ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಸಿನಿಮಾ ಕೆಲಸಗಳು ಬಿರುಸಿನಿಂದ ಸಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರ ಕಾತರ ಹೆಚ್ಚಾಗಿದೆ. ಈ ಸಿನಿಮಾ ಬಿಡುಗಡೆಗೆಗೂ ಮುನ್ನ ಬಹುಬೇಡಿಕೆ ನಟನ ಹೊಸ ಎರಡು ಸಿನಿಮಾಗಳು ಘೋಷಣೆಯಾಗಿವೆ. ಇತ್ತೀಚೆಗಷ್ಟೇ 'ಜೈ ಹನುಮಾನ್' ಸಿನಿಮಾ ಅನೌನ್ಸ್ ಆಗಿತ್ತು. ಇದೀಗ 'ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರ ಘೋಷಣೆಯಾಗಿದೆ. ಇದು ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿರುವ ತೆಲುಗು ಚಿತ್ರರಂಗದ 'ಜೈ ಹನುಮಾನ್' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಡಿವೈನ್ ಸ್ಟಾರ್ 'ಛತ್ರಪತಿ ಶಿವಾಜಿ ಮಹಾರಾಜ್' ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾವೀಗ ಅಧಿಕೃತವಾಗಿ ಘೋಷಣೆಯಾಗಿದೆ.
ಪೋಸ್ಟರ್ ಅನಾವರಣ:ಸಂದೀಪ್ ಸಿಂಗ್ ನಿರ್ದೇಶನದ ಹಿಸ್ಟಾರಿಕಲ್ ಡ್ರಾಮಾದಲ್ಲಿ ಡಿವೈನ್ ಸ್ಟಾರ್ ಮುಖ್ಯಭೂಮಿಕೆಯಲ್ಲಿದ್ದು, ಗಮನಾರ್ಹ ಪೋಸ್ಟರ್ ಕೂಡಾ ಅನಾವರಣಗೊಂಡಿದೆ. ಶಿವಾಜಿ ಮಹಾರಾಜರ ನೋಟದಲ್ಲಿ ಖಡ್ಗ ಹಿಡಿದು ಕಾಂತಾರ ನಟ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದೆ.
ಇಂದೇ ಬಿಡುಗಡೆ ದಿನಾಂಕ ರಿವೀಲ್:ಪೋಸ್ಟರ್ ಅಷ್ಟೇ ಅಲ್ಲ, ಸಿನಿಮಾದ ಬಿಡುಗಡೆ ದಿನಾಂಕವೂ ಇಂದೇ ರಿವೀಲ್ ಆಗಿದೆ. 'ಛತ್ರಪತಿ ಶಿವಾಜಿ ಮಹಾರಾಜ್' 2027ರ ಜನವರಿ 21ರಂದು ಬಿಡುಗಡೆ ಆಗುವುದಾಗಿ ರಿಷಬ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ರವಿಮಾಮನ ಹಳ್ಳಿಮೇಷ್ಟ್ರು ಸಹನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಅನೌನ್ಸ್: ಶೀರ್ಷಿಕೆಯೇ ಹೇಳುತ್ತಿದೆ ತಾರೆಯ ಜನಪ್ರಿಯತೆ
ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ದೇಶಕ ಸಂದೀಪ್ ಸಿಂಗ್ ಮತ್ತು ಕನ್ನಡದ ಖ್ಯಾತ ನಟ ರಿಷಬ್ ಶೆಟ್ಟಿ ಇಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ 'ಛತ್ರಪತಿ ಶಿವಾಜಿ ಮಹಾರಾಜ್' ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಜೊತೆಗೆ, ಭಾರತದ ಹೆಮ್ಮ, ಭಾರತದ ಮಹಾನ್ ಯೋಧ ರಾಜನ ಮಹಾಕಾವ್ಯವನ್ನು ಪ್ರಸ್ತುತಪಡಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ. 'ಛತ್ರಪತಿ ಶಿವಾಜಿ ಮಹಾರಾಜ್'. ಇದು ಕೇವಲ ಸಿನಿಮಾವಲ್ಲ. ಎಲ್ಲ ಸವಾಲುಗಳ ವಿರುದ್ಧ ಹೋರಾಡಿದ, ಮೊಘಲ್ ಸಾಮ್ರಾಜ್ಯದ ಶಕ್ತಿಗೆ ಸವಾಲು ಹಾಕಿದ ಮತ್ತು ಎಂದಿಗೂ ಮರೆಯಲಾಗದ ಪರಂಪರೆಯನ್ನು ಸೃಷ್ಟಿಸಿದ ಯೋಧನನ್ನು ಗೌರವಿಸುವ ಕ್ಷಣ. ಛತ್ರಪತಿ ಶಿವಾಜಿ ಮಹಾರಾಜರ ಅನ್ಟೋಲ್ಡ್ ಸ್ಟೋರಿಯನ್ನು ನಾವು ಹೇಳಲೊರಟಿದ್ದೇವೆ. ಆ್ಯಕ್ಷನ್ ಡ್ರಾಮಾಕ್ಕೆ ಸಿದ್ಧರಾಗಿ. 2027ರ ಜನವರಿ 21ರಂದು ಜಾಗತಿಕ ಮಟ್ಟದಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಚಿತ್ರರಂಗಕ್ಕೆ ವಿದಾಯ ಘೋಷಿಸಿದ '12th ಫೇಲ್' ನಟ ವಿಕ್ರಾಂತ್ ಮಸ್ಸೆ ಆಸ್ತಿಯೆಷ್ಟು?
ಮುಂದಿನ ಅಕ್ಟೋಬರ್ಗೆ ಕಾಂತಾರ ಬಿಡುಗಡೆ: ಪ್ರಸ್ತುತ ರಿಷಬ್ ಶೆಟ್ಟಿ 'ಕಾಂತಾರ ಅಧ್ಯಾಯ 1' ಸಲುವಾಗಿ ಸುದ್ದಿಯಲ್ಲಿದ್ದಾರೆ. 2022ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಕಾಂತಾರದ ಪ್ರೀಕ್ವೆಲ್ ಇದು. 2025ರ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. 'ಕಾಂತಾರ' ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಖ್ಯಾತಿ ಹೆಚ್ಚಿದ್ದು, ಮುಂದಿನ ಚಿತ್ರಗಳ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿವೆ.