ಉತ್ತರಕಾಂಡದ 'ಮಾಲೀಕ' ಲುಕ್ ರಿವೀಲ್ (ETV Bharat) ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ 'ಉತ್ತರಕಾಂಡ'. ಬಹುಬೇಡಿಕೆಯ ನೋಟವೊಂದನ್ನು ಇಂದು ಚಿತ್ರತಂಡ ರಿಲೀಸ್ ಮಾಡಿದೆ. ನಾಳೆ ಶಿವ ರಾಜ್‌ಕುಮಾರ್ ಹುಟ್ಟುಹಬ್ಬ. ಬರ್ತ್‌ಡೇಗೆ ನಟ ಮುಖ್ಯಭೂಮಿಕೆ ವಹಿಸಿರುವ 'ಭೈರತಿ ರಣಗಲ್' ಹಾಗೂ '45' ಚಿತ್ರತಂಡದಿಂದ ವಿಶೇಷ ಉಡುಗೊರೆ ರೆಡಿಯಾಗಿದೆ. ಉತ್ತರಕಾಂಡ ಚಿತ್ರದಲ್ಲೂ ಪ್ರಮುಖ ಪಾತ್ರವೊಂದನ್ನು ವಹಿಸಿದ್ದು, ಜನ್ಮದಿನಕ್ಕೂ ಒಂದು ದಿನ ಮುನ್ನವೇ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿ ವಿಶೇಷವಾಗಿ ಶುಭ ಕೋರಿದೆ.
'ಮಾಲೀಕ'ನ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದೆ. ಸಿನಿಮಾದಲ್ಲಿ ಅವರ ಪಾತ್ರ ಹೇಗಿರಬಹುದು ಎಂದು ಸಿನಿಪ್ರಿಯರು, ಅಪಾರ ಸಂಖ್ಯೆಯ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಪ್ರತೀ ಪಾತ್ರದಲ್ಲೂ ವಿಶಿಷ್ಟವಾಗಿ ಕಾಣಿಸಿಕೊಳ್ಳುವ ಹ್ಯಾಟ್ರಿಕ್ ಹೀರೋ, ಇದೀಗ ಉತ್ತರಕಾಂಡದಲ್ಲೂ ತಮ್ಮ ವಿಭಿನ್ನ ನೋಟದ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಶಿವಣ್ಣನ ನೋಟವುಳ್ಳ ಪೋಸ್ಟರ್ ಹಂಚಿಕೊಂಡ ಡಾಲಿ ಧನಂಜಯ್, 'ಕನ್ನಡದ ಹೃದಯಗಳ ಮಾಲೀಕನಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಾಳೆ ಶಿವ ರಾಜ್‌ಕುಮಾರ್ ಬರ್ತ್ಡೇ: ಅಭಿಮಾನಿಗಳಿಗೆ '45' ಪ್ರೇಮದ ಕಾಣಿಕೆ - 45 Cinema First Look
ಬಹು ಪ್ರಮುಖ ತಾರಾಗಣ ಹೊಂದಿರುವ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಅಲ್ಲದೇ ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿದ್ದಾರೆ. ಭಾವನಾ ಮೆನನ್, ಐಶ್ವರ್ಯಾ ರಾಜೇಶ್, ದಿಗಂತ್ ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ:100 ವರ್ಷದ ಮನೆಯಲ್ಲಿ 'ಫಾದರ್' ಚಿತ್ರೀಕರಣ: ತಂದೆ-ಮಗನ ಪಾತ್ರದಲ್ಲಿ ಪ್ರಕಾಶ್ ರಾಜ್, ಡಾರ್ಲಿಂಗ್ ಕೃಷ್ಣ - Father Shooting
ಉತ್ತರಕಾಂಡ ಈ ವರ್ಷದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾವಾಗಿದ್ದು, ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಖ್ಯಾತ ಗಾಯಕ, ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅಧ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.