ಬಿಗ್ ಬಾಸ್ನಲ್ಲಿ ಚೈತ್ರಾ ಕುಂದಾಪುರ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಟಾಸ್ಕ್ಗಳಲ್ಲಿ ಅವರ ಉಸ್ತುವಾರಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳಪೆ ಪಟ್ಟ ಕೊಡುವಾಗಲೂ ಈ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲೂ ಚೈತ್ರಾ ತಮ್ಮ ಅಭಿಪ್ರಾಯ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.
''ಮಾತುಗಳ ಬಾಣ!'' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ. ಚೈತ್ರಾ ಕುಂದಾಪುರ ಕಣ್ಣೀರಲ್ಲಿ ಮುಳುಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಕೆಲ ವಿಷಯಗಳಿಂದ ವಾರಾಂತ್ಯದ ಸಂಚಿಕೆಯಲ್ಲಿ ಚೈತ್ರಾರಿಗೆ ಕಿಚ್ಚನ ಕ್ಲಾಸ್ ಸಿಕ್ಕಿರೋದು ನಿಮಗೆ ತಿಳಿದಿರುವ ವಿಚಾರವೇ. ಹಿಂದೊಮ್ಮೆ ನನ್ನ ಕೈಲಿ ಆಗುತ್ತಿಲ್ಲ, ಕಳುಹಿಸಿಕೊಡಿ ಎನ್ನುವಷ್ಟರ ಹಂತಕ್ಕೆ ಚೈತ್ರಾ ತಲುಪಿದ್ದರು. ಇದೀಗ ಮತ್ತೆ ಕಿಚ್ಚನ ಕ್ಲಾಸ್ಗೆ ಒಳಗಾಗಿದ್ದಾರೆ.
ಯಾರಿಗೆ ನಾಮಿನೇಷನ್ಗೆ ಅವಕಾಶ ಸಿಗಲಿಲ್ವೋ ಅವರಿಗೆ ನಾನೀಗ ಒಂದು ಅವಕಾಶ ಕೊಡುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ. ಹೆಚ್ಚಿನವರು ಚೈತ್ರಾ ಕುಂದಾಪುರ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಸರಿಯಾಗಿ, ನೀಯತ್ತಾಗಿ ಉಸ್ತುವಾರಿ ಮಾಡಬೇಕಾಗಿತ್ತು ಎಂದು ಹನುಮಂತು ತಿಳಿಸಿದ್ದಾರೆ. ನಂತರ ಚೈತ್ರಾ ಪ್ರತಿಕ್ರಿಯಿಸಿ, ಮೂರು ಬಾರಿ ಕಳಪೆ ಕೊಡ್ತಾರೆ. ಮೂರೂ ಬಾರಿಯೂ ಉಸ್ತುವಾರಿಯದ್ದೇ ಕಾರಣ ಕೊಡ್ತಾರೆ. ಒಳಗಡೆ ಎಷ್ಟು ಕುಗ್ಗಿಸುತ್ತೇ ಅನ್ನೋದು ನಮಗೆ ಮಾತ್ರ ಗೊತ್ತು ಎಂದು ಚೈತ್ರಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.