ಜನಪ್ರಿಯ ತಾರಾ ದಂಪತಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಅದೆಲ್ಲೇ ಹೋದರೂ ಎಲ್ಲರ ಗಮನ ಅವರ ಮೇಲಿರುತ್ತದೆ. ಈ ಪಾಪ್ಯುಲರ್ ಕಪಲ್ ತಮ್ಮ ಸೊಬಗು ಮತ್ತು ಪ್ರತಿಭೆಯಿಂದ ಜನರ ಗಮನವನ್ನು ಹೇಗೆ ಸೆಳೆಯಬೇಕು ಎಂಬುದನ್ನು ಬಹಳ ಚೆನ್ನಾಗಿಯೇ ತಿಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ನಟಿ ತನ್ನ ಸಹೋದರ ಸಿದ್ಧಾರ್ಥ್ ಚೋಪ್ರಾ ಅವರ ಪ್ರೀ ವೆಡ್ಡಿಂಗ್ ಈವೆಂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಸಂಜೆ ಸಂಗೀತ ಸಮಾರಂಭ ನಡೆದಿದ್ದು, ಪ್ರಿಯಾಂಕಾ ಅವರ ಪತಿ ತಮ್ಮ ಸಂಗೀತ ಪ್ರದರ್ಶನ ನೀಡಿದ್ದಾರೆ.
ಹಳ್ದಿ ಮತ್ತು ಮೆಹೆಂದಿ ಕಾರ್ಯಕ್ರಮದ ನಂತರ, ಸಿದ್ಧಾರ್ಥ್ ಚೋಪ್ರಾ ಅವರ ಸಂಗೀತ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಪ್ರಿಯಾಂಕಾ ಚೋಪ್ರಾ ಅವರ ಪತಿ, ಹಾಲಿವುಡ್ ಗಾಯಕ ನಿಕ್ ಜೋನಾಸ್ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ಪ್ರಿಯಾಂಕಾ ತಮ್ಮ ಪತಿ ಮತ್ತು ಅತ್ತೆ-ಮಾವಂದಿರೊಂದಿಗೆ ಪೋಸ್ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿದ್ಧಾರ್ಥ್ ಚೋಪ್ರಾ ಅವರ ಸಂಗೀತ ಸಮಾರಂಭದಿಂದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರಿ ಸದ್ದು ಮಾಡುತ್ತಿದೆ. ಫ್ಯಾನ್ಸ್ಪೇಜ್ಗಳು ಇನ್‌ಸ್ಟಾಗ್ರಾಮ್‌ನಲ್ಲಿ ತಾರಾ ದಂಪತಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿವೆ.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪವರ್ಫುಲ್ ಕಪಲ್ ತಮ್ಮ ಕಾರಿನಿಂದ ಇಳಿದು ಸಂಗೀತ ಸಮಾರಂಭದ ಸ್ಥಳದೆಡೆಗೆ ಹೋಗುವುದನ್ನು ವೈರಲ್ ವಿಡಿಯೋಗಳಲ್ಲಿ ಕಾಣಬಹುದು. ಸಮಾರಂಭದಲ್ಲಿ ಭಾಗವಹಿಸುವ ಮೊದಲು, ದಂಪತಿ ಪಾಪರಾಜಿಗಳು, ಮಾಧ್ಯಮಗಳಿಗೆ ಒಟ್ಟಿಗೆ ಪೋಸ್ ನೀಡಿದರು. ಅಲ್ಲದೇ ವಧು - ವರರು ಮತ್ತು ಪೋಷಕರೊಂದಿಗೂ ಫೋಟೋ ಕ್ಲಿಕ್ಕಿಸಿಕೊಂಡರು.