ಕರ್ನಾಟಕ

karnataka

ETV Bharat / entertainment

'ಆ ನಿರ್ದೇಶಕನಿಗೆ ಮುಸುಕು ಹಾಕಿ ಹೊಡೆದರೆ ₹10 ಸಾವಿರ ಕೊಡುತ್ತೇನೆ': ಅಚ್ಚರಿ ಹುಟ್ಟಿಸಿದ ರಾಜಮೌಳಿ ಆಫರ್ - S S Rajamouli - S S RAJAMOULI

ಹೈದರಾಬಾದ್‌ನಲ್ಲಿ ನಡೆದ 'ಕೃಷ್ಣಮ್ಮ' ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಪಾಲ್ಗೊಂಡಿದ್ದ ನಿರ್ದೇಶಕರುಗಳಾದ ಅನಿಲ್ ರವಿಪುಡಿ ಮತ್ತು ಎಸ್‌.ಎಸ್.ರಾಜಮೌಳಿ ಅವರ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

SS Rajamouli
ಎಸ್‌ಎಸ್ ರಾಜಮೌಳಿ (Etv Bharat)

By ETV Bharat Karnataka Team

Published : May 3, 2024, 6:07 PM IST

ಭಾರತೀಯ ಚಿತ್ರರಂಗದ ಬ್ಲಾಕ್‌ಬಸ್ಟರ್ ಸಿನಿಮಾ 'ಆರ್‌ಆರ್‌ಆರ್' ನಂತರ ಹೆಸರಾಂತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ತಮ್ಮ ಮುಂದಿನ ಪ್ರೊಜೆಕ್ಟ್​ ಕಡೆ ಗಮನಹರಿಸಿದ್ದು, ಟಾಲಿವುಡ್​​ ಸೂಪರ್‌ ಸ್ಟಾರ್ ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ತಾತ್ಕಾಲಿಕವಾಗಿ ಇದಕ್ಕೆ 'SSMB29' ಹೆಸರಿಡಲಾಗಿದೆ. ಚಿತ್ರದ ಮೇಲಿನ ಕ್ರೇಜ್​​, ಅಂತೆಕಂತೆಗಳು ದೊಡ್ಡ ಮಟ್ಟಿಗಿವೆ. ಮಹೇಶ್ ಬಾಬು ಅಭಿಮಾನಿಗಳು ಚಿತ್ರದ ಅಪ್ಡೇಟ್ಸ್​​ಗಾಗಿ ಕಾತರರಾಗಿದ್ದಾರೆ.

ಮೇ.1ರಂದು, ಸತ್ಯದೇವ್ ಅಭಿನಯದ ಕೃಷ್ಣಮ್ಮ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಡೆದಿತ್ತು. ಖ್ಯಾತ ನಿರ್ದೇಶಕರುಗಳಾದ ಕೊರಟಾಲ ಶಿವ, ಎಸ್‌.ಎಸ್.ರಾಜಮೌಳಿ ಮತ್ತು ಅನಿಲ್ ರವಿಪುಡಿ ಒಂದೇ ವೇದಿಕೆಯಲ್ಲಿದ್ದರು. ಮೂವರು ನಿರ್ದೇಶಕರನ್ನು ಒಟ್ಟುಗೂಡಿಸಿದ ಕಾರ್ಯಕ್ರಮದ ಫೋಟೋ, ವಿಡಿಯೋಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್​​ ಆಗಿದೆ. ರಾಜಮೌಳಿ ಹಾಗೂ ಅನಿಲ್ ನಡುವಿನ ತಮಾಷೆಯ ಕ್ಷಣಗಳು ಸೋಷಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡುತ್ತಿವೆ.

ಈ ಕಾರ್ಯಕ್ರಮದಲ್ಲಿ ಅನಿಲ್ 'ದೇವರ' ಮತ್ತು 'ಎಸ್‌ಎಸ್‌ಎಂಬಿ 29'ರ ಸುತ್ತಲಿರುವ ಉತ್ಸಾಹ ಹೆಚ್ಚಿಸುವ ಕೆಲಸ ಮಾಡಿದರು. 'ಎಸ್‌ಎಸ್‌ಎಂಬಿ 29' ಶೂಟಿಂಗ್​​ ಯಾವಾಗ ಪ್ರಾರಂಭವಾಗುತ್ತದೆ ಎಂದು ರಾಜಮೌಳಿಗೆ ಪ್ರಶ್ನಿಸಿದರು. ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಬಗ್ಗೆ ಮಾಹಿತಿ ಕೊಡುವಂತೆ ಕೊರಟಾಲ ಶಿವ ಅವರಲ್ಲಿ ಕೇಳಿದರು. ನಗುವಿನೊಂದಿಗೆ ಎದುರು ಬಂದ ರಾಜಮೌಳಿ ತಮಾಷೆಯಾಗಿ, ಅನಿಲ್‌ ಅವರಿಗೆ ಹೊಡೆಯುವಂತೆ ಪ್ರೇಕ್ಷಕರನ್ನು ಪ್ರೋತ್ಸಾಹಿಸಿದರು. ಅನಿಲ್​ಗೆ ಮುಸುಕು ಹಾಕಿ ಹೊಡೆದರೆ 10 ಸಾವಿರ ರೂ ಕೊಡುತ್ತೇನೆ ಎಂದು ರಾಜಮೌಳಿ ಹೇಳಿದ್ದು, ಪ್ರೇಕ್ಷಕರೂ ಸೇರಿದಂತೆ ವೇದಿಕೆಯಲ್ಲಿದ್ದವರು ನಕ್ಕು ನಕ್ಕು ಸುಸ್ತಾದರು.

ಇದನ್ನೂ ಓದಿ:ರಾಕಿಂಗ್​ ಸ್ಟಾರ್ ಯಶ್​ ಅಭಿನಯದ 'ಟಾಕ್ಸಿಕ್' 2 ಭಾಗಗಳಲ್ಲಿ ನಿರ್ಮಾಣ? - Toxic

ಗುಂಟೂರು ಖಾರಂ ಯಶಸ್ಸಿನಲ್ಲಿರುವ ಮಹೇಶ್ ಬಾಬು ಎಸ್​​ಎಸ್​ಎಂಬಿ29ಗಾಗಿ ವಿಶೇಷ ತಯಾರಿ ನಡೆಸುತ್ತಿದ್ದಾರೆ. ತಮ್ಮ ಹೊಸ ನೋಟದ ಮೂಲಕ ಹಲವು ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ. ರಾಜಮೌಳಿ ನಿರ್ದೇಶನದ ಈ ಚಿತ್ರ ಒಂದು ಜಂಗಲ್​ ಅಡ್ವೆಂಚರ್ ಎಂದು ವರದಿಗಳಾಗಿವೆ. ಮಹೇಶ್ ಬಾಬು ಅವರ ಪಾತ್ರ ಭಗವಾನ್ ಹನುಮಾನ್‌ನಿಂದ ಪ್ರೇರಿತವಾಗಿದೆ.

ಇದನ್ನೂ ಓದಿ:ಉರ್ಫಿ ಜಾವೇದ್​​ ಹೊಸ ಮ್ಯಾಜಿಕ್​​! ಬಟ್ಟೆಯಿಂದ ಹಾರಿತು ಚಿಟ್ಟೆ, ಗೌನ್​​ನಲ್ಲೇ ಗಾರ್ಡನ್​​ - ವಿಡಿಯೋ ನೋಡಿ - Urfi Javed Magical Gown

ಮತ್ತೊಂದೆಡೆ, ಜೂನಿಯರ್ ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಅಭಿನಯದ ಕೊರಟಾಲ ಶಿವ ಅವರ 'ದೇವರ' ಪ್ರೊಜೆಕ್ಟ್​ ಕೂಡ ಬಹಳ ಕುತೂಹಲ ಸೃಷ್ಟಿಸಿದೆ. ಎರಡು ಭಾಗಗಳಲ್ಲಿ ಈ ಚಿತ್ರ ಮೂಡಿಬರಲಿದೆ. ವಿಶ್ವಾದ್ಯಂತ ಸದ್ದು ಮಾಡಿದ ಆರ್​ಆರ್​ಆರ್​ ನಂತರ ಬರುತ್ತಿರುವ ಜೂನಿಯರ್ ಎನ್​ಟಿಆರ್​​ ಮುಖ್ಯಭೂಮಿಕೆಯ ಚಿತ್ರವಿದು. ಎರಡೂ ಚಿತ್ರಗಳ ಅಪ್ಡೇಟ್ಸ್ ಮತ್ತು ಬಿಡುಗಡೆ ದಿನಾಂಕಗಳಿಗಾಗಿ ಅಭಿಮಾನಿಗಳ ಕಾತರ ಹೆಚ್ಚಿಸಿದೆ. ತೆಲುಗು ಚಿತ್ರರಂಗದ ಬಹುನಿರೀಕ್ಷೆಯ ಚಿತ್ರ ಇದು ಎಂಬುದು ಮತ್ತೊಂದು ವಿಶೇಷ ಸಂಗತಿ.

ABOUT THE AUTHOR

...view details