ಮುಂಬೈ (ಮಹಾರಾಷ್ಟ್ರ) :ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಬಾಲಿವುಡ್ನ ನವದಂಪತಿ. ಇವರಿಬ್ಬರ ಸರಳ ವಿವಾಹ ಎಲ್ಲರ ಗಮನ ಸೆಳೆದಿದೆ. ಅವರ ಮದುವೆಯ ಕುರಿತು ಈ ವರ್ಷದಲ್ಲಿ ಅತಿ ಹೆಚ್ಚು ಮಾತನಾಡಲಾಯಿತು. ಇದು ಅತ್ಯಂತ ಸುಂದರವಾದ ವಿವಾಹಗಳಲ್ಲಿ ಒಂದಾಗಿದೆ. ದಂಪತಿ ವಿವಾಹದ ಒಂದು ವಾರದ ನಂತರ, ಅವರ ಉತ್ತಮ ಸ್ನೇಹಿತ ಪ್ರಾಚಿ ಮಿಶ್ರಾ ಅವರು ಹೃದಯ ಸ್ಪರ್ಶಿಸುವ ಶೀರ್ಷಿಕೆಯೊಂದಿಗೆ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಾಚಿ ಮಿಶ್ರಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸೋನಾಕ್ಷಿ-ಜಹೀರ್ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ''ನಮಗೆ ವಾಯ್ಸ್ ಮೆಸೇಜ್ ಮತ್ತು ವಿಡಿಯೋ ಕಾಲ್ ರೂಪದಲ್ಲಿ ಅಚ್ಚರಿಯೊಂದು ಸಿಕ್ಕಿತು. ಇವು ಸೋನಾ ಮತ್ತು ಜಹೀರ್ (ಈಗ ಪತಿ-ಪತ್ನಿ) ಮದುವೆಯಾಗುತ್ತಿರುವುದನ್ನು ಖಚಿತಪಡಿಸಿವೆ'' ಎಂದು ಬರೆದುಕೊಂಡಿದ್ದಾರೆ.
''ಮಾಧ್ಯಮಗಳು ಸಾಕಷ್ಟು ಊಹಾಪೋಹಗಳನ್ನು ಮಾಡಿದವು. ಆದರೆ ನಮ್ಮ ಬ್ಲಾಕ್ಬಸ್ಟರ್ ಜೋಡಿಯು ಅದರಿಂದ ಪ್ರಭಾವಿತವಾಗಿಲ್ಲ. ತನ್ನ ಎಲ್ಲಾ ಅತಿಥಿಗಳು ಮನೆಯಲ್ಲಿ ಆತಿಥ್ಯ ಅನುಭವಿಸುವಂತೆ ಅವರು ನೋಡಿಕೊಂಡರು. ವಿವಾಹವು ನಾಗರಿಕ ಸಮಾರಂಭದೊಂದಿಗೆ ಪ್ರಾರಂಭವಾಯಿತು. ನಂತರ ಹಿಂದೂ ಸಂಪ್ರದಾಯದ ಕನ್ಯಾದಾನ (ವಧುವಿನ ಪೋಷಕರು ತಮ್ಮ ಮಗಳನ್ನು ವರನಿಗೆ ಕೊಡುವುದು) ಅನುಸರಿಸಿದರು. ಮಂತ್ರಗಳ ಪಠಣವು ಮಸೀದಿಯಿಂದ ಆಜಾನ್ ಶಬ್ಧದೊಂದಿಗೆ ಬೆರೆತಾಗ ಈ ಆಚರಣೆಯು ಇನ್ನಷ್ಟು ಪವಿತ್ರವಾಯಿತು'' ಎಂದು ಬರೆದಿದ್ದಾರೆ.