ಹೈದರಾಬಾದ್: ಜನಪ್ರಿಯ ತಾರಾ ದಂಪತಿ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರ ಪ್ರೇಮ್ಕಹಾನಿ ಯಾವುದೇ ಫೇರಿ ಟೇಲ್ಗಿಂತ ಕಡಿಮೆಯಿಲ್ಲ. 2018ರ ನವೆಂಬರ್ನಲ್ಲಿ ದಾಂಪತ್ಯ ಜೀವನ ಆರಂಭಿಸಿದ ದೀಪ್ವೀರ್ 2024ರ ಸೆಪ್ಟೆಂಬರ್ನಲ್ಲಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ದೊಡ್ಡ ಪಯಣ ಹೊಂದಿರುವ ತಾರಾದಂಪತಿಯ ಪ್ರೇಮಕಥೆ 2013ರ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸಿನಿಮಾ ಸೆಟ್‌ನಲ್ಲಿ ಶುರುವಾಯಿತು. ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪರದೆ ಮೇಲೆ ಸಖತ್ ಸದ್ದು ಮಾಡಿತ್ತು. ಇಬ್ಬರ ಸಂಬಂಧ ಗಟ್ಟಿಯಾಗಿ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾಗಿದ್ದಾರೆ.
2018ರ ನವೆಂಬರ್ನಲ್ಲಿ ಇಟಲಿಯ ಲೇಕ್ ಕೋಮೊದಲ್ಲಿ ಕೊಂಕಣಿ ಮತ್ತು ಸಿಂಧಿ ಪದ್ಧತಿಗಳ ಪ್ರಕಾರ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೊಂದು ಖಾಸಗಿ ಸಮಾರಂಭವಾಗಿತ್ತು. ನಂತರ ಭಾರತದಲ್ಲೂ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಪ್ರೇಮಪಕ್ಷಿಗಳ ವಿವಾಹ ಸಮಾರಂಭ ಪ್ರೀತಿ, ನಗು ಮತ್ತು ಮರೆಯಲಾಗದ ನೆನಪುಗಳನ್ನು ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಅದ್ಭುತ ಫೋಟೋಗಳೊಂದಿಗೆ ಅಭಿಮಾನಿಗಳನ್ನು ರಂಜಿಸಿದ್ದರು.
ಈ ಜೋಡಿಗೆ 2024ರ ವಿಶೇಷ:2024 ಈ ಜೋಡಿಗೆ ಬಹಳ ವಿಶೇಷ ಎಂದೇ ಹೇಳಬಹುದು. ಹೌದು, ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ತಮ್ಮ ಮೊದಲ ಮಗುವನ್ನು ಈ ಜಗತ್ತಿಗೆ ಸ್ವಾಗತಿಸಿದ್ದಾರೆ. ದೀಪ್ವೀರ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಹೊಸ ಅಧ್ಯಾಯ ಆರಂಭಿಸಿದ್ದಾರೆ. ಮಗಳ ಜನನದ ಘೋಷಣೆಯು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳ ಸಂತಸಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ತಿಳಿಸಿದ್ದರು. ಇದೀಗ ಸ್ಟಾರ್ ಕಪಲ್ನ ಅಪಾರ ಸಂಖ್ಯೆಯ ಅಭಿಮಾನಿಗಳು ಮಗುವಿನ ಮೊದಲ ನೋಟಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ಮಗು ತಾಯಿಯನ್ನು ಹೆಚ್ಚು ಹೋಲುತ್ತಾಳೋ ಅಥವಾ ತಂದೆಯನ್ನು ಹೆಚ್ಚು ಹೋಲುತ್ತಾಳೋ? ಎಂಬ ಬಗ್ಗೆಯೂ ಕುತೂಹಲ ವ್ಯಕ್ತಡಿಸುತ್ತಿದ್ದಾರೆ.