃತ ಅನೌನ್ಸ್ಮೆಂಟ್ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯಕ್ಕಿದು ವದಂತಿಯಷ್ಟೇ.
ಪ್ರೇಮಪಕ್ಷಿಗಳು ಭಾನುವಾರದಂದು ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ನಿವಾಸದಲ್ಲಿ ಫಾತಿಮಾ ಸನಾ ಶೇಖ್ ಅವರೊಂದಿಗೆ ಕಾಣಿಸಿಕೊಂಡರು. ಪಾಪರಾಜಿಗಳು ಹಂಚಿಕೊಂಡಿರುವ ಫೋಟೋದಲ್ಲಿ, ತಮನ್ನಾ ಬ್ಲ್ಯಾಕ್ ಪೋಲ್ಕ - ಡಾಟ್ ಡ್ರೆಸ್ನಲ್ಲಿ ಬೆಡಗು ಭಿನ್ನಾಣ ಪ್ರದರ್ಶಿಸಿದರು. ಮಲ್ಹೋತ್ರಾ ನಿವಾಸದೆದರು ಈ ಮೂವರು ಕ್ಯಾಮರಾಗಳಿಗೆ ಪೋಸ್ ನೀಡಿದ್ರು.