ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಇದೇ ಮೊದಲೆನ್ನುವಂತೆ ಸ್ಪರ್ಧಿಯೋರ್ವರು ಮನೆಯಿಂದ ಹೊರನಡೆದಿದ್ದಾರೆ. ಅದೂ ಕೂಡಾ ವೈಲ್ಡ್ ಕಾರ್ಡ್ ಸ್ಪರ್ಧಿ ಅನ್ನೋದು ಅಚ್ಚರಿಯ ವಿಷಯ. ಬಂದ ಒಂದೇ ವಾರಕ್ಕೆ ಕುಗ್ಗಿ, ಎರಡನೇ ವಾರಾಂತ್ಯ ಮನೆಯಿಂದ ಹೊರ ಹೋಗಿದ್ದಾರೆ. ಬಹುಮತಗಳಿಂದ ಸೇವ್ ಆಗಿದ್ದ ಶೋಭಾ ಶೆಟ್ಟಿ, ಸ್ವಯಂ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11'ಕ್ಕೆ ಎರಡು ವಾರಗಳ ಹಿಂದಷ್ಟೇ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಅದ್ಧೂರಿಯಾಗಿಯೇ ಇಬ್ಬರೂ ಮನೆ ಪ್ರವೇಶಿಸಿದ್ದರು. ತಮ್ಮ ನೇರನುಡಿ, ವಾದ-ವಿವಾದಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು ಕೂಡಾ. ಆದ್ರೆ, ಅನಾರೋಗ್ಯ ನಟಿಯ ಆಟಕ್ಕೆ ಅಡ್ಡಿಯಾಗಿದೆ.
ಎರಡನೇ ವಾರಾಂತ್ಯ ಮನೆಯಿಂದ ಹೊರನಡೆಯುತ್ತೇನೆಂದು ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ್ರೋ? ಇಲ್ವೋ? ಎಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಇದೀಗ ಅನಾವರಣಗೊಂಡಿರುವ ಪ್ರೋಮೋದಲ್ಲಿ ಶೋಭಾ ಶೆಟ್ಟಿ ಕಾಣಿಸಿಕೊಂಡಿಲ್ಲ. ಅಲ್ಲಿಗೆ, ಅವರು ಹೊರ ಬಂದಿದ್ದಾರೆ ಎಂದು ಪ್ರೇಕ್ಷಕರು ಅಂದಾಜಿಸಿದ್ದಾರೆ.
'ಐಶ್ವರ್ಯಗೆ ಕಾದಿದ್ಯಾ ಒಂದೊಳ್ಳೆ ಭವಿಷ್ಯ?' ಮತ್ತು 'ಸುದ್ದಿ ಆಗೋರು ಸುದ್ದಿ ಓದಿದ್ರೆ..?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಎರಡು ಪ್ರೋಮೋಗಳು ಅನಾವರಣಗೊಂಡಿದೆ. ಈ ಎರಡೂ ಪ್ರೋಮೋಗಳಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಕಾಣಿಸಿಕೊಂಡಿಲ್ಲ. ಹಾಗಾಗಿ ಅವರು ಮನೆಯಿಂದ ಹೊರಬಂದಿರೋದು ಬಹುತೇಕ ಖಚಿತವಾಗಿದೆ. ಐಶ್ವರ್ಯಾ ಮತ್ತು ಚೈತ್ರಾ ಕುಂದಾಪುರ ಅವರು ನ್ಯೂಸ್ ಆ್ಯಂಕರ್ಗಳಾಗಿ ಟಾಸ್ಕ್ ನಿಭಾಯಿಸಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಇದನ್ನೂ ಓದಿ:ಮಾಡದ ತಪ್ಪಿಗೆ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸುದೀಪ: ಮಾಣಿಕ್ಯನ ವ್ಯಕ್ತಿತ್ವದ ಗುಣಗಾನ
ಎರಡು ವಾರಗಳ ಹಿಂದೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಅದ್ಧೂರಿಯಾಗಿ ಮನೆಗೆ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಮೊದಲ ಎರಡ್ಮೂರು ದಿನ ತಮ್ಮ ದನಿ ಏರಿಸೋ ಮೂಲಕ ಸಖತ್ ಸದ್ದು ಮಾಡಿದ್ದರು. ಇಲ್ಲಿರುವವರ ಮುಖವಾಡ ಕಳಚುತ್ತೇನೆ, ಟಫ್ ಕಾಂಪಿಟೇಶನ್ ಕೊಡಲು ಬಂದಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೇ ಎರಡನೇ ದಿನ ಉಗ್ರಂ ಮಂಜು ಅವರ ಜೊತೆ ನಡೆದಿದ್ದ ವಾದ-ವಿವಾದ ಎಲ್ಲರ ಹುಬ್ಬೇರಿಸಿತ್ತು. ಉಗ್ರಮ ಮಂಜು ಮಾತಿನಲ್ಲಿ ಜಾಣ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಅವರ ಬಾಯಿ ಮುಚ್ಚಿಸುವ ಪ್ರಯತ್ನನ್ನು ಶೋಭಾ ಮಾಡಿದ್ದರು. ಆದ್ರೆ ಎರಡೇ ವಾರಕ್ಕೆ ಅವರು ತೆಗೆದುಕೊಂಡ ನಿರ್ಧಾರ ಮಾತ್ರ ಬಹುತೇಕರ ಆಶ್ಚರ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ರವಿಮಾಮನ ಹಳ್ಳಿಮೇಷ್ಟ್ರು ಸಹನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಅನೌನ್ಸ್: ಶೀರ್ಷಿಕೆಯೇ ಹೇಳುತ್ತಿದೆ ತಾರೆಯ ಜನಪ್ರಿಯತೆ
ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ, ಎಲಿಮಿನೇಟ್ ಆದ ಸ್ಪರ್ಧಿಗಳ ಪೈಕಿ ಶೋಭಾ ಶೆಟ್ಟಿ ಕೂಡಾ ಇದ್ರು. ಆದ್ರೆ ಅವರು ಹೆಚ್ಚಿನ ವೋಟ್ಸ್ ಮೂಲಕ ಬಹುಬೇಗನೇ ಸೇವ್ ಆದ್ರು. ಇವರ ನಂತರ ಚೈತ್ರಾ, ಶಿಶಿರ್, ಐಶ್ವರ್ಯಾ ಉಳಿದುಕೊಂಡಿದ್ದರು. ಆದ್ರೆ ಸೇವ್ ಆದ ಕೂಡಲೇ ನನ್ನಿಂದ ಇಲ್ಲಿ ಇರಲು ಆಗೋದಿಲ್ಲ ಅನಿಸುತ್ತಿದೆ ಎಂಬಂತಹ ಮಾತುಗಳನ್ನಾಡಲು ಶುರು ಮಾಡಿಕೊಂಡ್ರು. ಆದ್ರೆ ಹೆಚ್ಚು ಕುಗ್ಗಲು ಬಿಡದ ಸುದೀಪ್, ತಮ್ಮ ಸ್ಪೂರ್ತಿಯ ಮಾತುಗಳ ಮೂಲಕ ಅವರನ್ನು ಉಳಿಯುವಂತೆ ಮಾಡಿದ್ರು.
ನಂತರ ಚೈತ್ರಾ ಕುಂದಾಪುರ ಅವರು ಸೇವ್ ಆಗಿ ಶಿಶಿರ್, ಐಶ್ವರ್ಯಾ ಇಬ್ಬರಲ್ಲಿ ಒಬ್ಬರು ಹೊರಹೋಗಬೇಕು ಅನ್ನೋ ಸಂದರ್ಭ ಬಂದಾಗ ಮತ್ತೆ ಮಾತನಾಡಲು ಅವಕಾಶ ಕೊಡಿ ಎಂದು ಶೋಭಾ ಶೆಟ್ಟಿ ಕೇಳಿಕೊಂಡರು. ಅದಾಗ್ಯೂ ಕಿಚ್ಚ ಅವಕಾಶ ಕೊಡಲಿಲ್ಲ. ಸಾಕಷ್ಟು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶೋಭಾರಿಗೆ ಮಾತನಾಡಲು ಬಿಟ್ಟರು. ಮತ್ತೆ ಮನೆಯಿಂದ ಹೊರಹೋಗುತ್ತೇನೆಂದು ಹಠ ಹಿಡಿದಾಗ ಸುದೀಪ್ ಅಸಮಧಾನಗೊಂಡಿದ್ದಾರೆ. ನಂತರ ಶೋ ಮುಗಿಸಿದ್ದಾರೆ. ಮತಗಳನ್ನು ಹಾಕಿ ಬೆಂಬಲಿಸಿದ ಕನ್ನಡಿಗರಲ್ಲಿ ಸುದೀಪ್ ಕ್ಷಮೆಯಾಚಿಸಿದ್ದಾರೆ.